Friday, February 13, 2026
Homeಜಿಲ್ಲಾಸುದ್ದಿಚಿಕ್ಕಮಗಳೂರು: ಶಿಕ್ಷಣ ಸಚಿವರೇ ಎಲ್ಲಿದ್ದೀರಾ?: ಬಿರುಗಾಳಿಗೆ ಹಾರಿ ಹೋಯ್ತು ಸರ್ಕಾರಿ ಶಾಲೆಯ ಮೇಲ್ಛಾವಣಿ ಹೆಂಚುಗಳು!

ಚಿಕ್ಕಮಗಳೂರು: ಶಿಕ್ಷಣ ಸಚಿವರೇ ಎಲ್ಲಿದ್ದೀರಾ?: ಬಿರುಗಾಳಿಗೆ ಹಾರಿ ಹೋಯ್ತು ಸರ್ಕಾರಿ ಶಾಲೆಯ ಮೇಲ್ಛಾವಣಿ ಹೆಂಚುಗಳು!

ಚಿಕ್ಕಮಗಳೂರು : ಕಾಫಿನಾಡ ಬಯಲುಸೀಮೆ ಭಾಗದಲ್ಲಿ ತಪ್ಪಿದ ಭಾರೀ ಅನಾಹುತ ಭಾರೀ ಪ್ರಮಾಣದ ಬಿರುಗಾಳಿಯಿಂದಾಗಿ ಶಾಲೆಯ ಮೇಲ್ಛಾವಣಿ ಹೆಂಚುಗಳು ಹಾರಿ ಪುಡಿಯಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಬೆಳವಾಡಿ ಸರ್ಕಾರಿ ಶಾಲೆಯಲ್ಲಿ ನಡೆದಿದೆ.

ಬಿರುಗಾಳಿಗೆ ಬೆಳವಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಛಾವಣಿ ಹಾರಿ ಹೋಗಿವೆ. ಮಧ್ಯಾಹ್ನ ಊಟದ ಸಮಯವಾದ್ದರಿಂದ ಮಕ್ಕಳು ಊಟಕ್ಕೆ ಹೊರಗೆ ಬಂದಿದ್ದರಿಂದ ತಪ್ಪಿದ ಭಾರೀ ಅನಾಹುತ ಆದರೂ ಹೆಂಚುಗಳು ಬಿದ್ದು ಇಬ್ಬರು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಸ್ಥಳಕ್ಕೆ ಗ್ರಾಮ ಪಂಚಾಯತ್‌ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಕಳಪೆ ಕಾಮಗಾರಿಯಿಂದ ಶಾಲೆಯ ಮೇಲ್ಛಾವಣಿ ಹೆಂಚುಗಳು ಹಾರಿ ಹೋಗಿರುವ ಶಂಕೆ ವ್ಯಕ್ತವಾಗಿದೆ.

ಶಿಕ್ಷಣ ಸಚಿವರೇ ಎಲ್ಲಿದ್ದೀರಾ ಸರ್ಕಾರಿ ಶಾಲೆಗಳ ಬಗ್ಗೆ ಭಾರೀ ಕಳವಳ ವ್ಯಕ್ತ ಪಡಿಸುವ ನೀವು ಇಂತಹ ಸನ್ನಿವೇಶಗಳು ಇದ್ದಕ್ಕಿದ್ದಂತೆ ಆದಾಗ ಮಕ್ಕಳ ಸ್ಥಿತಿ ಏನಾದರೂ ಆದರೆ ಯಾರು ಇದಕ್ಕೆಲ್ಲಾ ಹೊಣೆ ಇನ್ಮುಂದೆ ಆದರೂ ಎಚ್ಚೆತ್ತುಕೊಂಡು ರಾಜ್ಯದಲ್ಲಿರುವ ಸರ್ಕಾರಿ ಶಾಲೆಗಳ ಬಗ್ಗೆ ಅಧಿಕಾರಿಗಳ ಜೊತೆ ಮಾತನಾಡಿ ಮಾಹಿತಿಯನ್ನು ಪಡೆದುಕೊಳ್ಳಿ ಆಗಲಾದರೂ ಇಂತಹ ಸನ್ನಿವೇಶಗಳು ಬಾರದೆ ಇರುವ ಹಾಗೆ ನೋಡಿಕೊಳ್ಳಬಹುದು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!