ಮುಂಬೈ: ಸಲ್ಮಾನ್ ಖಾನ್ ಮನೆಯ ಹೊರಗೆ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂ೦ಧಪಟ್ಟಂತೆ, ಮುಂಬೈ ನ್ಯಾಯಾಲಯವು ಪಂಜಾಬ್‌ನಿಂದ ಬಂಧಿತ ಇಬ್ಬರು ಆರೋಪಿಗಳನ್ನು ಏಪ್ರಿಲ್ 30 ರವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ. ಈ ಆರೋಪಿಗಳು ಶೂಟರ್‌ಗಳಿಗೆ ಶಸ್ತ್ರಾಸ್ತ್ರಗಳು ಮತ್ತು ಕಾಟ್ರಿಡ್ಜ್‌ಗಳನ್ನು ಒದಗಿಸಿದ್ದರು ಎನ್ನಲಾಗಿದೆ.

ಪಂಜಾಬ್‌ನಿಂದ ಬಂಧಿತ ಇಬ್ಬರು ಆರೋಪಿಗಳ ಹೆಸರು ಸುಭಾಷ್ ಚಂದರ್ (37) ಮತ್ತು ಅನುಜ್ ಥಾಪನ್ (32) ಆಗಿದ್ದು, ಇಬ್ಬರನ್ನು ನಿನ್ನೆ ಏಪ್ರಿಲ್ 26 ಕ್ಕೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಇವರಿಬ್ಬರನ್ನು ಮುಂಬೈ ಕ್ರೈಂ ಬ್ರಾಂಚ್ ಗುರುವಾರ ಪಂಜಾಬ್‌ನಿಂದ ಬಂಧಿಸಿತ್ತು. ಇಬ್ಬರೂ ಕ್ರಿಮಿನಲ್‌ಗಳಿಗೂ ಪ್ರಕರಣಕ್ಕೂ ದೊಡ್ಡ ಸಂಬಂಧವಿದ್ದು, ಈ ಹಿನ್ನೆಲೆಯಲ್ಲಿ ಇಬ್ಬರನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದರು. ಹೀಗಾಗಿ ವಿಚಾರಣೆ ವೇಳೆ ಮಹತ್ವದ ಸಂಗತಿಗಳು ಹೊರಬೀಳಲಿವೆ ಎನ್ನಲಾಗಿದೆ. ಇವರಿಬ್ಬರಿಗೆ ಶಸ್ತ್ರಾಸ್ತ್ರಗಳನ್ನು ಒದಗಿಸಿದವರು ಯಾರು ? ಈ ಹಿಂದೆ ಬಂಧಿತರಾದ ಶೂಟರ್‌ಗಳಾದ ಸಾಗರ್ ಪಾಲ್ ಮತ್ತು ವಿಕ್ಕಿ ಗುಪ್ತಾಗೆ ಶಸ್ತ್ರಾಸ್ತ್ರಗಳನ್ನು ನೀಡುವಂತೆ ಹೇಳಿದ್ದು ಯಾರು? ಎಂಬುದನ್ನು ಪತ್ತೆ ಹಚ್ಚಲು ವಿಚಾರಣೆ ನಡೆಸಬೇಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶೂಟರ್‌ಗಳಾದ ಸಾಗರ್ ಪಾಲ್ ಮತ್ತು ವಿಕ್ಕಿ ಗುಪ್ತಾ ಅವರಿಗೆ ಪಿಸ್ತೂಲ್ ಗಳನ್ನ ಕೊಡಲು ಚಂದರ್ ಮತ್ತು ಥಾಪನ್ ಮಾರ್ಚ್ 15 ಕ್ಕೆ ಮುಂಬೈ ಸಮೀಪದ ಪನ್ವೆಲ್‌ಗೆ ಬಂದಿದ್ದರು ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದರು. ಈ ನಾಲ್ವರು ಆರೋಪಿಗಳ ಹೊರತಾಗಿ, ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಮತ್ತು ಅವರ ಕಿರಿಯ ಸಹೋದರ ಅನ್ಮೋಲ್ ಬಿಷ್ಣೋಯ್ ಅವರನ್ನು ಪ್ರಕರಣದಲ್ಲಿ ವಾಂಟೆಡ್ ಆರೋಪಿಗಳೆಂದು ಪೊಲೀಸರು ಘೋಷಿಸಿದ್ದಾರೆ. ಆರೋಪಿಗಳ ಪರ ವಾದ ಮಂಡಿಸಿದ ವಕೀಲ ಅಜಯ್ ದುಬೆ, ಚಂದರ್ ಮತ್ತು ಥಾಪನ್ ಆರೋಪಿಗಳಿಗೆ ಶಸ್ತ್ರಾಸ್ತ್ರಗಳನ್ನು ಒದಗಿಸಿಲ್ಲ ,ಪನ್ವೇಲ್‌ಗೆ ಭೇಟಿ ನೀಡಿಲ್ಲ ಮತ್ತು ಬಿಷ್ಣೋಯ್ ಗ್ಯಾಂಗ್‌ನೊಂದಿಗೆ ಇವರಿಬ್ಬರು ಯಾವುದೇ ಸಂಬಂಧವನ್ನು ಹೊಂದಿಲ್ಲ ಎಂದು ಹೇಳಿದರು. ತಮ್ಮ ಮೇಲಿನ ಆರೋಪಗಳೆಲ್ಲವೂ ಆಧಾರ ರಹಿತವಾಗಿದ್ದು, ಪ್ರಕರಣದಲ್ಲಿ ತಪ್ಪಾಗಿ ಸಿಲುಕಿಸಲಾಗಿದೆ ಎಂದು ಹೇಳಿದರು.