ಮೂಡಿಗೆರೆ :ವಿವಿಧ ಕಾಲೇಜುಗಳಲಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತಿಗೊಂಡ ಶಿಕ್ಷಕರಿಗೆ ಹಳೇ ವಿದ್ಯಾರ್ಥಿಗಳಿಂದ ಮೂಡಿಗೆರೆಯ ಡಿಎಸ್ ಬಿಜಿ ಕಾಲೇಜಿನಲ್ಲಿ ಗೌರವ ಸಮರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಹಾಗೆ ನಿವೃತ್ತಿಯ ಹೊಸ ಅಧ್ಯಾಯಕ್ಕೆ ಕಾಲಿಟ್ಟ ಪೂಜ್ಯನಿಯ ಗುರುಗಳಿಗೆ ಹಳೇ ವಿದ್ಯಾರ್ಥಿಗಳು ಸನ್ಮಾನಿಸಿ ಗೌರವ ಸಮರ್ಪಿಸಿ ಹೃದಯಪೂರ್ವಕ ಧನ್ಯವಾದ ತಿಳಿಸಿದರು.
ಮೂಡಿಗೆರೆ ಪಟ್ಟಣದ ವಿವಿಧ ಕಾಲೇಜುಗಳಲ್ಲಿ ಸುಮಾರು 35 ವರ್ಷಗಳ ಕಾಲ ಉಪನ್ಯಾಸಕಿ ಆಗಿ ಕಾರ್ಯ ನಿರ್ವಹಿಸಿ ೀಗ ನಿವೃತ್ತಿಗೊಳ್ಳುತ್ತಿರುವ ಉಪನ್ಯಾಸಕಿ ಭಾಗೀರಥಿ ಎಸ್ ಇವರಿಗೆ ಡಿಎಸ್ ಬಿಜಿ ಕಾಲೇಜಿನಲ್ಲಿ ಗೌರವಿಸಿ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಹಳೇ ವಿದ್ಯಾರ್ಥಿ ಮನೋಜ್ ಮಾತನಾಡಿ ಶಿಕ್ಷಣ ಕ್ಷೇತ್ರದಲ್ಲಿ ಇವರು ನೀಡಿದ ಅವಿರತ ಸೇವೆ, ಶ್ರದ್ಧೆ, ಸಹನೆ ಮತ್ತು ಪ್ರಾಮಾಣಿಕತೆ ಮುಂದಿನ ವಿದ್ಯಾರ್ಥಿಗಳಿಗೆ ದಾರಿದೀಪವಾಗುವಂತಿರಬೇಕು. ವಿದ್ಯೆ ಕಲಿಸಿದ ಶಿಕ್ಷಕಿಯಷ್ಟೆ ಅಲ್ಲದೆ, ಬದಲಾವಣೆ ತಂದ ಮಾರ್ಗದರ್ಶಿಯಾಗಿ,ಆತ್ಮೀಯ ಮಿತ್ರರಾಗಿ, ಜೀವನದ ಪಾಠ ಕಲಿಸಿದ ಗುರುಗಳಲ್ಲದೆ ತಾಯಿಯಾಗಿಬಂಧುವಾಗಿ ವಿದ್ಯಾರ್ಥಿಗಳಿಗೆ ಸಹಕಾರ ನೀಡಿದ್ದನ್ನು ಸ್ಮರಿಸಿದರು. ನೀವುಗಳು ನೀಡಿದ ದೀಕ್ಷೆಯಿಂದ ಈ ಸಮಾಜದಲ್ಲಿ ನಮ್ಮನ್ನು ನಾವು ಗುರುತಿಸಿ ಕೊಂಡಿದ್ದೇವೆ ಎಂದರು. ನಿಮ್ಮ ಹೊಸ ಜೀವನದಲ್ಲಿ ಆರೋಗ್ಯ ಮತ್ತು ಸಂತೋಷದಿಂದ ಪರಿಪೂರ್ಣವಾಗಿರಲಿ ಎಂದು ಹಾರೈಸಿದರು.
ಈ ವೇಳೆ ಪ್ರಾಂಶುಪಾಲರಾದ ಸಾಹಿತಿ, ಲತಾ ಬಾಳೆಹೊನ್ನೂರು, ಹಳೇ ವಿದ್ಯಾರ್ಥಿಗಳಾದ ಸುನೀಲ್, ಶೀಲಾ, ಕವನ ಸೇರಿದಂತೆ ಅನೇಕರು ಭಾಗಿಯಾಗಿದ್ದರು.