
ಬೆಂಗಳೂರು: ಮಾಜಿ ಸಚಿವ, ಹಾಲಿ ಶಾಸಕ ಹೆಚ್.ಡಿ ರೇವಣ್ಣರನ್ನ 4 ದಿನ ಪೊಲೀಸ್ ಕಸ್ಟಡಿಗೆ ನೀಡಿ ಜಡ್ಜ್ ಆದೇಶಿಸಿದ್ದಾರೆ. ನಿನ್ನೆ ಬೆಂಗಳೂರಿನ ಪದ್ಮನಾಭನಗರದ ದೇವೇಗೌಡರ ಮನೆಯಲ್ಲಿ ರೇವಣ್ಣರನ್ನ ಬಂಧಿಸಿದ್ದ ಎಸ್ ಐ ಟಿ ಅಧಿಕಾರಿಗಳು, ಇಂದು ಸಂಜೆ ಜಡ್ಜ್ ಎದುರು ರೇವಣ್ಣರನ್ನ ಹಾಜರು ಪಡಿಸಿದ್ರು. ವೈದ್ಯಕೀಯ ಪರೀಕ್ಷೆ ಮುಗಿಸಿ, ರೇವಣ್ಣರನ್ನ ಜಡ್ಜ್ ಮುಂದೆ ಹಾಜುರು ಪಡಿಸಲಾಗಿತ್ತು. ಇನ್ನೂ ಹೆಚ್ಚಿನ ವಿಚಾರಣೆ ಅಗತ್ಯವಿರೋದ್ರಿಂದ ಹೆಚ್.ಡಿ ರೇವಣ್ಣರನ್ನ ಎಸ್ ಐ ಟಿ ಅಧಿಕಾರಿಗಳು 4 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡುವಂತೆ ಜಡ್ಜ್ ಬಳಿ ಮನವಿ ಮಾಡಿದ್ರು. ಎಸ್.ಐ.ಟಿ ಅಧಿಕಾರಿಗಳ ಮನವಿಯನ್ನ ಪುರಸ್ಕರಿಸಿದ ಜಡ್ಜ್ ರವೀಂದ್ರ ಕಟ್ಟಿಮುನಿ ಅವರು ಮಾಜಿ ಸಚಿವ, ಹಾಲಿ ಶಾಸಕ ರೇವಣ್ಣರನ್ನ 4 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದ್ದಾರೆ. ಹೀಗಾಗಿ ಇನ್ನೂ ನಾಲ್ಕು ದಿನಗಳ ಕಾಲ ಹೆಚ್,ಡಿ ರೇವಣ್ಣ ಎಸ್.ಐ.ಟಿ ಅಧಿಕಾರಿಗಳ ವಿಚಾರಣೆಯನ್ನ ಎದುರಿಸಲೇ ಬೇಕಾಗಿದೆ.