Wednesday, March 25, 2026
Homeಶಿಕ್ಷಣಕೃಷಿ ಮಾಡಲು ಮಣ್ಣು ಪರೀಕ್ಷೆ ಅಗತ್ಯವೇ..?

ಕೃಷಿ ಮಾಡಲು ಮಣ್ಣು ಪರೀಕ್ಷೆ ಅಗತ್ಯವೇ..?

ಮೂಡಿಗೆರೆ; ತೋಟಗಾರಿಕಾ ಮಹಾವಿದ್ಯಾಲಯದಲ್ಲಿ ಗ್ರಾಮೀಣ ಕೃಷಿ ತೋಟಗಾರಿಕಾ ಕಾರ್ಯ ಅನುಭ ನೀಡುವ ಪ್ರಯುಕ್ತ ಕುನ್ನಾಳಿನಲ್ಲಿ ಮಣ್ಣು ಪರೀಕ್ಷಾ ಪದ್ಧತಿ ಪ್ರಾತ್ಯಕ್ಷಿತೆಯನ್ನು ನಡೆಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಹಾಗೂ ತೋಟಗಾರಿಕಾ ಮಹಾವಿದ್ಯಾಲಯ ವಿದ್ಯಾರ್ಥಿಗಳು ಭಾಗಿಯಾಗಿ ಮಣ್ಣು ಪರೀಕ್ಷಾ ಪದ್ಧತಿಯ ಬಗ್ಗೆ ಅನುಭವ ಪಡೆದುಕೊಂಡರು. ಈ ಪ್ರಾತ್ಯಕ್ಷಿತೆಯಲ್ಲಿ ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಮಣ್ಣು ಸಂಗ್ರಹಣೆ ವಿಧಾನವನ್ನು ತೋರಿಸಿಕೊಡುವುದರ ಮೂಲಕ ರೈತರಿಗೆ ಮಣ್ಣಿನ ಪ್ರಾಮುಖ್ಯತೆ ಮತ್ತು ಉದ್ದೇಶವನ್ನು ತಿಳಿ ಪಡಿಸಿದರು. ರೈತರು ಸಹ ಈ ಕಾರ್ಯಕ್ರಮದಲ್ಲಿ ಉತ್ಸುಕತೆಯಿಂದ ಭಾಗಿಯಾಗಿ ಸಹಕರಿಸಿದರು.

ಕೃಷಿಗೆ ಮಣ್ಣು ಪರೀಕ್ಷೆ ಅಗತ್ಯವೇ..?
ಮಣ್ಣು ಪರೀಕ್ಷೆ ಮಾಡಿಸುವುದರಿಂದ ಮಣ್ಣಿನ ಫಲವತ್ತತೆ ಹಾಗೂ ಯಾವ ಬೆಳೆ ಯಾವ ಮಣ್ಣಿಗೆ ಸೂಕ್ತ ಎಂದು ತಿಳಿದುಕೊಳ್ಳಬಹುದು. ಮಣ್ಣಿನ ಪರೀಕ್ಷೆ ಅತ್ಯವಶ್ಯಕ ಏಕೆಂದರೆ ನಾವು ಮಣ್ಣನ್ನು ಪೋಷಿಸಬೇಕು ಹೊರತು ಸಸಿಗಳನ್ನಲ್ಲ,ಮಣ್ಣು ಒಂದು ಮಾಧ್ಯಮವಾಗಿ ಸಸಿಗಳನ್ನು ಬೆಳೆಯಲು ಸಹಕರಿಸುತ್ತದೆ ಆದಕಾರಣ ಅದರ ಆರೋಗ್ಯವನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ನಮ್ಮದಾಗಿದೆ ಅವಶ್ಯಕತೆ ಹೆಚ್ಚಾಗಿ ರಾಸಾಯನಿಕ ಗೊಬ್ಬರಗಳನ್ನು ಬಳಸುವುದಾಗಲಿ ಹಾಗೂ ಅದರ ಉಪಯೋಗವನ್ನು ಕಡಿಮೆ ಮಾಡಬೇಕು ಇದರಿಂದ ಮಣ್ಣಿನ ಗುಣಮಟ್ಟ ಹಾಗೂ ಅದರ ಆರೋಗ್ಯವನ್ನು ಕಾಪಾಡಿ ಒಳ್ಳೆಯ ಗುಣಮಟ್ಟದ ಬೆಳೆಗಳು ಹಾಗೂ ಇಳುವರಿಯನ್ನು ಪಡ್ದುಕೊಳ್ಳುವುದರ ಬಗ್ಗೆ ತಿಳಿಯುತ್ತದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!