Wednesday, March 25, 2026
Homeಕ್ರೈಮ್ಉಡುಪಿ: ಗ್ಯಾಸ್ ಕೊರತೆಯಿಂದ ಹೋಟೆಲ್ ಬಂದ್‌ : ಮೀನು ವ್ಯಾಪಾರಕ್ಕೆ ಬಿತ್ತು ಹೊಡೆತ !

ಉಡುಪಿ: ಗ್ಯಾಸ್ ಕೊರತೆಯಿಂದ ಹೋಟೆಲ್ ಬಂದ್‌ : ಮೀನು ವ್ಯಾಪಾರಕ್ಕೆ ಬಿತ್ತು ಹೊಡೆತ !

ಮಂಗಳೂರು : ವಾಣಿಜ್ಯ ಅಡುಗೆ ಅನಿಲದ ವ್ಯತ್ಯಯದಿಂದಾಗಿ ಮೀನುಗಾರಿಕೆಗೆ ಹೊಡೆತ ಬಿದ್ದಿದೆ. ಮೀನುಗಾರರು ಆಳಸಮುದ್ರಕ್ಕೆ ಮೀನುಗಾರಿಕೆಗೆ ತೆರಳಲು ಸಾಧ್ಯವಾಗದ ಪರಿಸ್ಥಿತಿ ಒಂದೆಡೆಯಾದರೆ, ಇನ್ನೊಂದೆಡೆ ಗ್ಯಾಸ್ ಅಭಾವದಿಂದ ಬಹುತೇಕ ಮೀನು ಊಟದ ಹೊಟೇಲ್‌ ಗಳು ಬಂದ್ ಆಗಿರುವುದರಿಂದ ಮೀನಿಗೆ ಬೇಡಿಕೆ ಕಡಿಮೆಯಾಗಿ ಮೀನು ಮಾರಾಟ ಮಾಡುವ ಮಹಿಳೆಯರು ವ್ಯಾಪಾರ ಇಲ್ಲದೆ ಸಂಕಷ್ಟ ಎದುರಿಸುತ್ತಿದ್ದಾರೆ.

ಪ್ರತೀದಿನ ಲಕ್ಷಾಂತರ ರೂ. ಗಳ ಮೀನು ಖರೀದಿಸುತ್ತಿದ್ದ ಹೋಟೆಲ್‌ ಗಳ ಮಾಲೀಕರು ಈಗ ಮಾರುಕಟ್ಟೆಗೆ ಬರುತ್ತಿಲ್ಲ. ಇದರಿಂದ ಮೀನುಗಾರ ಮಹಿಳೆಯರ ದಿನದ ವ್ಯಾಪಾರಕ್ಕೆ ಭಾರೀ ಹೊಡೆತ ಬಿದ್ದಿದೆ. ಇದರಿಂದ ಮಾರುಕಟ್ಟೆಯಲ್ಲಿ ಕೆಲವೊಂದು ದುಬಾರಿ ಮೀನಿನ ದರ ಸುಮಾರು 100ರಿಂದ 150 ರೂ. ಗಳಷ್ಟು ಇಳಿಕೆಯಾಗಿದೆ. ಗ್ಯಾಸ್ ಅಭಾವಕ್ಕೂ ಮುನ್ನ ನಗರ ಹಾಗೂ ಗ್ರಾಮೀಣ ಪ್ರದೇಶದ ಬಹುತೇಕ ಎಲ್ಲ ಹೊಟೇಲ್‌ಗಳಿಗೆ ಪ್ರತೀದಿನ ಟನ್‌ಗಟ್ಟಲೆ ಮೀನುಗಳು ಪೂರೈಕೆಯಾಗುತ್ತಿದ್ದವು. ಆದರೆ ಕಳೆದ ಎರಡು ವಾರಗಳಿಂದ ಗ್ಯಾಸ್ ಅಭಾವದಿಂದ ಬಹುತೇಕ ಮೀನಿನ ಹೊಟೇಲುಗಳು ಬಂದ್ ಆಗಿವೆ.

ಗ್ಯಾಸ್‌ ಲಭ್ಯವಿಲ್ಲದೆ ಹೆಚ್ಚಿನ ಮೀನು ಊಟದ ಹೋಟೆಲ್ ಗಳು ಮುಚ್ಚಿವೆ. ಇದರಿಂದ ಮೀನು ಮಾರಾಟದ ಮೇಲೂ ಹೊಡೆತ ಬಿದ್ದಿವೆ. ರಖಂ ವ್ಯಾಪಾರ ಈಗ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಶೇ. 40ರಷ್ಟು ವ್ಯಾಪಾರ ಕುಂಠಿತಗೊಂಡಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಭಾರೀ ನಷ್ಟ ಉಂಟಾಗುವ ಭೀತಿ ಇದೆ ಅಂತಾರೆ ವ್ಯಾಪಾರಸ್ಥರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!