ಚಿಕ್ಕಮಗಳೂರು: ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟಿರುವ ಪ್ರಕರಣದ ತನಿಖೆಯನ್ನ ವಿಶೇಷ ತಂಡ ಮುಂದುವರೆಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು, ನಮ್ಮ ಆಕ್ಷೇಪ ಇರುವುದು ಧರ್ಮಸ್ಥಳದ ವಿರುದ್ಧ ಚ್ಯುತಿ ತರುವ ಷಡ್ಯಂತ್ರದ ವಿರುದ್ಧ. ತನಿಖೆ ಪಾರದರ್ಶಕ ಮತ್ತು ಪ್ರಾಮಾಣಿಕವಾಗಿ ನಡೆಯಲಿ. ನಾವು ಯಾರು ಅಡ್ಡಗಾಲು ಹಾಕುವುದಿಲ್ಲ ಎಂದು ತಿಳಿಸಿದರು.

ಧರ್ಮಸ್ಥಳದ ಧರ್ಮಾಧಿಕಾರಿಗೆ ಮಸಿ ಬಳಿಯುವ ಷಡ್ಯಂತ್ರವನ್ನು ಸಹಿಸಲು ಸಾಧ್ಯವಿಲ್ಲ. ಇದರ ವಿರುದ್ಧ ಜನರೇ ಸಿಡಿದೇಳುತ್ತಾರೆ. ಪ್ರಕರಣದ ಸತ್ಯಾಸತ್ಯತೆ ಪರಿಶೀಲನೆ ಆಗಲಿ. ತನಿಖಾ ಹಂತದಲ್ಲಿ ನಾನು ಏನು ಮಾತನಾಡುವುದಿಲ್ಲ.
ಆದರೆ ಷಡ್ಯಂತ್ರ ಮಾಡುತ್ತಿರುವವರು ಬಾಲ ಬಿಚ್ಚಿದರೆ ಸಮಾಜವೇ ಉತ್ತರ ಕೊಡುತ್ತದೆ. ಸಜ್ಜನರು ಸುಮ್ಮನಿದ್ದಾರೆ ಎಂದು ದುರ್ಜನರು ಮೆರೆಯಬಹುದು ಎಂದುಕೊAಡರೆ ಅದು ಒಳ್ಳೆಯದಲ್ಲ ಎಂದರು.