ನ್ಯಾಯಾಂಗ ಬಂಧನವೋ..? ಮತ್ತೆ ಕಸ್ಟಡಿ ‘ಗೋ’..?
ಬೆಂಗಳೂರು: ದುರುದ್ದೇಶದಿಂದ ನನ್ನನ್ನ ಬಂಧಿಸಲಾಗಿದೆ ಅಂತಾ ಶಾಸಕ, ಮಾಜಿ ಸಚಿವ ಹೆಚ್.ಡಿ ರೇವಣ್ಣ ಆರೋಪ ಮಾಡಿದ್ದಾರೆ. ಇದು ರಾಜಕೀಯ ಷಡ್ಯಂತ್ರ ಎಂದಿರುವ ಹೆಚ್.ಡಿ ರೇವಣ್ಣ,40 ವರ್ಷದ ರಾಜಕಾರಣದಲ್ಲಿ ಯಾವುದೇ ಆಪಾದನೆ ಇಲ್ಲ ಎಂದರು. ನನ್ನ ಬಂಧನಕ್ಕೆ ಯಾವುದೇ ಪುರಾವೇ ಇಲ್ಲ, ಆದರೂ ಎಸ್ ಐ ಟಿ ಅಧಿಕಾರಿಗಳು ನನ್ನನ್ನ ಬಂಧನ ಮಾಡಿದ್ದಾರೆ ಅಂತಾ ಹೆಚ್.ಡಿ ರೇವಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಕೆಲ ಕ್ಷಣಗಳ ಹಿಂದೆಯಷ್ಟೇ ರೇವಣ್ಣರನ್ನ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ವೈದ್ಯಕೀಯ ತಪಾಸಣೆಗೆ ಕರೆದುಕೊಂಡು ಬಂದ್ರು. ಈ ವೇಳೆ ಮಾಧ್ಯಮಗಳಿಗೆ ಎದುರಾದ ಹೆಚ್,ಡಿ ರೇವಣ್ಣ ಎಸ್ ಐ ಟಿ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಇನ್ನೂ ಬೌರಿಂಗ್ ಆಸ್ಪತ್ರೆಯಲ್ಲಿ ರೇವಣ್ಣರಿಗೆ ಮೆಡಿಕಲ್ ಚೆಕಪ್ ಮಾಡಿದ ನಂತರ ನ್ಯಾಯಾಧೀಶರ ಮುಂದೆ ರೇವಣ್ಣರನ್ನ ಎಸ್ ಐ ಟಿ ಅಧಿಕಾರಿಗಳು ಹಾಜರು ಪಡಿಸಲಿದ್ದಾರೆ.

ಬೌರಿಂಗ್ ಆಸ್ಪತ್ರೆ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ರೇವಣ್ಣ
ನ್ಯಾಯಾಂಗ ಬಂಧನವೋ..? ಮತ್ತೆ ಕಸ್ಟಡಿ ‘ಗೋ’..?
ನ್ಯಾಯಾಧೀಶರ ಮುಂದೆ ಇನ್ನೇನು ಕೆಲವೇ ಕ್ಷಣಗಳಲ್ಲಿ ಹೆಚ್.ಡಿ ರೇವಣ್ಣರನ್ನ ಎಸ್ ಐ ಟಿ ಅಧಿಕಾರಿಗಳು ಹಾಜುರು ಪಡಿಸಲಿದ್ದು, ಹೆಚ್,ಡಿ ರೇವಣ್ಣರನ್ನ ಜಡ್ಜ್, ನ್ಯಾಯಾಂಗ ಬಂಧನಕ್ಕೆ ಒಳಪಡಿಸುತ್ತಾರೋ.. ಅಥವಾ ಎಸ್ ಐ ಟಿ ಕಸ್ಟಡಿಗೆ ಕೊಡುತ್ತಾರೋ ಗೊತ್ತಾಗಬೇಕಿದೆ. ಇನ್ನೂ ಹೆಚ್ಚಿನ ವಿಚಾರಣೆಯ ಅಗತ್ಯವಿರುವುದರಿಂದ ಸಹಜವಾಗಿ ಎಸ್ ಐ ಟಿ ಅಧಿಕಾರಿಗಳು, ಜಡ್ಜ್ ಬಳಿ ರೇವಣ್ಣರನ್ನ ಮತ್ತೆ ಕಸ್ಟಡಿಗೆ ಕೊಡುವಂತೆ ಮನವಿ ಸಲ್ಲಿಸಲಿದ್ದಾರೆ. ಆದ್ರೆ ಜಡ್ಜ್ ಯಾವ ರೀತಿಯ ತೀರ್ಮಾನ ತೆಗೆದುಕೊಳ್ಳುತ್ತಾರೆ ಅನ್ನೋದು ಕೆಲವೇ ಕ್ಷಣಗಳಲ್ಲಿ ಗೊತ್ತಾಗಲಿದೆ. ಕಸ್ಟಡಿಗೆ ಕೊಡದೇ ಒಂದು ವೇಳೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ರೆ ಪರಪ್ಪನ ಅಗ್ರಹಾರ ಜೈಲಿಗೆ ರೇವಣ್ಣ ಹೋಗೋದು ಬಹುತೇಕ ಖಚಿತವಾಗಿದೆ.
(ಕ್ಷಣಕ್ಷಣದ ಸುದ್ದಿಗಳಿಗಾಗಿ ಪಬ್ಲಿಕ್ ಇಂಪ್ಯಾಕ್ಟ್ ವೆಬ್ ಸೈಟ್(publicimpact.in) ಫಾಲೋ ಮಾಡಿ)