ಚಿಕ್ಕಮಗಳೂರು :ಹಾಸನದಲ್ಲಿ ಹೃದಯಾಘಾತದಿಂದ ಸರಣಿ ಸಾವು ಮುಂದುವರೆದಿದ್ದು ಅದೇ ರೀತಿ ಕಾಫಿನಾಡಲ್ಲಿ ಒಂದೇ ದಿನ ಹೃದಯಾಘಾತದಿಂದ ಇಬ್ಬರ ಸಾವನ್ನಪ್ಪಿದ್ದಾರೆ.
ಹೌದು .. ಮೂಡಿಗೆರೆ ತಾಲೂಕಿನಲ್ಲಿ 27 ವರ್ಷದ ಮೀನಾಕ್ಷಿ ಮತ್ತು 75 ವರ್ಷದ ಸುಮಿತ್ರೇಗೌಡ ಸಾವನ್ನಪ್ಪಿದ್ದಾರೆ. ಇಬ್ಬರು ಮೂಡಿಗೆರೆ ತಾಲೂಕಿನ ಭಾರತೀಬೈಲು, ಬಿ.ಹೊಸಳ್ಳಿಯ ನಿವಾಸಿಗಳಾಗಿದ್ದರು.
ಎದೆ ಉರಿ ಎಂದು ಶನಿವಾರ ಸಂಜೆ ಆಸ್ಪತ್ರೆಗೆ ದಾಖಲಾಗಿದ್ದ ಯುವತಿ ಮಳೆಯಿಂದ ರಸ್ತೆಗೆ ಮರ ಬಿದ್ದ ಕಾರಣ ಆಸ್ಪತ್ರೆಗೆ ಬರುವಾಗಲೂ ಅರ್ಧ ಗಂಟೆ ಲೇಟ್ ಆಗಿತ್ತು. ಎರಡು ದಿನದಿಂದ ಎದೆಯೂರಿ ಎಂದು ಹೇಳುತ್ತಿದ್ದ ಯುವತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲೋ ಬಿಪಿ ಎಂದು ಹೇಳಿದ್ದರು ಆದರೆ ಶನಿವಾರ ಎದೆ ನೋವು ಜಾಸ್ತಿಯಾಗಿದ್ದರಿಂದ ಆಸ್ಪತ್ರೆಗೆ ದಾಖಲಾಗಲು ಬರುತ್ತಿರುವಾಗಲೇ ಹೃದಯಾಘಾತದಿಂದ ದಾರಿ ಮಧ್ಯಯೇ ಸಾವನ್ನಪ್ಪಿದ್ದಾಳೆ.
ಹಾಗೆ ಮನೆಯಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದ ಬಿ.ಹೊಸಳ್ಳಿ ಗ್ರಾಮದ 75 ವರ್ಷದ ಸುಮಿತ್ರೇಗೌಡ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಹಾಸನ ಜಿಲ್ಲೆಯಂತೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೂಡ ದಿನಿ ದಿನೇ ಹೈದಯಾಘಾತಗಳು ಆಗುತ್ತಿದ್ದು ಜನರಲ್ಲಿ ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ.