ಬೂದು ಕು೦ಬಳಕಾಯಿ ಅಥವಾ ಬಿಳಿ ಕು೦ಬಳಕಾಯಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ದೇಹವನ್ನ ತ೦ಪಾಗಿಸುವ ಇದರ ನಿಯಮಿತ ಸೇವನೆಯಿಂದ ಅನೇಕ ರೋಗಗಳು ನಿವಾರಣೆಯಾಗುತ್ತವೆ. ಬಿಳಿ ಕು೦ಬಳಕಾಯಿ ವರ್ಷದ ಎಲ್ಲ ಸೀಸನ್ ನಲ್ಲಿ ಸಿಗುವ ತರಕಾರಿಯಾಗಿದೆ.ಅಗತ್ಯ ಪೋಷಕಾಂಶಗಳನ್ನ ಹೊಂದಿರುವ ಇದನ್ನು ಇಂಗ್ಲಿಷ್‌ನಲ್ಲಿ ಆಶ್ ಗೌರ್ಡ್( Ash gourd )ಎಂದು ಕರೆಯುತ್ತಾರೆ.ಗಾತ್ರದಲ್ಲಿ ದೊಡ್ಡದಾಗಿರುವ ಈ ತರಕಾರಿಯಲ್ಲಿ ಪೋಷಕಾಂಶಗಳು ಹೇರಳವಾಗಿವೆ. ಪ್ರೋಟೀನ್, ಫೈಬರ್, ಸತು, ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ರಂಜಕದಂತಹ ಪೋಷಕಾಂಶಗಳು ಇದರಲ್ಲಿ ಹೇರಳವಾಗಿ ಕಂಡುಬರುತ್ತವೆ. ಬೂದು ಕು೦ಬಳಕಾಯಿಯನ್ನ ಹಲವು ವಿಧಗಳಲ್ಲಿ ಸೇವಿಸಲಾಗುತ್ತದೆ. ಇದ್ರಿಂದ ಪೇಠ ಅನ್ನೋ ಸಿಹಿ ತಿನಿಸನ್ನೂ ತಯಾರಿಸುತ್ತಾರೆ . ಈ ತರಕಾರಿಯನ್ನ ಹಬ್ಬ ಹರಿದಿನಗಳಲ್ಲಿ , ಶುಭ ಸಂದರ್ಭದಲ್ಲಿ ಮನೆ ಮುಂದೆ ಒಡೆಯಲಾಗುತ್ತೆ. ಕರ್ನಾಟಕದಲ್ಲಿ ಇದರ ಸೇವನೆ ತುಸು ಹೆಚ್ಚು ಅಂತಾನೆ ಹೇಳಬಹುದು. ಬೂದು ಕು೦ಬಳಕಾಯಿ ತ೦ಬುಳಿ ಜೊತೆ ಬಿಸಿ ಬಿಸಿ ಅನ್ನ ತಿನ್ನುತ್ತಿದ್ದರೆ , ಆಹಾ, ಸಖತ್ ರುಚಿಯಾಗಿರುತ್ತೆ. ಹಾಗಿದ್ರೆ ಬೂದು ಕು೦ಬಳಕಾಯಿ ಜ್ಯೂಸ್ ಸೇವನೆಯಿಂದ ಏನೆಲ್ಲಾ ಪ್ರಯೋಜನಗಳಿವೆ ? ಓದಿ
- ತೂಕ ಇಳಿಸಲು ಸಹಾಯ
ನೀವು ತೂಕ ಇಳಿಸಿಕೊ೦ಡು ಫಿಟ್ ಅಂಡ್ ಫೈನ್ ಆಗಿರಬೇಕು ಅಂದುಕೊ೦ಡಿದ್ದರೆ ಬೂದು ಕು೦ಬಳಕಾಯಿ ಜ್ಯೂಸ್ ಕುಡಿಯಿರಿ. ಇದರಲ್ಲಿ ಕ್ಯಾಲೋರಿ ಪ್ರಮಾಣವು ತುಂಬಾ ಕಡಿಮೆಯಾಗಿದೆ. ಅಲ್ಲದೆ ಇದು ಬಹಳಷ್ಟು ನೀರು ಮತ್ತು ಫೈಬರ್ ಅನ್ನು ಹೊಂದಿದ್ದು, ಪೋಷಕಾಶಗಳಿಂದ ತುಂಬಿದೆ. ಇದರ ಜ್ಯೂಸ್ ಸೇವಿಸುವುದರಿಂದ ಹೊಟ್ಟೆ ತುಂಬಾ ಹೊತ್ತು ತುಂಬಿರುತ್ತದೆ ಮತ್ತು ಅತಿಯಾಗಿ ತಿನ್ನುವುದನ್ನ ತಪ್ಪಿಸಬಹುದು. ಹೀಗೆ ಇದು ತೂಕ ಇಳಿಸಲು ಸಹಾಯ ಮಾಡುತ್ತದೆ. - ಜೀರ್ಣಕ್ರಿಯೆಗೆ ಅತ್ಯುತ್ತಮ
ಬೂದು ಕು೦ಬಳಕಾಯಿಯಲ್ಲಿ ಉತ್ತಮ ಪ್ರಮಾಣದ ಫೈಬರ್ ಕಂಡುಬರುತ್ತದೆ. ನೀವು ಅಜೀರ್ಣದ೦ತಹ ಸಮಸ್ಯೆಗಳಿಂದ ತೊಂದರೆಗೊಳಗಾಗಿದ್ದರೆ ನಿಯಮಿತವಾಗಿ ಈ ತರಕಾರಿಯನ್ನ ಸೇವಿಸಬಹುದು. ಇದು ಜೀರ್ಣಕ್ರಿಯೆ ಮತ್ತು ಇತರ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ನೀವು ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಇದರ ರಸವನ್ನು ಸೇವಿಸಿದರೆ ಮಾತ್ರ ಇದರ ಪ್ರಯೋಜನವನ್ನು ಪಡೆಯಬಹುದು. - ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಬೂದು ಕು೦ಬಳದಲ್ಲಿ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳು (antioxidants) ಹೇರಳವಾಗಿ ಕಂಡುಬರುತ್ತವೆ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅಗತ್ಯ ಪೋಷಕಾಂಶಗಳನ್ನ ಹೊಂದಿರುವ ಬಿಳಿ ಕುಂಬಳಕಾಯಿಯ ರಸವನ್ನು ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇದರೊಂದಿಗೆ ನೀವು ಅನೇಕ ರೀತಿಯ ರೋಗಗಳು ಮತ್ತು ಸೋಂಕುಗಳಿಂದ ಸುರಕ್ಷಿತವಾಗಿರಬಹುದು.
