ಸೋಮವಾರ ಕೊಪ್ಪ ಅರಣ್ಯ ವಿಭಾಗದ ಹುಣಸೆಹಳ್ಳಿ, ಮಲ್ಲಿಗೆಖಾನ್ ಪ್ರದೇಶದಲ್ಲಿ ಸಂಭವಿಸಿದ ಕಾಡಾನೆ ದಾಳಿಗೆ ಹಾವೇರಿ ಮೂಲದ ಕೂಲಿ ಕಾರ್ಮಿಕರೊಬ್ಬರು ಬಲಿಯಾಗಿದ್ದು, ಬಾಳೆಹೊನ್ನೂರು ಆರ್.ಎಫ್.ಓ ಕಛೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಸ್ಥಳಕ್ಕೆ ಡಿ.ಎಫ್.ಓ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಭೇಟಿ ನೀಡಿ, ಈಗಾಗಲೇ ಬಾಳೆಹೊನ್ನೂರು ಭಾಗಕ್ಕೆ ಒಂದು ಹಾಗೂ ನರಸಿಂಹರಾಜಪುರ ಭಾಗಕ್ಕೆ ಒಂದೊಂದು ಶಾಶ್ವತ ಇಟಿಎಫ್ ತುಕಡಿ ನಿಯೋಜನೆ ಮಾಡಿರುವುದಾಗಿ ತಿಳಿಸಿದರು.ಹಾಗೂ ಎರಡು ಆನೆ ಹಿಡಿಯಲು ಪ್ರಸ್ತಾವನೆ ಅರಣ್ಯ ಭವನದ ಹಂತದಲ್ಲಿ ಇದ್ದು ಶೀಘ್ರವಾಗಿ ಆನೆ ಹಿಡಿಯಲಾಗುವುದು ಎಂದರು. ಹಾಗೂ ಪರಿಹಾರದ ಮೊತ್ತ 20 ಲಕ್ಷವನ್ನು ಕುಟುಂಬಕ್ಕೆ ನೀಡಲಾಗುವುದು ಎಂದರು.
ಹಾಗೂ ಅನಿವಾರ್ಯ ಕಾರಣದಿಂದ ಜಿಲ್ಲಾಧಿಕಾರಿಗಳು ಆಗಮಿಸದಿದ್ದುದಕ್ಕೆ, ಹೆಚ್ಚುವರಿ ಇಟಿಎಫ್ ತುಕಡಿ ಹಾಗೂ ಆನೆ ಬೇಲಿ ಬೇಡಿಕೆ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಜಿಲ್ಲಾಧಿಕಾರಿ ಗಳೊಂದಿಗೆ ಮಾತನಾಡಿದಾಗ ಜಿಲ್ಲಾಧಿಕಾರಿಗಳು ಸಮಸ್ಯೆಗೆ ಸ್ಪಂದಿಸುವುದಾಗಿ ತಿಳಿಸಿದರು.

ಹಾಗೆಯೇ ಎರಡು ವಾರದೊಳಗೆ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು ಹಾಗೂ ಅರಣ್ಯ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಸಮ್ಮುಖದಲ್ಲಿ ಬಾಳೆಹೊನ್ನೂರು ಭಾಗದಲ್ಲಿ ಜನಸ್ಪಂದನ ಸಭೆಯನ್ನು ಆಯೋಜನೆ ಮಾಡುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದರು.
ಈ ಎಲ್ಲಾ ಬೇಡಿಕೆಗಳನ್ನು/ನಿರ್ಧಾರಗಳನ್ನು ಸ್ಥಳೀಯ ರೈತರ ನಿರ್ಧಾರಗಳ ಆಧಾರದ ಮೇಲೆ ಕೈಗೊಳ್ಳಲಾಯಿತು, ಅದಕ್ಕೆ ಬೆಂಬಲವಾಗಿ ಸಮಿತಿಯು ಹೋರಾಟದಲ್ಲಿ ಭಾಗಿಯಾಯಿತು
