ಭಾರತೀಯ ಸಾಂಪ್ರದಾಯಿಕ ಮಿಷ್ಟಾನ್ನಗಳಲ್ಲಿ ಅಕ್ಕಿ-ಹಾಲು ಪಾಯಸಕ್ಕೆ ವಿಶೇಷ ಸ್ಥಾನವಿದೆ. ಹಬ್ಬಗಳಲ್ಲಿ, ಮನೆಯಲ್ಲಿನ ವಿಶೇಷ ಕಾರ್ಯಕ್ರಮಗಳಲ್ಲಿ ಈ ರುಚಿಕರ ಪಾಯಸವು ಮುಖ್ಯ ಆಕರ್ಷಣೆ ಆಗಿರುತ್ತದೆ. ಈ ಪಾಯಸವನ್ನು ಮನೆಯಲ್ಲೇ ಸುಲಭವಾಗಿ ಮಾಡಿ ತಿನ್ನಬಹುದು. ಮಾಡುವ ವಿಧಾನ ಮತ್ತು ಬೇಕಾಗುವ ಸಾಮಗ್ರಿಗಳ ವಿವರ ಇಲ್ಲಿದೆ
ಬೇಕಾಗುವ ಸಾಮಗ್ರಿಗಳು
ಅಕ್ಕಿ (Raw Rice/Sona Masuri): 4 ಚಮಚ (15 ನಿಮಿಷ ನೆನೆಸಿರಬೇಕು)
ಹಾಲು (Milk): 1 ಲೀಟರ್ (ಪೂರ್ಣ ಕೆನೆಯಿರುವ ಹಾಲು ಉತ್ತಮ)
ಸಕ್ಕರೆ (Sugar): 1 ಕಪ್ ( ಸಿಹಿ ಪ್ರಮಾಣ ಬೇಕಾಗುವಷ್ಟು )
ತುಪ್ಪ (Ghee): 4 ಟೀ ಚಮಚ
ಗೋಡಂಬಿ (Cashews): 8-10
ಒಣ ದ್ರಾಕ್ಷಿ (Raisins): 8-10
ಏಲಕ್ಕಿ ಪುಡಿ (Cardamom Powder): 1/2 ಟೀ ಚಮಚ
ಕುಂಕುಮ ಕೇಸರಿ (Saffron Strands – Kesar): ಕೆಲವು ಎಳೆಗಳು
ಮಾಡುವ ವಿಧಾನ
- ಹಾಲನ್ನು ಕುದಿಸುವುದು
ಮೊದಲಿಗೆ ತಳ ಹಿಡಿಯದ ಹಾಗೆ ದಪ್ಪ ತಳದ ಪಾತ್ರೆ ತೆಗೆದುಕೊಳ್ಲಿ. ಪಾತ್ರೆಯಲ್ಲಿ ಹಾಲನ್ನು ಹಾಕಿ ಮಧ್ಯಮ ಉರಿಯಲ್ಲಿ ಕುದಿಯಲು ಇಡಿ. ಹಾಲು ಕುದಿದ ಮೇಲೆ ಉರಿಯನ್ನು ಕಡಿಮೆ ಮಾಡಿ, ಹಾಲು ಅರ್ಧದಷ್ಟು ಕಡಿಮೆಯಾಗುವವರೆಗೆ (ಸುಮಾರು 15-20 ನಿಮಿಷ) ಆಗಾಗ್ಗೆ ಕಲಕುತ್ತಾ ಕುದಿಸಿ. ಇದರಿಂದ ಪಾಯಸ ಗಟ್ಟಿ ಮತ್ತು ರುಚಿಕರವಾಗುತ್ತದೆ. - ಅಕ್ಕಿ ಬೇಯಿಸುವುದು
ಹಾಲು ಕುದುತ್ತಿರುವಾಗ, ಇನ್ನೊಂದು ಚಿಕ್ಕ ಪ್ಯಾನ್‌ನಲ್ಲಿ 2 ಟೀ ಚಮಚ ತುಪ್ಪ ಬಿಸಿ ಮಾಡಿ. ನೆನೆಸಿದ ಅಕ್ಕಿಯನ್ನು ಹಾಕಿ 2 ನಿಮಿಷ ಹುರಿಯಿರಿ. ಹುರಿದ ಅಕ್ಕಿಯನ್ನು ಕುದಿಯುತ್ತಿರುವ ಹಾಲಿಗೆ ಸೇರಿಸಿ. - ಅಕ್ಕಿ ಮತ್ತು ಸಕ್ಕರೆ ಸೇರಿಸುವುದು
ಅಕ್ಕಿ ಸಂಪೂರ್ಣ ಮೆತ್ತಗೆ ಬೇಯುವವರೆಗೆ (ಸುಮಾರು 15-20 ನಿಮಿಷ) ನಿಧಾನ ಉರಿಯಲ್ಲಿ ಬೇಯಿಸಿ, ಆಗಾಗ್ಗೆ ಕಲಕುತ್ತಾ ಇರಿ. ಅಕ್ಕಿ ಪಾತ್ರೆಯ ತಳಕ್ಕೆ ಅಂಟಿಕೊಳ್ಳದಂತೆ ಎಚ್ಚರವಹಿಸಿ.
ಅಕ್ಕಿ ಬೆಂದ ನಂತರ, ಸಕ್ಕರೆ ಮತ್ತು ಏಲಕ್ಕಿ ಪುಡಿ ಸೇರಿಸಿ. ೨-೩ ನಿಮಿಷ ಕುದಿಸಿ, ಸಕ್ಕರೆ ಸಂಪೂರ್ಣ ಕರಗುವವರೆಗೂ ಕಲಕುತ್ತೀರಿ. ಈ ಸಮಯದಲ್ಲಿ ಕುಂಕುಮ ಕೇಸರಿ ಎಳೆಗಳನ್ನು ಸೇರಿಸಿ. ಇದು ಪಾಯಸಕ್ಕೆ ಸುಂದರ ಬಣ್ಣ ಮತ್ತು ಪರಿಮಳ ನೀಡುತ್ತದೆ. - ಒಗ್ಗರಣೆ
ಒಂದು ಸಣ್ಣ ಪಾತ್ರೆಯಲ್ಲಿ 2 ಟೀ ಚಮಚ ತುಪ್ಪವನ್ನು ಬಿಸಿ ಮಾಡಿ. ಗೋಡಂಬಿ ಮತ್ತು ಒಣ ದ್ರಾಕ್ಷಿಗಳನ್ನು ಹಾಕಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಹುರಿಯಿರಿ.
ಈ ಹುರಿದ ಹಣ್ಣುಗಳನ್ನು ಸಿದ್ಧವಾದ ಪಾಯಸಕ್ಕೆ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿದರೆ ಹಾಲು-ಪಾಯಸ ಸವಿಯಲು ಸಿದ್ದವಾಗುತ್ತದೆ. ಪಾಯಸವನ್ನು ಬಿಸಿ-ಬಿಸಿಯಾಗಿ ಅಥವಾ ತಣ್ಣಗೆ ಬಡಿಸಬಹುದು. ತಣ್ಣಗಾದ ನಂತರ ಪಾಯಸ ಇನ್ನಷ್ಟು ಗಟ್ಟಿಯಾಗಿ, ಬಾಯಿಗೆ ಮತ್ತಷ್ಟು ರುಚಿಕರವಾಗಿರುತ್ತದೆ.
