ರಾಮನಗರ: ಮಾಜಿ ಸಿಎಂ ಹೆಚ್. ಡಿ.ಕುಮಾರಸ್ವಾಮಿ ತೋಟದ ಮನೆಯಲ್ಲಿ ಬಾಡೂಟ ಆಯೋಜನೆ ಹಿನ್ನಲೆ ಚುನಾವಣಾ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದ್ರು. ರಾಮನಗರ ತಾಲ್ಲೂಕು ಕೇತಿಗಾನಹಳ್ಳಿ ಬಳಿ ಇರೋ ತೋಟದ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಂದು ಯುಗಾದಿಯ ಹೊಸದೊಡಕು ಹಿನ್ನಲೆ ಒಕ್ಕಲಿಗ ನಾಯಕರು, ಮುಖಂಡರು, ಕಾರ್ಯಕರ್ತರಿಗೆ ಕುಮಾರಸ್ವಾಮಿ ಔತಣಕೂಟ ಆಯೋಜಿಸಿದ್ರು. ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಹಿನ್ನೆಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ತೋಟದ ಮನೆ ಚೆಕ್ ಮಾಡಲು ಬಂದ ಚುನಾವಣಾ ಅಧಿಕಾರಿಗಳಿಗೆ ಗೇಟ್ ಒಪನ್ ಮಾಡದೇ ತೋಟದ ಮನೆ ಸಿಬ್ಬಂದಿ ಸತಾಯಿಸಿದ್ದಾರೆ.

ಕೊನೆಗೂ ಮನೆ ಒಳಗೆ ಪ್ರವೇಶಿಸಿದ ಅಧಿಕಾರಿಗಳು ಬಾಡೂಟ ಆಯೋಜನೆ ಬಗ್ಗೆ ಪರಿಶೀಲನೆ ನಡೆಸಿದ್ರು. ಊಟದ ವ್ಯವಸ್ಥೆ, ಚೇರ್, ಪೆಂಡಾಲ್ ಪರಿಶೀಲಿಸಿದ್ದಾರೆ. 50 ಕ್ಕೂ ಮಂದಿ ಸೇರಿದ್ರೆ ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಆಗುತ್ತೆ. ಆದ್ರೆ ಇಲ್ಲಿ 250ಕ್ಕೂ ಹೆಚ್ಚು ಜನರಿಗಾಗಿ ಬಾಡೂಟ ತಯಾರಿಸಲಾಗಿತ್ತು. ಇನ್ನು ಚುನಾವಣಾ ಅಧಿಕಾರಿಗಳು ಚಿಕನ್, ಮಟನ್ ಮತ್ತು ಬಿರಿಯಾನಿ ಸೇರಿದಂತೆ ಹಲವು ಖಾದ್ಯಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇತ್ತ ಬಾಡೂಟಕ್ಕೆಂದು ಬಂದ ಕಾರ್ಯಕರ್ತರು ಸಪ್ಪೆ ಮೋರೆ ಹಾಕಿಕೊಂಡು ವಾಪಾಸ್ ಆದ ದೃಶ್ಯ ಕಂಡುಬಂತು.