ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರನ್ನು ಕಾಡುವ ಸಮಸ್ಯೆ ಎಂದರೆ ಡಾರ್ಕ್ ಸರ್ಕಲ್. ಡಾರ್ಕ್ ಸರ್ಕಲ್ ಅನ್ನು ತೊಲಗಿಸೋದಕ್ಕೆ ಅನೇಕರು ವಿವಿಧ ಕ್ರೀಂಗಳ ಮೊರೆ ಹೋಗ್ತಾರೆ. ಆದ್ರೆ ಕ್ರೀಂಗಳನ್ನು ಬಳಸದೆ, ಮನೆಯಲ್ಲಿ ಸಿಗುವ ಕೆಲವು ಪದಾರ್ಥಗಳನ್ನು ಬಳಸಿ ಅದನ್ನು ಕಡಿಮೆ ಮಾಡಬಹುದು.
ಮೊದಲಿಗೆ ಮುಖವನ್ನು ಚೆನ್ನಾಗಿ ತೊಳೆದುಕೊಳ್ಳಿ ನಂತರ ಸೌತೆಕಾಯಿ ಅಥವಾ ಆಲೂಗೆಡ್ಡೆಯನ್ನು ತೆಳುವಾಗಿ ಕಟ್ ಮಾಡಿ ಕಣ್ಣಿನ ಮೇಲೆ ಇಟ್ಟುಕೊಂಡು ರಿಲ್ಯಾಕ್ಸ್ ಮಾಡಿ. ಪ್ರತಿ ದಿನ ಇದನ್ನು ಮಾಡುವುದರಿಂದ ಡಾರ್ಕ್ ಸರ್ಕಲ್ ಕಡಿಮೆಯಾಗುತ್ತದೆ. ಅದರ ಜೊತೆಗೆ ಹೆಚ್ಚಾಗಿ ನೀರು ಕುಡಿಯಿರಿ ಹಾಗೂ 8 ಗಂಟೆಗಳ ಕಾಲ ಚೆನ್ನಾಗಿ ನಿದ್ರೆ ಮಾಡಿ. ಸೌತೆಕಾಯಿ ಹಾಗೂ ಆಲೂಗೆಡ್ಡೆಗೆ ವಿಶೇಷವಾಗಿ ತಂಪಾಗಿಸುವ ಗುಣವಿದೆ. ಹಾಗಾಗಿ ಇವು ಚರ್ಮದ ಮೇಲೆ ಅದ್ಭುತವಾಗಿ ಕೆಲಸ ಮಾಡುತ್ತವೆ. ಸೌತೆಕಾಯಿಯಲ್ಲಿ ತಂಪಾದ ಗುಣದ ಜತೆಗೆ ಆ್ಯಂಟಿ ಆಕ್ಸಿಡೆಂಟ್ ಅಂಶವೂ ಇರುವುದರಿಂದ ಕಣ್ಣಿನ ಕೆಳಗಿನ ಚರ್ಮ ಊದಿಕೊಳ್ಳುವುದನ್ನು ಕಡಿಮೆ ಮಾಡಲು ಮತ್ತು ಕಣ್ಣಿನ ಕೆಳಗೆ ದ್ರವ ಶೇಖರಣೆಯಾಗುವುದನ್ನು ತಡೆಯುತ್ತದೆ.


