ಕೇರಳ : ಕೆಎಸ್‌ಆರ್ಟಿಸಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದಾಗಲೇ ಹೆರಿಗೆ ನೋವು ಕಾಣಿಸಿಕೊಂಡು ಮಹಿಳೆಯೊಬ್ಬರು ಬಸ್ ನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ಕೇರಳದಲ್ಲಿ ನಡೆದಿದೆ.

ಕೇರಳದ ತ್ರಿಶೂರ್ ನಿಂದ ಕೋಯಿಕ್ಕೋಡ್ ಗೆ ಪ್ರಯಾಣಿಸುತ್ತಿದ್ದ 37 ವರ್ಷದ ಮಹಿಳೆಗೆ ಬಸ್ ಪೆರಮಂಗಲಂ ಅನ್ನೋ ಜಾಗವನ್ನು ತಲುಪುತ್ತಿದ್ದಂತೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದೆ. ಕೂಡಲೆ ಈ ವಿಷಯ ತಿಳಿದ ಬಸ್ ಚಾಲಕ ತಕ್ಷಣ ಬಸ್ ನ್ನು ತ್ರಿಶೂರ್ ನ ಅಮಲಾ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆಸ್ಪತ್ರೆ ತಲುಪುತ್ತಿದ್ದಂತೆ ಸೀದಾ ಬಸ್ ನೊಳಗೆ ಬಂದ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ಸಮಯ ವ್ಯರ್ಥ ಮಾಡದೇ ಬಸ್ನಲ್ಲಿಯೇ ಹೆರಿಗೆ ಮಾಡಿಸಿದ್ದಾರೆ. ಹೆರಿಗೆಯ ನಂತರ, ತಾಯಿ ಮತ್ತು ಹೆಣ್ಣು ಮಗುವನ್ನು ವಾರ್ಡ್ ಗೆ ಶಿಫ್ಟ್ ಮಾಡಿದ್ದಾರೆ. ಸದ್ಯ ತಾಯಿ ಮಗು ಆರೋಗ್ಯವಾಗಿದ್ದಾರೆ.
ಸಾರಿಗೆ ಸಿಬ್ಬಂದಿ, ವೈದ್ಯರು ಮತ್ತು ಸ್ಥಳೀಯರು ಸಕಾಲದಲ್ಲಿ ಸಹಾಯ ಮಾಡಿ ಮಗುವನ್ನು ಸುರಕ್ಷಿತವಾಗಿ ಹೆರಿಗೆ ಮಾಡಿದ್ದಾರೆ.ಇನ್ನು ಹೆರಿಗೆಯ ಸಂದರ್ಭದಲ್ಲಿ ಅದಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳುತ್ತಿರುವ ವೀಡಿಯೋ ವೈರಲ್ ಆಗಿದೆ.
