ಮೂಡಿಗೆರೆ: ಇತ್ತೀಚೆಗೆ ಹೃದಯಾಘಾತದಿಂದ ಸಾಯುವವರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಲೇ ಇದ್ದಿದ್ದು ಇಲ್ಲೋಬ್ಬ ಮಹಿಳೆ ಮನೆ ಬಾಗಿಲ ಬಳಿ ಮೃತದೇಹ ಪತ್ತೆಯಾಗಿದ್ದು ಹೃದಯಾಘಾತದಿಂದ ಸಾವನ್ನಪ್ಪಿರಬಹುದೆಂದು ಹೇಳಲಾಗಿದೆ.

ಹೌದು ..ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಮುತ್ತಿಗೆಪುರ ಗ್ರಾಮದಲ್ಲಿ ಹೃದಯಾಘಾತದಿಂದ ಲಲಿತಾ(50) ಮೃತಪಟ್ಟಿರುವ ಮಹಿಳೆಯಾಗಿದ್ದು ಆದರೆ ಮನೆ ಬಾಗಿಲ ಬಳಿ ಲಲಿತಾ ಮೃತದೇಹ ಪತ್ತೆಯಾಗಿದ್ದು ಎಲ್ಲರ ಅನುಮಾನಕ್ಕೆ ದಾರಿಯಾಗಿದೆ.
ಪತಿ ಗೋಪಾಲ್ ರಾತ್ರಿ ಕಾರು ಬಾಡಿಗೆಗಾಗಿ ಮನೆ ಬಿಟ್ಟು ಹೊರ ಹೋಗಿದ್ದರಿಂದ ಗೃಹಿಣಿ ಲಲಿತಾ ಮನೆಯಲ್ಲಿಯೇ ಒಂಟಿಯಾಗಿದ್ದರು. ಪಕ್ಕದ ಮನೆಯವರು ಬೆಳಗ್ಗೆ ಗೃಹಿಣಿಯ ಶವವನ್ನು ಕಂಡು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಆದರೆ ಮೃತಳ ಪೋಷಕರು ಪತಿ ಗೋಪಾಲ್ ಅವರೇ ಹತ್ಯೆ ಮಾಡಿರಬಹುದು ಎಂಬ ಶಂಕೆಯೊಂದಿಗೆ ಪೊಲೀಸರಿಗೆ ದೂರು ನೀಡಿದ್ದರು.
ಮೃತದೇಹವನ್ನು ಚಿಕ್ಕಮಗಳೂರು ಮಲ್ಲೇಗೌಡ ಸರ್ಕಾರಿ ಜಿಲ್ಲಾಸ್ಪತ್ರೆಗೆ ಕೊಂಡೊಯ್ದು ಮರಣೋತ್ತರ ಪರೀಕ್ಷೆ ನಡೆಸಿದ್ದು, ಆಗ ಪರೀಕ್ಷೆಯಲ್ಲಿ ಹೃದಯಾಘಾತವೇ ಸಾವಿಗೆ ಕಾರಣ ಎಂದು ವೈದ್ಯಕೀಯ ವರದಿ ಸ್ಪಷ್ಟಪಡಿಸಿದೆ.