ಅಜ್ಜಂಪುರ:ಗ್ರಾಮ ಪಂಚಾಯಿತಿಯಾಗಿದ್ದನ್ನು ಮೇಲ್ದರ್ಜೆಗೆ ಏರಿಸಿ ಪಟ್ಟಣ ಪಂಚಾಯತಿಯಾಗಿ ಹಲವು ತಕರಾರುಗಳಿಂದಾಗಿ ಐದಾರು ವರ್ಷಗಳು ಚುನಾವಣೆ ನಡೆದಿಲ್ಲ. ಆಗಸ್ಟ್ 17 ರಂದು ಚುನಾವಣೆ ನಡೆಯಲಿದ್ದು 11 ವಾರ್ಡ್‌ಗಳಿಗೆ ಅಭ್ಯರ್ಥಿಗಳನ್ನು ಚುನಾವಣಾ ಅಖಾಡಕ್ಕೆ ಇಳಿಸಲು ಕಾಂಗ್ರೆಸ್ ಮತ್ತು ಬಿಜೆಪಿ ತಯಾರಿ ನಡೆಸುತ್ತಿವೆ.
ಕೆಲ ವಾರ್ಡ್ ಗಳಲ್ಲಿ ಕಾಂಗ್ರೆಸ್ ಬಿಜೆಪಿಗೆ ತಲೆ ನೋವು ಸೃಷ್ಟಿಯಾಗಿದೆ.ಆಗಸ್ಟ್ 5 ನಾಮ ಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು ಆಕಾಂಕ್ಷೆಗಳಿಗೆ ಎದೆ ಬಡೆತ ಇದ್ದೇ ಇರುತ್ತದೆ.ಈ ವಾರ್ಡ್ ಗೆ ಅವರಂತೆ,ಇವರಂತೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಬಿಜೆಪಿಗೆ 1 ಮತ್ತು2 ನೇ ವಾರ್ಡ್‌ನಲ್ಲಿ ಗೊಂದಲವಿದ್ದರೆ ಕಾಂಗ್ರೆಸ್ ಗೆ 8 ಮತ್ತು 11 ವಾರ್ಡ್‌ನಲ್ಲಿ ಗೊಂದಲವಿದೆ.ಹೀಗಾಗಿ ಕೆಲ ಅನಿರೀಕ್ಷಿತ ರಾಜಕೀಯ ಬೆಳವಣಿಗೆ ಆಗುತ್ತದೆ ಎಂದು ಹೇಳಲಾಗುತ್ತದೆ.
ಅಜ್ಜಂಪುರದ ರಾಜಕೀಯ ರೂವಾರಿಗಳೆಂದು ಕರೆಸಿ ಕೊಳ್ಳುತ್ತಿದ್ದ ದಿವಂಗತ ಕೃಷ್ಣೋಜಿ ರಾವ್ ಚವಾಣ್ ಮಗ ಗಿರೀಶ್ ಚವಾಣ್ ಗೆ ಸ್ಪರ್ಧೆ ಮಾಡುವ ಅವಕಾಶವಿದ್ದರೂ ಸ್ಪರ್ಧೆ ಮಾಡುತ್ತಿಲ್ಲ.
ಶಾಸಕರಿದ್ದು ಆಡಳಿತಾರೂಢ ಕಾಂಗ್ರೆಸ್ ನಲ್ಲೂ ಗೊಂದಲಗಳು ಇವೆ.ಬಿಜೆಪಿ ಯಲ್ಲೂ ತಲೆನೋವು ಇದೆ.ಐದನೇ ತಾರೀಖಿನ ತನಕ ರಾಜಕೀಯ ಗೊಂದಲ ಮುಂದುವರಿಯಲಿದೆ ಎಂದು ಎರಡು ಪಕ್ಷದವರು ಹೇಳುತ್ತಿದ್ದಾರೆ.ಕಾಂಗ್ರೆಸ್ ಶಾಸಕ ಶ್ರೀನಿವಾಸ್ ಗೆ ಪ್ರತಿಷ್ಠೆ ಆದರೆ ಮಾಜಿ ಶಾಸಕರುಗಳಾದ ಡಿ.ಎಸ್.ಸುರೇಶ್ ಮತ್ತು ಎಸ್.ಎಂ.ನಾಗರಾಜುಗೂ ಪ್ರತಿಷ್ಠೆಯಾಗಿದೆ.