ಏಪ್ರಿಲ್ 14, 1891 ರಲ್ಲಿ ಮಧ್ಯಪ್ರದೇಶದ ಮಾಹೋನಲ್ಲಿ ಜನಿಸಿದ ಡಾ. ಬಿ. ಆರ್. ಅಂಬೇಡ್ಕರ್… ಭಾರತದ ಹೆಮ್ಮೆಯ ಪುತ್ರ… ನಮ್ಮ ರಾಷ್ಟ್ರ ಕಂಡ ಶ್ರೇಷ್ಠ ನಾಯಕರಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೂಡಾ ಪ್ರಮುಖರು. ಬಾಬಾ ಸಾಹೇಬ್ ಅವರ ವಿಚಾರಧಾರೆಗಳು ಇಂದಿಗೂ ಅಜಾರಮರ. ಇವರ ಸಾಧನೆ, ದೇಶಕ್ಕೆ ಕೊಟ್ಟ ಕೊಡುಗೆಯನ್ನು ಸ್ಮರಿಸಲು ಏಪ್ರಿಲ್ 14ರಂದು ಪ್ರತಿವರ್ಷ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಗುತ್ತದೆ.
ಸಂವಿಧಾನ ಶಿಲ್ಪಿ, ಭಾರತರತ್ನ ನ್ಯಾಯ ಶಾಸ್ತ್ರಜ್ಞರಾಗಿ, ಅರ್ಥಶಾಸ್ತ್ರಜ್ಞರಾಗಿ, ಸಮಾಜ ಸುಧಾರಕರಾಗಿ, ಮಹಿಳೆಯರು, ದಲಿತರು, ಅಲ್ಪಸಂಖ್ಯಾತರು ಸೇರಿದಂತೆ, ಅಸ್ಪೃಶ್ಯತೆ, ಅಸಮಾನತೆಯ ವಿರುದ್ಧ ದಿಟ್ಟತನದಿಂದ ಹೋರಾಡಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗುವಂತೆ ಮಾಡಿದ ಆಶಾ ಕಿರಣ ಡಾ ಬಿಆರ್ ಅಂಬೇಡ್ಕರ್‌ರವರು.
ಪದವಿ ಮುಗಿಸಿ ಬರೋಡಾದಲ್ಲಿದ್ದಾಗ ಅವರು ತಮ್ಮ ತಂದೆಯನ್ನು ಕಳೆದುಕೊಂಡರು, ಪದವಿ ಮುಗಿಸಿದೆ ಎನ್ನುವ ಖುಷಿಗಿಂತ ತಂದೆಯನ್ನು ಕಳೆದುಕೊಂಡ ನೋವು ಅಂಬೇಡ್ಕರ್ ರವರನ್ನು ಕಾಡುತ್ತಿತ್ತು. ಆದರೆ ಇವರ ಈಡೀ ಪರಿವಾರ ಅಸ್ಪೃಶ್ಯತೆ ನೋವು ಅನುಭವಿಸಿದ್ದರು. ಬಾಬಾ ಸಾಹೇಬ್ ರವರ ತಂದೆ ಸುಬೇದಾರ್ ರಾಮ್‌ಜಿ ಮಾಲೋಜಿ ಸಕ್ಪಾಲ್ ತಮ್ಮ ಬದುಕಿನ ಅವಧಿಯಲ್ಲಿ ಅನ್ಯಾಯದ ವಿರುದ್ಧ ಹೋರಾಡುವಂತೆ ತಮ್ಮ ಪುತ್ರ ಬಿ. ಆರ್. ಅಂಬೇಡ್ಕರ್ ರವರಿಗೆ ಪ್ರೇರಣೆ ನೀಡುತ್ತಿದ್ದರು.
ಹೀಗಾಗಿ ತಮ್ಮ ತಂದೆಯನ್ನು ಕಳೆದುಕೊಂಡ ನೋವಿನಲ್ಲೂ ಬಾಬಾ ಸಾಹೇಬ್ ರವರು ಛಲ ಬಿಡದೇ ಜ್ಞಾನ ಸಂಪಾದಿಸು ನಿಟ್ಟಿನಲ್ಲಿ ಜರ್ಮನ್, ಲಂಡನ್, ಹೀಗೆ ನಾನಾ ದೇಶದಲ್ಲಿ ಉನ್ನತ್ತ ಶಿಕ್ಷಣ ಪಡೆದರು. ಲಂಡನ್ ನಲ್ಲಿ ಗ್ರೇಸ್ ಇನ್ ಫಾರ್ ಲಾ ಗೆ ಸೇರಿ D. Sc ಪದವಿ ಪಡೆದರು. ಜರ್ಮನಿಯ ಬಾನ್ ವಿಶ್ವವಿದ್ಯಾಲಯದಿಂದ ಡಿ.ಎಸ್ಸಿ. ಪದವಿ , ‘ಭಾರತಕ್ಕೆ ರಾಷ್ಟ್ರೀಯ ಲಾಭಾಂಶ – ಐತಿಹಾಸಿಕ ಮತ್ತು ವಿಶ್ಲೇಷಣಾತ್ಮಕ ಅಧ್ಯಯನ’ ಕುರಿತು ಪಿಎಚ್‌ಡಿ ಪದವಿ, ಅರ್ಥಶಾಸ್ತ್ರ ಮತ್ತು ರಾಜಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ, ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, 1923 ರಲ್ಲಿ ಲಂಡನ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಮತ್ತು 1927 ರಲ್ಲಿ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದರು. ಹೀಗೆ ನಾನಾ ಪದವಿ ಪಡೆದು ಜ್ಞಾನ ಸಂಪಾದಿಸಿಕೊಂಡರು.
ಡಾ.ಬಿ.ಆರ್.ಅಂಬೇಡ್ಕರ್ ರವರಿಗೆ ಇದ್ದ ಪದವಿಗಳನ್ನು ಬಳಸಿಕೊಂಡು ಯಾವ ಹುದ್ದೆಯನ್ನಾದರೂ ಪಡೆಯಬಹುದಿತ್ತು ಆದರೆ ತಮ್ಮ ಜ್ಞಾನವನ್ನು ಧೀನ ದಲಿತರ ಪರವಾಗಿ, ಅನ್ಯಾಯದ ವಿರುದ್ಧ ಧ್ವನಿ ಎತ್ತುವ ನಿಟ್ಟಿನಲ್ಲಿ ಸಂವಿಧಾನವನ್ನು ರಚಿಸಲು ಬಳಸಿಕೊಂಡರು. ಆದರೆ ಭಾರತದಲ್ಲಿ ಇಂತಹ ಮಹಾನ್ ವ್ಯಕ್ತಿಯ ಆದರ್ಶಗಳನ್ನು ಯಾರೊಬ್ಬ ರಾಜಕಾರಣಿ ತಿಳಿದುಕೊಳ್ಳದೇ ತಮ್ಮ ಸ್ವಾರ್ಥಕ್ಕಾಗಿ ಇವರ ಹೆಸರನ್ನು ಬಳಸಿಕೊಳ್ಳುತ್ತಾರೆ ಎಂಬುವುದು ಬೇಸರದ ಸಂಗತಿ.
-ಕಾವ್ಯಶ್ರೀ ಕಲ್ಮನೆ
Dr B R AMBEDKAR’S GIFTS IN SOCIETY