ಚಿಕ್ಕಮಗಳೂರು: ಜಿಲ್ಲೆಯಲ್ಲಿಈ ಬಾರಿ ಧಾರಾಕಾರವಾಗಿ ಮಳೆ ಸುರಿಯುತ್ತಿರುವುದರಿಂದ ಹಳ್ಳ ಕೊಳ್ಳ ಸೇರಿದಂತೆ ಬಹುತೇಕ ನದಿಗಳು ಭರ್ತಿಯಾಗಿವೆ. ರಾಜ್ಯದ ಎರಡನೇ ಅತಿ ದೊಡ್ಡ ಕೆರೆಯಾದ ಅಯ್ಯನಕೆರೆ ಕೂಡ ತುಂಬಿದೆ.
ಹೀಗಾಗಿ ಶಾಸಕ ಎಚ್.ಡಿ.ತಮ್ಮಯ್ಯ ದಂಪತಿ ಹಾಗೂ ವಿಧಾನಪರಿಷತ್ ಸದಸ್ಯ ಬೋಜೇಗೌಡ ಸೇರಿದಂತೆ ಹಲವರು ಅಧಿಕಾರಿಗಳು, ಮಠಾಧೀಶರು ಕೆರೆಗೆ ಬಾಗಿನ ಅರ್ಪಿಸಿದ್ದಾರೆ.
ಸಖರಾಯಪಟ್ಟಣ ಬಳಿ ಇರುವ ಕೆರೆ ತುಂಬಿರುವುದರಿಂದ ಸುತ್ತಮುತಲ ಗ್ರಾಮಗಳಿಗೆ ಮತ್ತು ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಿದೆ.