ಭೋಪಾಲ್ : ಪತಿ ಮೃತಪಟ್ಟ ಒಂದು ಗಂಟೆಯಲ್ಲಿ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಭೋಪಾಲ್‌ನ ಲಾಲ್‌ಘಾಟಿಯ ಹಲಾಲ್‌ಪುರ ಬಸ್ ನಿಲ್ದಾಣದಲ್ಲಿ ಎರಡು ದಿನದ ಹಿಂದೆ ಘಟನೆ ನಡೆದಿದೆ. ರಾತಿಬಾದ್ ನಿವಾಸಿ, ತುಂಬು ಗರ್ಣಿಣಿಯಾಗಿದ್ದ ಬಬ್ಲಿ ಎಂಬಾಕೆಗೆ ರಾತ್ರಿ ವೇಳೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಪತಿ ಮಹೇಂದ್ರ ತನ್ನ ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾನೆ. ಹಲಾಲಪುರ ಬಸ್ ನಿಲ್ದಾಣ ಬಳಿ ರಸ್ತೆ ಸರಿಯಾಗಿ ಗೋಚರಿಸದೆ ಡಿವೈಡರ್‌ಗೆ ಕಾರು ಡಿಕ್ಕಿಯಾಗಿದೆ.
ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು ಗಾಯಗೊಂಡಿದ್ದು, ಗರ್ಭಿಣಿ ಪತ್ನಿ ಮಾತ್ರ ಅಪಾಯದಿಂದ ಪಾರಾಗಿದ್ದಾರೆ. ಗಂಭೀರ ಗಾಯಗೊಂಡಿದ್ದ ಮಹೇಂದ್ರ ಹಾಗೂ ಸಹೋದರ ಸತೀಶ್ ಹಾಗೂ ಇತರರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಷ್ಟೊತ್ತಿಗಾಗಲೆ ಮಹೇಂದ್ರ ಹಾಗೂ ಸತೀಶ್ ಕೊನೆಯುಸಿರೆಳೆದಿದ್ದರು. ಮತ್ತೊಂದೆಡೆ ಹೆರಿಗೆ ನೋವಿನಲ್ಲಿದ್ದ ಬಬ್ಲಿಯನ್ನು ಆಸ್ಪತ್ರೆಗೆ ದಾಖಲಿಸಿದ ಒಂದು ಗಂಟೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಹೆರಿಗೆಯಾದ ಕೆಲ ಗಂಟೆಗಳ ಬಳಿಕ ಆಕೆಗೆ ಪತಿ ಮೃತನಾದ ವಿಷಯ ತಿಳಿಸಲಾಗಿದೆ.
ಒಂದೆಡೆ ಮಗುವಿಗೆ ಜನ್ಮವಿತ್ತ ಖುಷಿ… ಮತ್ತೊಂದೆಡೆ ಪತಿಯನ್ನು ಕಳೆದುಕೊಂಡ ನೋವಿನಲ್ಲಿ ಬಬ್ಲಿ ಇದ್ದಾರೆ. ತಾಯಿ ಮಗು ಸದಸ್ಯ ಆಸ್ಪತ್ರೆಯಲ್ಲಿದ್ದಾರೆ.
ಹೆರಿಗೆಗೆ ಕರೆದೊಯ್ಯುವಾಗ ಪತಿ ದುರ್ಮರಣ – ಪತಿ ತೀರಿಕೊಂಡ ಒಂದೇ ಗಂಟೆಯಲ್ಲಿ ಹೆಣ್ಣು ಮಗುವಿಗೆ ಜನ್ಮವಿತ್ತ ಪತ್ನಿ..!
RELATED ARTICLES