ಬೇಕಾಗಿರುವ ಸಾಮಾಗ್ರಿಗಳು
4 ಕಪ್ ಅನ್ನ
3 ಕಪ್ ಮೊಸರು
2 ಹಸಿ ಮೆಣಸಿನಕಾಯಿಗಳು, ತೆಳುವಾಗಿ ಕತ್ತರಿಸಿ
ಸಣ್ಣ ತುಂಡುಗಳಾಗಿ ಕತ್ತರಿಸಿದ ಶುಂಠಿ
ಸಣ್ಣದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪು
ರುಚಿಗೆ ತಕ್ಕಷ್ಟು ಉಪ್ಪು
2 ಚಮಚ ಎಣ್ಣೆ
ಕಡಲೆಬೀಜ ಅರ್ಧ ಚಮಚ
ಉದ್ದಿನ ಬೇಳೆ ಅರ್ಧ ಚಮಚ
ಸಾಸಿವೆ ಅರ್ಧ ಚಮಚ
ಜೀರಿಗೆ ಅರ್ಧ ಚಮಚ
ಸ್ವಲ್ಪ ಗೋಡಂಬಿ
ಸ್ವಲ್ಪ ಒಣದ್ರಾಕ್ಷಿ
ಕರಿಬೇವಿನ ಎಲೆ
2 ಕರಿಮೆಣಸು
ಒಂದು ಚಿಟಿಕೆ ಜೀರಿಗೆ
ಒಂದು ಹಿಡಿ ದಾಳಿಂಬೆ
ಮಾಡುವ ವಿಧಾನ
ಮೊದಲಿಗೆ ಒಂದು ಬಾಣಲೆ ತೆಗೆದುಕೊಂಡು, ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ. ಎಣ್ಣೆ ಕಾದ ನಂತರ ಅದಕ್ಕೆ ಸ್ವಲ್ಪ ಸಾಸಿವೆ, ಜೀರಿಗೆ, ಕಡಲೇಬೀಜ, ಉದ್ದಿನಬೇಳೆ ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ನಂತರ ಗೋಡಂಬಿ, ಸ್ವಲ್ಪ ಒಣದ್ರಾಕ್ಷಿ, ಕರಿಮೆಣಸು, ಕರಿಬೇವಿನ ಎಲೆ ಹಾಕಿ ಹುರಿದುಕೊಳ್ಳಿ. ನಂತರ ಬಾಣಲೆಯನ್ನು ಕೆಳಗೆ ಇಳಿಸಿ, ಅದಕ್ಕೆ ತಣ್ಣಗಿರುವ ಅನ್ನ, ಮೊಸರು, ರುಚಿಗೆ ತಕ್ಕಷ್ಟು ಉಪ್ಪು, ಕಟ್ ಮಾಡಿಕೊಂಡಿರುವ ಶುಂಠಿ, ಕೊತ್ತಂಬರಿ, ಹಸಿಮೆಣಸಿನ ಕಾಯಿ, ದಾಳಿಂಬೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದರೆ ರೆಸ್ಟೋರೆಂಟ್ ಸೈಲ್‌ನ ಮೊಸರನ್ನ ರುಚಿಯಲು ಸಿದ್ದ.

