ಚಿಕ್ಕಮಗಳೂರು; ಪೆನ್ ಡ್ರೈವ್ ವಿಚಾರ ಎಲ್ಲಾ ಕುಮಾರಸ್ವಾಮಿಗೆ ಗೊತ್ತು ಎಂದು ಚಿಕ್ಕಮಗಳೂರಿನಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಲೋಕಸಭಾ ಚುನಾವಣೆ ಮುಗಿದಿರೋದರಿಂದ ನಾನು ರೆಸ್ಟ್ ಗಾಗಿ ಸಿದ್ಧಾರ್ಥ್ ಮನೆಗೆ ಬಂದಿದ್ದೇನೆ ಎಂದ ಅವರು, ಪೆನ್ ಡ್ರೈವ್ ವಿಚಾರ ಎಲ್ಲ ಕುಮಾರಸ್ವಾಮಿಗೆ ಗೊತ್ತು.ಕುಮಾರಣ್ಣನಿಗೆ ನನ್ನ ರಾಜೀನಾಮೆ ಬೇಕಂತೆ.ಒಕ್ಕಲಿಗ ನಾಯಕರ ಪೈಪೋಟಿಯಂತೆ, ರಾಜೀನಾಮೆ ಬೇಕಂತೆ ಕೊಡೋಣ ರಾಜೀನಾಮೆ ಎಂದಿದ್ದಾರೆ.
ಕುಮಾರಸ್ವಾಮಿ ಕಿಂಗ್ ಆಫ್ ಬ್ಲಾಕ್ ಮೇಲ್.ಆಫೀಸರ್ಸ್ , ಪೊಲಿಟಿಷಿಯನ್ಸ್ ಗಳಿಗೆ ಹೆದರಿಸುತ್ತಿದ್ದಾರೆ ಅವರದು ಇದೇ ಕೆಲಸ ಎಂದಿದ್ದಾರೆ.ಚರ್ಚೆ ಮಾಡಲು ಟೈಮ್ ಇದೆ . ಅಸೆಂಬ್ಲಿ ಇದೆ ಎಲ್ಲಾ ತಗೊಂಡ್ ಬರ್ಲಿ ಅಲ್ಲಿ ಚರ್ಚೆ ಮಾಡೋಣ ಎಂದು ಡಿಕೆಶಿ ಹೇಳಿದ್ದಾರೆ.
ಇನ್ನು ಇದೇ ವೇಳೆ ಮಾತನಾಡಿದ ಅವರು, ಮೊದಲು ಅವರ ಹೆಸರು ಸ್ಟ್ಯಾಂಡ್ ಆಗಲಿ, ದೇವೇಗೌಡರು ಹಾಗೂ ನನ್ನ ಹೆಸರು ತೆಗೆದುಕೊಳ್ಳುವುದು ಬೇಡ ಎಂದಿದ್ದಾರೆ.ಅವರದ್ದೇ ಬೇರೆ ಫ್ಯಾಮಿಲಿ ನಮ್ಮದೇ ಬೇರೆ ಫ್ಯಾಮಿಲಿ ಎಂದಿದ್ದಾರೆ.ಉಪ್ಪು ತಿಂದವನು ನೀರು ಕುಡಿಬೇಕು ಎಂದವರು ಈಗ ಯಾಕೆ ಉರಿ ಮಾಡಿಕೊಳ್ಳುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ನನ್ನ ಮೇಲೆ ಮಾಡದಿದ್ರೆ ಮಾರ್ಕೆಟ್ ಓಡಲ್ಲ.ನನ್ನ ಹೆಸರು ಇರದಿದ್ರೆ ನೀವು ತೋರ್ಸಲ್ಲ.ನನ್ನ ಹೆಸರು ಇಲ್ಲದಿದ್ರೆ ಪಾಪ ನಿದ್ದೆಯೇ ಬರಲ್ಲ ಅದಕ್ಕಾಗಿ ನನ್ನ ಹೆಸರು ತೆಗೆದುಕೊಳ್ಳುತ್ತಾರೆ ಎಂದು ಅವರು ಹೇಳಿದ್ದಾರೆ.