ಕೊಪ್ಪ: ಕೃಷಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ಕಾಡುಕೋಣ ದಾಳಿ ನಡೆಸಿದ ಘಟನೆ ಕೊಪ್ಪದ ಶಾನುವಳ್ಳಿ ಎಂಬಲ್ಲಿ ನಡೆದಿದೆ.

ಹೌದು .. ಭಾನುವಾರ ಶಾನುವಳ್ಳಿಯ ಧ್ರುವ ಎಂಬುವವರ ತೋಟದಲ್ಲಿ ವಿಠಲ ಪೂಜಾರಿ ಎಂಬುವವರು ಕೃಷಿ ಕೆಲಸ ಮಾಡುತ್ತಿದ್ದಾಗ ಕಾಡುಕೋಣ ದಾಳಿ ನಡೆಸಿದೆ.
ಈ ವೇಳೆ ವಿಠಲ ಪೂಜಾರಿ ಅವರ ತಲೆ, ಸೊಂಟ ಹಾಗೂ ಕಾಲಿಗೆ ಪೆಟ್ಟಾಗಿದೆ. [ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗಿದೆ.
ಆಸ್ಪತ್ರೆಗೆ ಅರಣ್ಯ ಇಲಾಖೆ ಅಧಿಕಾರಿ ಭೇಟಿ ನೀಡಿದ್ದು ಗಾಯಾಳುವಿನ ಆರೋಗ್ಯ ವಿಚಾರಿಸಿದ್ದಾರೆ.