Monday, August 4, 2025
!-- afp header code starts here -->
Homeಶಿಕ್ಷಣ2023-24ನೇ ಸಾಲಿನ ಎಸ್ಸೆಸೆಲ್ಸಿ ಫಲಿತಾಂಶ ಪ್ರಕಟ: ಉಡುಪಿ ಜಿಲ್ಲೆ ಪ್ರಥಮ, ದ.ಕ ದ್ವಿತೀಯ; ಈ ಬಾರಿಯೂ...

2023-24ನೇ ಸಾಲಿನ ಎಸ್ಸೆಸೆಲ್ಸಿ ಫಲಿತಾಂಶ ಪ್ರಕಟ: ಉಡುಪಿ ಜಿಲ್ಲೆ ಪ್ರಥಮ, ದ.ಕ ದ್ವಿತೀಯ; ಈ ಬಾರಿಯೂ ವಿದ್ಯಾರ್ಥಿನಿಯರದ್ದೇ ಮೇಲುಗೈ

ಬೆಂಗಳೂರು: 2023-24ನೇ ಸಾಲಿನ ಎಸ್ಸೆಸೆಲ್ಸಿ ಫಲಿತಾಂಶ ಪ್ರಕಟವಾಗಿದ್ದು ಉಡುಪಿ ಜಿಲ್ಲೆ ಪ್ರಥಮ, ದಕ್ಷಿಣಕನ್ನಡ ಜಿಲ್ಲೆ ದ್ವಿತೀಯ ಸ್ಥಾನ ಗಳಿಸಿದೆ. ಇನ್ನು ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷೆ ಮಂಜುಶ್ರೀ 2023-24 ನೇ ಸಾಲಿನಲ್ಲಿ ಶೇ 76.91ರ ವಿದ್ಯಾರ್ಥಿಗಳು ಪಾಸಾಗಿದ್ದಾರೆ ಎಂದು ತಿಳಿಸಿದರು.ಇನ್ನೂ ಈ ಬಾರಿ ಮೂರು ಬಾರಿ ಎಕ್ಸಾಂ ಬರೆಯುವುದಕ್ಕೆ ಅವಕಾಶ ನೀಡಲಾಗಿದ್ದು, ಅಂತಿಮವಾಗಿ ಹೆಚ್ಚಿನ ಅಂಕ ತೆಗೆದುಕೊಂಡದನ್ನು ಅಂತಿಮವಾಗಿ ಗಣನೆಗೆ ತೆಗೆದುಕೊಳ್ಳಲಾಗುವುದು ಅಂತ ಹೇಳಿದ್ದಾರೆ.

ಇನ್ನೂ ಈ ಬಾರಿ ಉಡುಪಿ ಜಿಲ್ಲೆ ಫಲಿತಾಂಶದಲ್ಲಿ ಪ್ರಥಮ ಸ್ಥಾನವನ್ನು ಶೇಕಡ 94 ರೊಂದಿಗೆ ಪಡೆದಿದೆ. ದ. ಕನ್ನಡ ಜಿಲ್ಲೆಗೆ ದ್ವೀತಿಯ ಸ್ಥಾನ ಪಡೆದಿದೆ. ಅದು ಶೇ 92.12 ಪಡೆದುಕೊಂಡಿದೆ. ಯಾದಗಿರಿ ಜಿಲ್ಲೆಗೆ ಕೊನೆ ಸ್ಥಾನ ಪಡೆದಿದೆ. ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಈ ಬಾರಿಯೂ ಬಾಲಕಿಯರೇ ಮೈಲುಗೈ ಸಾಧಿಸಿದ್ದಾದ್ದಾರೆ. ಓರ್ವ ವಿದ್ಯಾರ್ಥಿನಿ ಮಾತ್ರ ಈ ಬಾರಿ 625ಕ್ಕೆ 625 ಅಂಕಗಳನ್ನು ತೆಗೆದುಕೊಂಡಿದ್ದಾರೆ ಅಂತ ತಿಳಿಸಿದರು. ಬಾಗಲಕೋಟೆಯ ಅಂಕಿತ ಬಸಪ್ಪ (625ಕ್ಕೆ 625) ಅವರು ಪಡೆದುಕೊಂಡಿದ್ದಾರೆ. ಹರ್ಶಿತ ಡಿಎಂ ಮಧುಗಿರಿಯವರು 624/625 ಅಂಕಗಳನ್ನು ಪಡೆದುಕೊಂಢಿದ್ದಾರೆ. 8 ವಿದ್ಯಾರ್ಥಿಗಳು 625ಕ್ಕೆ 624 ಅಂಕಗಳನ್ನು ಗಳಿಸಿದ್ದಾರೆ. ಇನ್ನೂ ಈ ಬಾರಿ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ 631204 ವಿದ್ಯಾರ್ಥಿಗಳು ಪಾಸಾಗಿದ್ದಾರೆ, ಈ ಬಾರಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ ಎಂದರು,

625ಕ್ಕೆ 625 ಅಂಕ ಗಳಿಸಿದ ಬಾಗಲಕೋಟೆಯ ಅಂಕಿತಾ ಬಸಪ್ಪ

ಇನ್ನು ಈ ಬಾರಿ ರಾಜ್ಯದಲ್ಲಿ 73.4 ಶೇಕಡಾ ಒಟ್ಟು ಫಲಿತಾಂಶ ಬಂದಿದೆ. ಒಟ್ಟು 8.59,967 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅದರಲ್ಲಿ 6,31,204 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. 2,87,416(65.90%) ಬಾಲಕರು ಪಾಸಾಗಿದ್ರೆ 3,43,788(81.11%) , ಬಾಲಕಿಯರು ಪಾಸಾಗುವ ಮೂಲಕ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

ರಾಜ್ಯದಲ್ಲಿ ಮೊದಲ ಮೂರು ಸ್ಥಾನ ಪಡೆದ ಜಿಲ್ಲೆಗಳು :-

1)ಉಡುಪಿ ಪ್ರಥಮ ಸ್ಥಾನ(94%)

2)ದಕ್ಷಿಣ ಕನ್ನಡ ,ದ್ವೀತಿಯ ಸ್ಥಾನ(92.12%)

3)ಶಿವಮೊಗ್ಗ (88.67%)

ರಾಜ್ಯದಲ್ಲಿ ಶೇಕಡಾವಾರು ಕೊನೆ ಸ್ಥಾನ ಪಡೆದ ಜಿಲೆ:-

1)ಯಾದಗಿರಿ 50.59

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!