ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ತಾಲೂಕುಗಳಲ್ಲಿ ಕಾಡಾನೆ ಮತ್ತು ಮಾನವ ಸಂಘರ್ಷ ಮತ್ತೆ ಮುಂದುವರೆದಿದ್ದು ಎನ್.ಆರ್ ಪುರ ತಾಲೂಕಿನ ಬನ್ನೂರಿನಲ್ಲಿ ಕಾಡಾನೆ ದಾಳಿಗೆ ಮಹಿಳೆ, ಬಲಿಯಾಗಿರೋದನ್ನ ಖಂಡಿಸಿ ಬಾಳೆಹೊನ್ನೂರಿನಲ್ಲಿ ಅರಣ್ಯ ಕಚೇರಿ ಎದುರು ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ.
ಹೌದು .. ಕಾಡಾನೆಗಳ ಹಾವಳಿ ವಿಪರೀತವಾಗಿದ್ದು ಕೆಲ ತಿಂಗಳಿನಲ್ಲಿ ಮನುಷ್ಯರ ಮೇಲೆ ದಾಳಿ ಸ್ವಲ್ಪ ಕಡಿಮೆಯಾಗಿತ್ತು ಈಗ ಮತ್ತೆ ಕಾಡಾನೆಗಳು ದಾಳಿ ಮಾಡಲು ಪ್ರಾರಂಭಿಸಿವೆ.ಮೂಡಿಗೆರೆ ತಾಲೂಕಿನಲ್ಲಿ ಅಂತೂ ಹಿಂಡೂ ಹಿಂಡಾಗಿ ಲಗ್ಗೆ ಇಟ್ಟಿದ್ದು ಜನ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ.
ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ಶೃಂಗೇರಿ ಕ್ಷೇತ್ರ ಹಾಗೂ ಕ್ಷೇತ್ರದ ಎಲ್ಲಾ ರೈತ ಕಾರ್ಮಿಕ ಇತರೆ ಸಂಘಟನೆಗಳ, ಮತ್ತು ಎಲ್ಲಾ ನಾಗರಿಕರ ಸಹಯೋಗದೊಂದಿಗೆ ತಕ್ಷಣಕ್ಕೆ ಬಾಳೆಹೊನ್ನೂರು ಅರಣ್ಯ ಇಲಾಖೆಯ ಕಚೇರಿ ಎದುರು ಪ್ರತಿಭಟನೆಗೆ ಕರೆ ನೀಡಲಾಗಿದೆ.
ಈ ರೀತಿ ಯಾವಾಗಲೂ ಕಾಡಾನೆ ದಾಳಿಗೆ ಮನುಷ್ಯರು ಬಲಿಯಾಗುತ್ತಿದ್ದರೆ ಮಲೆನಾಡಲ್ಲಿ ಬದುಕುವುದು ಹೇಗೆ ಎಂದು ಅಲ್ಲಿನ ಸಾರ್ವಜನಿಕರು ಅರಣ್ಯಾಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.