- ಚಯಾಪಚಯ(Metabolism) ಬೂದು ಕು೦ಬಳಕಾಯಿ ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಇದರ ನಿಯಮಿತವಾದ ಸೇವನೆಯಿಂದ ದೇಹದಿಂದ ವಿಷ ಮತ್ತು ಹಾನಿಕಾರಕ ವಸ್ತುಗಳನ್ನು ತೆಗೆದುಹಾಕಬಹುದು. ಇದು ದೇಹದ ಚಯಾಪಚಯವನ್ನು ಸಹ ಬಲಪಡಿಸುತ್ತದೆ. ಹಾಗೆ ಮಲಬದ್ಧತೆ , ಅಸಿಡಿಟಿಯಿಂತಹ ಅಜೀರ್ಣ ಸಮಸ್ಯೆಗಳನ್ನ ಹೊಂದಿರುವವರು ಈ ಪಾನೀಯವನ್ನ ತಮ್ಮ ದಿನಚರಿಯಲ್ಲಿ ಸೇರಿಸಿಕೊ೦ಡರೆ ಒಳ್ಳೆಯದು.
- ಹೃದಯ,ಕರುಳಿನ ಆರೋಗ್ಯಕ್ಕೂ ಒಳ್ಳೇದು
ನೀವು ಹೃದಯಾ ಸಂಬಂಧಿ ಖಾಯಿಲೆಯಿ೦ದ ಬಳಲುತಿದ್ದರೆ ಬೂದು ಕು೦ಬಳಕಾಯಿ ನಿಮಗೆ ಪ್ರಯೋಜನಕಾರಿಯಾಗಿದೆ. ಏಕೆಂದರೆ ಇದರಲ್ಲಿರುವ ಪೋಷಕಾಂಶಗಳು ಹೃದಯದ ಅನೇಕ ಸಮಸ್ಯೆಗಳನ್ನ ಕಡಿಮೆ ಮಾಡಲು ಸಹಾಯ ಮಾಡುತ್ತದೆ.ಹಾಗೆ ದೇಹದ ದೌರ್ಬಲ್ಯವನ್ನ ಅನುಭವಿಸುವವರು ಪೋಷಕಾಂಶಗಳಿಂದ ಸಮೃದ್ಧವಾಗಿರುವ ಇದರ ರಸವನ್ನ ಕುಡಿದರೆ ದೌರ್ಬಲ್ಯವನ್ನ ಹೋಗಲಾಡಿಸಬಹುದು .
- ಊತ(Swelling)
ನೀವು ತು೦ಬಾ ದಿನಗಳಿಂದ ಊತದ ಲಕ್ಷಣಗಳಿ೦ದ ಬಳಲುತ್ತಿದ್ದೀರಾ? ಹಾಗಿದ್ರೆ ಈ ತರಕಾರಿ ನಿಮಗೆ ರಾಮಬಾಣ .ಪ್ರತಿದಿನ ಇದನ್ನ ಸಾಂಬಾರ್, ಪಲ್ಯ ಅಥವಾ ನಿಮಗೆ ಯಾವ ತರ ತಿನ್ನೋಕೆ ಇಷ್ಟನೋ ಆ ತರ ಸೇವಿಸೋದ್ರಿಂದ ದೇಹದಲ್ಲಿನ ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಔಷಧೀಯ ಗುಣಗಳನ್ನ ಹೊಂದಿರುವ ಅತ್ಯ೦ತ ಪೌಷ್ಟಿಕ ಆಹಾರವಾಗಿದೆ.
- detox
ಒತ್ತಡದ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರದಿಂದಾಗಿ ನಮ್ಮ ದೇಹದಲ್ಲಿ ವಿಷಗಳು ಸಂಗ್ರಹಗೊಳ್ಳುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಸೂಪರ್ ಪವರ್ ಇರುವ ಬೂದು ಕು೦ಬಳಕಾಯಿ ರಸವನ್ನು ಕುಡಿಯುವುದರಿಂದ ದೇಹವನ್ನು detox ಮಾಡಬಹುದು.ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಗುಣಗಳಿದ್ದು, ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಬಿಳಿ ಕುಂಬಳಕಾಯಿ ರಸವನ್ನು ನಿಯಮಿತವಾಗಿ ಕುಡಿಯುವುದರಿಂದ, ನೀವು ಅನೇಕ ಗಂಭೀರ ಕಾಯಿಲೆಗಳನ್ನ ತಡೆಗಟ್ಟಬಹುದು.
ಸೂಚನೆ : ಈ ಸಲಹೆ ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ನೀವು ಯಾವುದೇ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದರೆ, ವೈದ್ಯರ ಸಲಹೆಯ ಮೇರೆಗೆ ಸೇವಿಸಿ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ.