ಪಪ್ಪಾಯಿ ಹಣ್ಣು ಬಾಯಿಗೆ ರುಚಿ ಮಾತ್ರವಲ್ಲ, ಆರೋಗ್ಯಕ್ಕೂ ಹಲವು ರೀತಿಯಲ್ಲೂ ಅನುಕೂಲಕಾರಿಯಾಗಿದೆ. ಪಪ್ಪಾಯಿ ಹಣ್ಣು ತಿನ್ನುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ. ಜೊತೆಗೆ ಚರ್ಮದ ಕಾಂತಿ ಕೂಡಾ ಹೆಚ್ಚುತ್ತದೆ. ಹಣ್ಣು ಮಾತ್ರವಲ್ಲ, ಪಪ್ಪಾಯಿ ಎಲೆಯಿಂದಲೂ ಅನೇಕ ಪ್ರಯೋಜನಗಳಿವೆ.
ಸಿಕ್ಕಾಪಟ್ಟೆ ಜ್ವರ ಬಂದು ಬಿಳಿ ರಕ್ತ ಕಣಗಳು ಕಡಿಮೆ ಆಗಿದ್ರೆ, ಪಪ್ಪಾಯ ಎಲೆಯ ರಸವನ್ನು 1 ಚಮಚದಷ್ಟು 3 ದಿನಕ್ಕೆ ಒಮ್ಮೆ ಸೇವಿಸುತ್ತಿದ್ದರೆ ಬೇಗನೆ ಬಿಳಿ ರಕ್ತಕಣಗಳು ಹೆಚ್ಚಾಗುತ್ತದೆ. ಆದರೆ ಎಲೆಯ ರಸವನ್ನು ಸೇವಿಸುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಸಲಹೆ ಪಡೆದುಕೊಳ್ಳುವುದು ಉತ್ತಮ.
ಪಪ್ಪಾಯಿ ಎಲೆಯ ರಸ ಕುಡಿಯುವುದರಿಂದ ಹೊಟ್ಟೆ ಉಬ್ಬರ, ಮಲಬದ್ಧತೆ, ಅಜೀರ್ಣ ಸಮಸ್ಯೆಗಳು ದೂರವಾಗುತ್ತದೆ. ಕರುಳಿನ ಬ್ಯಾಕ್ಟೀರಿಯಾ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಕೀಲು ನೋವು, ಸ್ನಾಯು ಸೆಳೆತ, ಉರಿಯೂತದ ಬಳಲುತ್ತಿರುವರಿಗೆ ಪಪ್ಪಾಯ ಎಲೆ ಸಿದ್ದೌಷಧ.

