ಹಾಸನ : ಜಿಲ್ಲೆಯಲ್ಲಿ ತೆಂಗು ಮತ್ತು ಮೆಕ್ಕೆಜೋಳ ಕೃಷಿ ರೋಗಗಳಿಂದ ಹೆಚ್ಚು ಬಾಧಿತವಾಗುತ್ತಿದ್ದು, ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಸಂಸದ ಶ್ರೇಯಸ್ ಪಟೇಲ್ ಮನವಿ ಮಾಡಿದ್ದಾರೆ.
ಲೋಕಸಭೆಯ ಶೂನ್ಯವೇಳೆಯಲ್ಲಿ ಮಾತನಾಡಿದ ಅವರು, ಫಂಗಲ್ ಕಾಯಿಲೆಯಿಂದ ಮೆಕ್ಕೆಜೋಳಕ್ಕೆ ಭಾರೀ ಹಾನಿ ಆಗಿದೆ. 45 ಸಾವಿರ ಹೆಕ್ಟೇರ್ ಪೈಕಿ 12 ಸಾವಿರ ಹೆಕ್ಟೇರ್ ಈಗಾಗಲೇ ಹಾನಿಗೀಡಾಗಿದೆ. ಐಸಿಎಆರ್ ಸರ್ವೆ ಮಾಡಿ ಪರಿಹಾರ ಕೊಡಬೇಕು ಎಂದು ಸಲಹೆ ನೀಡಿದೆ.
ತೆಂಗು ಬೆಳೆ ನನ್ನ ಜಿಲ್ಲೆಯಲ್ಲಿಯೇ ಹೆಚ್ಚಾಗಿದೆ. 1.18 ಲಕ್ಷ ಹೆಕ್ಟೇರ್ ಚನ್ನರಾಯಪಟ್ಟಣ ಹಾಗೂ ಅರಸೀಕೆರೆ ತಾಲೂಕಿನಲ್ಲಿ 82 ಸಾವಿರ ಹೆಕ್ಟೇರ್ ರೋಗಪೀಡಿತವಾಗಿದೆ. ತೆಂಗು ಅಭಿವೃದ್ಧಿ ಮಂಡಳಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.