ಚಿಕ್ಕಮಗಳೂರು: ನಯನಮೋಟಮ್ಮ ನಯನ ಕಮಲಮ್ಮ ಆಗುವುದು ಬಹುತೇಕ ಖಚಿತ ಎನ್ನುವಂತೆ ಮಾತನಾಡುತ್ತಿದ್ದಾರೆ.ಬದಲಾವಣೆ ಆಗುವ ಸಮಯ ಬಂದಾಗ ನೋಡುವ ಎಂದರೆ ತಾಯಿ ಮೋಟಮ್ಮ ಕಾಂಗ್ರೆಸ್ ಬಿಡ ಬೇಡ ಎನ್ನುತ್ತಿದ್ದಾರೆ ಎಂದರೆ ಏನೋ ಗುಸು,ಗುಸು ನಡೆಯುತ್ತಿದೆ ಎಂದು ಅಂದಾಜಿಸಲಾಗಿದೆ. ಗುರುವಿನ ತಂತ್ರ ಪ್ರಯೋಗ ಮಾಡುತ್ತಿರಬಹುದು ಎಂದು ಕಾಂಗ್ರೆಸ್ ನವರು ಹೇಳುತ್ತಿದ್ದಾರೆ.
ಪ್ರಗತಿಪರರು ಸಿಡಿದು ಬೀಳುತ್ತಿದ್ದಾರೆ .ಗಾಂಧಿ ಪ್ರತಿಮೆ ಮುಂದೆ ಪಶ್ಚಾತ್ತಾಪ ಪ್ರತಿಭಟನೆ ನಡೆಸಿ ಕೆಂಡ ಕಾರಿದ್ದಾರೆ. ರೈತ ಸಂಘ,ದಲಿತ ಸಂಘಟನೆಗಳು, ಎಸ್.ಡಿ.ಪಿ.ಐ. ಮತ್ತು ಕಾಂಗ್ರೆಸ್ ಕೆಲವು ಮುಖಂಡರು ಭಾಗವಹಿಸಿದ್ದರು.
ಕ್ರಿಮಿನಲ್ ಪ್ರಮೋದ್ ಮುತಾಲಿಕ್ ಜೊತೆಗೆ ವೇದಿಕೆ ಹಂಚಿಕೊಂಡ ಬಗ್ಗೆ ನಯನ ನಡೆ ಜೊತೆಗೆ ಅವರ ವರ್ತನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ನ ವಕ್ತಾರ ದೇವರಾಜ್, ಮರಗುಂದ ಪ್ರಸನ್ನ ಭರತ್ ರೈತ ಸಂಘದ ಗುರುಶಾಂತಪ್ಪ ಮತ್ತು ಜಿಲ್ಲಾ ಅಧ್ಯಕ್ಷ ಮಹೇಶ್ ಗುಡುಗಿದರು.ಮರ್ಲೆ ಅಣ್ಣಯ್ಯ,ಸಿ.ಪಿ.ಎಂ.ಎಲ್.ರುದ್ರಯ್ಯ .ಎಸ್.ಡಿ.ಪಿ.ಐ ಅಂಗಡಿ ಚಂದ್ರು ನಯನ ನಡೆಯನ್ನು ಜಾಲಾಡಿದರು ಬಿಜೆಪಿ ಉಗ್ರ ಹಿಂದುತ್ವ ಕಾಂಗ್ರೆಸ್ ಸಾಮಾನ್ಯ ಹಿಂದುತ್ವದ ದಾರಿಯಲ್ಲಿ ನಡೆಯುತ್ತಿವೆ.ಇವುಗಳನ್ನು ಬಗ್ಗು ಬಡೆಯದಿದ್ದರೆ ಮುಂದೆ ಅನಾಹುತ ಖಚಿತ.
ಪಶ್ಚಾತ್ತಾಪ ಸಾಲದು ಹೋರಾಟ ರೂಪಿಸಲು ಕರೆ ನೀಡಿದರು ಇದರಿಂದಾಗಿ ಸದ್ಯಕ್ಕೆ ಈ ರಗಳೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ನಯನ ಕಮಲಮ್ಮ ನಡೆ ಮಾತ್ರ ಕಮಲದ ಕಡೆ ಇರುವುದು ನಿಗೂಢವಾಗಿದೆ ಎಂದು ಹೋರಾಟಗಾರರ ಅನಿಸಿಕೆ ಮುಂದೆ ದಾರಿ ಯಾವುದಯ್ಯಾ ಎಂದು ಕಾರ್ಯಕರ್ತರ ಅಳಲು.