ಜಯಪುರ: ಸಂಘಟನಾ ಚತುರ ಎಂದೇ ಹೆಸರಾದ ದೇವರಾಜ್ (ಪವಿಯಣ್ಣ) ಅವರು ಇಂದು ಸಂಜೆ ಜಯಪುರ ಸಮೀಪದ ಮಕ್ಕಿಕೊಪ್ಪ ಸಭಾ ಭವನದಲ್ಲಿ ಮೇಗುಂದ ಹೋಬಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಹಲವಾರು ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ಇವರು, ಪಕ್ಷದ ನಾಯಕರ ಅತ್ಯಂತ ಆತ್ಮೀಯ ಹಾಗೂ ನಿಷ್ಠಾವಂತ ಕಾರ್ಯಕರ್ತರಾಗಿದ್ದಾರೆ. ಇವರ ಬೆನ್ನಿಗಿರುವ ಬೃಹತ್ ಯುವ ಸಮೂಹವೇ ದೇವರಾಜ್ ಅವರಿಗೆ ಅತಿದೊಡ್ಡ ಶಕ್ತಿಯಾಗಿದೆ.
ಮೇಗುಂದ ಹೋಬಳಿಯಾದ್ಯಂತ ದೇವರಾಜ್ ಅವರು ಇಂದು ಅಧಿಕಾರ ಸ್ವೀಕರಿಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಯ ವಿಷಯವಾಗಿದೆ.
ಇವರ ನೇತೃತ್ವದಲ್ಲಿ ಮೇಗುಂದ ಹೋಬಳಿಯಲ್ಲಿ ಪಕ್ಷವು ಬಲಿಷ್ಠವಾಗುವುದಲ್ಲದೆ, ಈ ಭಾಗದಲ್ಲಿ ಅಭಿವೃದ್ಧಿ ಕಾರ್ಯಗಳು ವೇಗ ಪಡೆಯಲಿವೆ ಎಂಬ ಮಹದಾಸೆಯನ್ನು ಪಕ್ಷದ ಕಾರ್ಯಕರ್ತರು ಹೊಂದಿದ್ದಾರೆ.
