Monday, February 9, 2026
Homeಆರೋಗ್ಯSeasonal Flu Alert: ರಾಜ್ಯದಲ್ಲಿ ಸೀಸನಲ್ ಫ್ಲೂ ಭೀತಿ: ಆರೋಗ್ಯ ಇಲಾಖೆಯಿಂದ ಹೊಸ ಮಾರ್ಗಸೂಚಿ ಬಿಡುಗಡೆ!

Seasonal Flu Alert: ರಾಜ್ಯದಲ್ಲಿ ಸೀಸನಲ್ ಫ್ಲೂ ಭೀತಿ: ಆರೋಗ್ಯ ಇಲಾಖೆಯಿಂದ ಹೊಸ ಮಾರ್ಗಸೂಚಿ ಬಿಡುಗಡೆ!

ಬೆಂಗಳೂರು: ರಾಜ್ಯದಲ್ಲಿ ಬದಲಾಗುತ್ತಿರುವ ಹವಾಮಾನ ಮತ್ತು ಹೆಚ್ಚುತ್ತಿರುವ ಚಳಿಯ ನಡುವೆ ‘ಸೀಸನಲ್ ಫ್ಲೂ’ (ಇನ್ಫ್ಲೂಯೆಂಜಾ) ಪ್ರಕರಣಗಳು ಏರಿಕೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ವಹಿಸಲು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ.

ಡಿಸೆಂಬರ್‌ನಿಂದ ಮಾರ್ಚ್‌ವರೆಗೆ ಹೈ ಅಲರ್ಟ್

ಸಾಮಾನ್ಯವಾಗಿ ಡಿಸೆಂಬರ್ ಮತ್ತು ಜನವರಿಯಿಂದ ಮಾರ್ಚ್ ತಿಂಗಳವರೆಗೆ ಸೀಸನಲ್ ಫ್ಲೂ ಪ್ರಕರಣಗಳು ಹೆಚ್ಚಾಗುವ ಭೀತಿ ಇರುತ್ತದೆ. ಇದು ಒಬ್ಬರಿಂದ ಒಬ್ಬರಿಗೆ ಎಂಜಿಲು ಅಥವಾ ಉಸಿರಾಟದ ದ್ರವಗಳ ಮೂಲಕ ಹರಡುವುದರಿಂದ, ಆಸ್ಪತ್ರೆಗಳು ಮತ್ತು ಪ್ರಯೋಗಾಲಯಗಳು ಸನ್ನದ್ಧ ಸ್ಥಿತಿಯಲ್ಲಿರಲು ಇಲಾಖೆ ಸೂಚನೆ ನೀಡಿದೆ.

ಈ ಸೋಂಕು ಎಲ್ಲರಿಗೂ ಬಾಧಿಸಬಹುದಾದರೂ, ಮಕ್ಕಳು,ಹಿರಿಯ ನಾಗರಿಕರು, ಗರ್ಭಿಣಿಯರು, ಮಧುಮೇಹ, ಹೃದಯ ಸಂಬಂಧಿ ಅಥವಾ ಶ್ವಾಸಕೋಶದ ಸಮಸ್ಯೆ ಇರುವವರು ಎಚ್ಚರಿಕೆಯಿಂದ ಇರಬೇಕು ಎಂದು ಸೂಚಿಲಾಗಿದೆ.

    ಪ್ರಮುಖ ಲಕ್ಷಣಗಳು:

    • ತೀವ್ರ ಜ್ವರ ಮತ್ತು ಶೀತ.
    • ಒಣ ಕೆಮ್ಮು ಮತ್ತು ಗಂಟಲು ನೋವು.
    • ಮೈಕೈ ನೋವು ಮತ್ತು ಅತಿಯಾದ ಸುಸ್ತು.
    • ಹಸಿವು ಆಗದಿರುವುದು ಮತ್ತು ಕೆಲವರಲ್ಲಿ ಚರ್ಮದ ಮೇಲೆ ಕೆಂಪು ಗುಳ್ಳೆಗಳು.

    ಆರೋಗ್ಯ ಇಲಾಖೆಯ ಕಟ್ಟುನಿಟ್ಟಿನ ಸೂಚನೆಗಳು:

    1. * ಪ್ರತಿದಿನ ಕನಿಷ್ಠ 5 ILI (Influenza-like Illness) ಮತ್ತು 100 SARI (Severe Acute Respiratory Infection) ಪ್ರಕರಣಗಳನ್ನು ಕಡ್ಡಾಯವಾಗಿ ಪರೀಕ್ಷಿಸಬೇಕು.
    2. *ಆಸ್ಪತ್ರೆಗಳಲ್ಲಿ Oseltamivir ಮಾತ್ರೆಗಳು, PPE ಕಿಟ್ ಮತ್ತು N95 ಮಾಸ್ಕ್‌ಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು.
    3. * ಹೈ-ರಿಸ್ಕ್ ರೋಗಿಗಳು ಮತ್ತು ಆರೋಗ್ಯ ಕಾರ್ಯಕರ್ತರು ಇನ್ಫ್ಲೂಯೆಂಜಾ ಲಸಿಕೆ ಪಡೆಯಲು ಸಲಹೆ ನೀಡಲಾಗಿದೆ.
    4. *ಗಂಭೀರ ಪ್ರಕರಣಗಳನ್ನು ನಿರ್ವಹಿಸಲು ವೆಂಟಿಲೇಟರ್ ಮತ್ತು ಐಸಿಯು ಸೌಲಭ್ಯಗಳನ್ನು ಸಿದ್ಧವಾಗಿರಿಸಲು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ (DHO) ಸೂಚಿಸಲಾಗಿದೆ.

    ಸಾರ್ವಜನಿಕರಿಗೆ ಕಿವಿಮಾತು:

    “ಸೋಂಕಿನ ಲಕ್ಷಣಗಳು ಕಂಡ ತಕ್ಷಣ ಹತ್ತಿರದ ವೈದ್ಯರನ್ನು ಸಂಪರ್ಕಿಸಿ. ಜನದಟ್ಟಣೆ ಇರುವ ಪ್ರದೇಶಗಳಲ್ಲಿ ಮಾಸ್ಕ್ ಧರಿಸಿ ಹಾಗೂ ಕೈಗಳ ಸ್ವಚ್ಛತೆಗೆ ಆದ್ಯತೆ ನೀಡಿ” ಎಂದು ಇಲಾಖೆ ಮನವಿ ಮಾಡಿದೆ. ಈ ಫ್ಲೂ ಸಾಮಾನ್ಯವಾಗಿ 1 ರಿಂದ 3 ವಾರಗಳವರೆಗೆ ಇರಬಹುದು, ಆದ್ದರಿಂದ ನಿರ್ಲಕ್ಷ್ಯ ಬೇಡ ಎಂದು ಎಚ್ಚರಿಸಲಾಗಿದೆ.

    RELATED ARTICLES

    LEAVE A REPLY

    Please enter your comment!
    Please enter your name here

    - Advertisment -

    Most Popular

    Recent Comments

    error: Content is protected !!