ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನ ವಡೂರು ಗ್ರಾಮದಲ್ಲಿ ಕಳೆದೆರಡು ತಿಂಗಳಿಂದ ಮೂರು ಕಾಡಾನೆಗಳು ಬೀಡು ಬಿಟ್ಟಿದ್ದು ಗ್ರಾಮದ ರೈತರ ತೋಟ, ಗದ್ದೆಗಳ ಮೇಲೆ ಹಾನಿ ಮಾಡುತ್ತಿದ್ದು ಇದರಿಂದ ಬೇಸತ್ತು ಗ್ರಾಮಸ್ಥರು ಕಂಗಲಾಗಿ ಹೋಗಿದ್ದಾರೆ
ಬೇಲೂರು ತಾಲೂಕಿನಲ್ಲಿ ಕಾಡಾನೆ ಸೆರೆ ಕಾರ್ಯಚರಣೆ ವೇಲೆ ಬೇರ್ಪಟ್ಟ ಮೂರು ಕಾಡಾನೆಗಳು ಗ್ರಾಮದ ಕಾಫಿ ತೋಟಗಳ ಮೇಲೆ ದಾಳಿ ನಡೆಸಿದ್ದಲ್ಲದೇ ತೆಂಗು ಬಾಳೆ ಅಡಿಕೆ ಫಸಲನ್ನು ತಿಂದು ನಾಶಪಡಿಸುತ್ತಿವೆ ಹಾಗೆ ಶಾಲಾ ಮಕ್ಕಳು ಭಯದಿಂದ ಶಾಲೆಗೆ ಹೋಗದೆ ಮನೆಯಲ್ಲೇ ಉಳಿಯಬೇಕಾದ ಪರಿಸ್ಥಿತಿ ಕೂಡ ಉಂಟಾಗಿದೆ
ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮದಲ್ಲಿ ಸುಮಾರು ಮೂರು ತಿಂಗಳಿನಿಂದ ಬೀಡು ಬಿಟ್ಟ ಕಾಡಾನೆಗಳನ್ನ ಓಡಿಸಬೇಕಾಗಿ ಗ್ರಾಮಸ್ಥರು ಮನವಿ ಮಾಡಿದ್ದರೂ ಸ್ಪಂದಿಸದೇ ಇರುವುದರಿಂದ ಅರಣ್ಯಾಧಿಕಾರಿಗಳ ವಿರುದ್ಧ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.