ಚಿಕ್ಕಮಗಳೂರು/ಕಳಸ: ಸಂಸೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ITI ಸಂಸ್ಥೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಆಶಾಕಿರಣವಾಗಿದೆ. ಈ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿ ಆಗಸ್ಟ್ ನಲ್ಲಿ ನಡೆಯುವ ಅಂತಿಮ ಪರೀಕ್ಷೆಗೂ ಮುನ್ನವೇ ಪ್ರತಿಷ್ಠಿತ ಕಂಪನಿಯಾದ TOYOT0 MOTORS BENGALURU ಇಲ್ಲಿಗೆ 64 ವಿದ್ಯಾರ್ಥಿಗಳು ಆಯ್ಕೆಗೊಂಡಿದ್ದಾರೆ. VOLVO ಕಂಪನಿಗೆ 6 ವಿದ್ಯಾರ್ಥಿಗಳು, MAHINDRA ಕಂಪನಿಗೆ 23 ವಿದ್ಯಾರ್ಥಿಗಳು, BOSCH ಕಂಪನಿಗೆ 25 ವಿದ್ಯಾರ್ಥಿಗಳು, UIN MECH ಕಂಪನಿಗೆ 5 ವಿದ್ಯಾರ್ಥಿಗಳು, HONDA ಕಂಪನಿಗೆ ಒಬ್ಬ ವಿದ್ಯಾರ್ಥಿ, L AND T ಕಂಪನಿಗೆ 8 ವಿದ್ಯಾರ್ಥಿಗಳು, ADHWITH HONDA ಕಂಪನಿಗೆ 19 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಶಿಸ್ತು ಬದ್ದ ವ್ಯಾಸಂಗದಿಂದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ಜೀವನ ನಡೆಸಲು ಈ ಸಂಸ್ಥೆಯ ಪಾತ್ರ ಮಹತ್ತರವಾಗಿದೆ. ಅಂತಿಮ ಪರೀಕ್ಷೆಗೂ ಮುನ್ನವೇ ಸಂದರ್ಶನ ಎದುರಿಸಿದ ವಿದ್ಯಾರ್ಥಿಗಳು ಈಗಾಗಲೇ ಕೆಲಸಕ್ಕೆ ಆಯ್ಕೆಯಾಗಿರೋದು ಸಂಸ್ಥೆಯ ಆಡಳಿತ ಮಂಡಳಿಗೆ ಸಂತಸ ತಂದಿದೆ.

ಸ್ವಂತ ಉದ್ಯೋಗ ಮಾಡಲು ಸಂಸ್ಥೆಯಿಂದ ತರಬೇತಿ
RUD.SET ಸಂಸ್ಥೆಯಿಂದ 29 ವಿದ್ಯಾರ್ಥಿಗಳು ಮೋಟರ್ ರಿವೈಂಡಿಂಗ್ , ಟಿವಿ ರಿಪೇರಿ ಮತ್ತು ಸಿಸಿಟಿವಿ ಕ್ಯಾಮರಾ ವಿಶೇಷ ತರಬೇತಿಯನ್ನು ಪಡೆದು ಸ್ವಾವಲಂಬಿಗಳಾಗಿರುತ್ತಾರೆ. ಈ ಎಲ್ಲಾ ವಿದ್ಯಾರ್ಥಗಳಿಗೆ ಆಡಳಿತ ಮಂಡಳಿ ಪ್ರಾಚಾರ್ಯರು, ಸಿಬ್ಬಂದಿ ವರ್ಗ ಅಭಿನಂದನೆ ಸಲ್ಲಿಸಿದೆ

ಸಂಸ್ಥೆಯ ವೈಶಿಷ್ಟ್ಯ ಗಳು
ಅನುಭವಸ್ಥ ಹಾಗೂ ಕೌಶಲ ಪ್ರಾವೀಣ್ಯ ಬೋಧಕ ವರ್ಗ
ಅತ್ಯುತ್ತಮ ಉಪಕರಣ ಒಳಗೊಂಡಿರುವ ಪ್ರಯೋಗಿಕ ಕಾರ್ಯಗಾರ
ವ್ಯವಸ್ಥಿತ ಗ್ರಂಥಾಲಯ
ವೆಲ್ಡರ್ ವಿಭಾಗದಲ್ಲಿ ಆಧುನಿಕ ತಂತ್ರಜ್ಞಾನದ MIG ಮತ್ತು TIG Resistance (spot welding)
ಬಾಲಕರಿಗೆ ಹಾಸ್ಟೆಲ್ ವ್ಯವಸ್ಥೆ
ಸುಸಜ್ಜಿತ ಕಟ್ಟಡಗಳು
ವಿಶಾಲವಾದ ತರಗತಿ ಕೊಠಡಿಗಳು
ಸರ್ಕಾರ ನೀಡುವ ಅರ್ಹ ತರಬೇತಿದಾರರಿಗೆ ವಿದ್ಯಾರ್ಥಿ ವೇತನ
ಶ್ರೀ ಧರ್ಮಸ್ಥಳ ವಿದ್ಯಾಸಂಸ್ಥೆಯಿಂದ ಅರ್ಹ ತರಬೇತಿದಾರರಿಗೆ ವಿದ್ಯಾರ್ಥಿ ವೇತನ
Multiskill ತರಬೇತಿ
Advanceed technology ಯೊಂದಿಗೆ ತರಬೇತಿ
ಕಂಪ್ಯೂಟರ್ ಶಿಕ್ಷಣ
ಉತ್ತಮ ಫಲಿತಾಂಶ
ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಗಳಿಸಿದ ಉತ್ತಮ ಸಂಸ್ಥೆ
ವಾರ್ಷಿಕ ಪರೀಕ್ಷೆ ಮಾದರಿಯಲ್ಲಿಯೇ ಪ್ರತಿ ತಿಂಗಳು ಮಾಸಿಕ ಪರೀಕ್ಷೆ
S.M.S ಮುಖಾಂತರ ಪೋಷಕರಿಗೆ ಗೈರು ಹಾಜರಿ /ಪ್ರಗತಿ ವರದಿ
ಸೀಮಿತ ವಿದ್ಯಾರ್ಥಿಗಳಿಗೆ ಪ್ರವೇಶವಕಾಶ
ಸ್ವಯಂ ಉದ್ಯೋಗಕ್ಕೆ ಉತ್ತೇಜನ
ತರಬೇತಿ ಅವಧಿಯಲ್ಲಿ ಕೈಗಾರಿಕೆಗಳ ಭೇಟಿ / ತರಬೇತಿ
ಅಂತರ್ಜಾಲ (internet ) ಸೌಲಭ್ಯ
ಮಧ್ಯಾಹ್ನದ ಊಟಕ್ಕೆ ಮೆಸ್ ವ್ಯವಸ್ಥೆ

2024-25ನೇ ಸಾಲಿಗೆ ಅರ್ಜಿ ಆಹ್ವಾನ
2024-25 ನೇ ಸಾಲಿನ ಪ್ರವೇಶಾತಿ ಪ್ರಾರಂಭಗೊಂಡಿದ್ದು ಆಸಕ್ತ ವಿದ್ಯಾರ್ಥಿಗಳು ಈ ಕೂಡಲೇ ಸಂಸ್ಥೆಗೆ ಮುಖತಃ ಭೇಟಿನೀಡಿ ಪ್ರವೇಶ ಪಡೆಯಬಹುದು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 8310875142, 9481410584, 8310273183