Monday, August 4, 2025
!-- afp header code starts here -->
Homeರಾಜಕೀಯಮೋದಿಯನ್ನು ಹೊಗಳಿ, ಅಪ್ಪಮಕ್ಕಳನ್ನು ದೂಷಿಸಿದ ರೆಬೆಲ್ ಲೀಡರ್..!

ಮೋದಿಯನ್ನು ಹೊಗಳಿ, ಅಪ್ಪಮಕ್ಕಳನ್ನು ದೂಷಿಸಿದ ರೆಬೆಲ್ ಲೀಡರ್..!

ಕೆ.ಎಸ್‌ ಈಶ್ವರಪ್ಪ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದ ಪೋಸ್ಟರ್ ನಲ್ಲಿ ಮೋದಿಯನ್ನು ಹೊಗಳಿ, ಬಿಎಸ್ ವೈ ಕುಟುಂಬಸ್ಥರನ್ನು ದೂಷಣೆ ಮಾಡಿ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಬಿಎಸ್ ಯಡಿಯೂರಪ್ಪ ಕುಟುಂಬದವರ ವಿರುದ್ಧ ಜಯ ಸಾಧಿಸುವ ನಿಟ್ಟಿನಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ಪಣ ತೋಟಿದ್ದಾರೆ.

ಶಿವಮೊಗ್ಗ; ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ರವನ್ನು ಅಮಿತ್ ಶಾ ಸಂಧಾನ ಕಾರ್ಯಕ್ಕಾಗಿ ದೆಹಲಿಗೆ ಕರೆಸಿಕೊಂಡು ಭೇಟಿ ಮಾಡದೇ ಹಾಗೆ ಹಿಂತಿರುಗಿದ ಬಳಿಕ ರೆಬೆಲ್ ಲೀಡರ್ ಎನಿಸಿಕೊಂಡಿರುವ ಕೆ.ಎಸ್‌ ಈಶ್ವರಪ್ಪ ಬಂಡಾಯ ಅಭ್ಯರ್ಥಿಯಾಗಿ ನಿಲ್ಲುವುದಾಗಿ ನಿರ್ಧರಿಸಿದ್ದಾರೆ.

ಪ್ರಚಾರದ ವೇಳೆ ಮೋದಿ ಭಾವಚಿತ್ರವನ್ನು ಬಳಸಿಕೊಳ್ಳಲು ಈಶ್ವರಪ್ಪ ಶಿವಮೊಗ್ಗದ ಕೋರ್ಟ್‌ನಲ್ಲಿ ಕೇವಿಯಟ್‌ ಅರ್ಜಿ ಸಲ್ಲಿಸಿದ್ದಾರೆ. ಕೋರ್ಟ್ ಅನುಮತಿಗೆ ಮುನ್ನವೇ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗುತ್ತಿರುವ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದ ಪೋಸ್ಟರ್ ನಲ್ಲಿ ಆತ್ಮೀಯರೇ, ನಮ್ಮ ನಾಯಕರಾದ ಕೆ.ಎಸ್ ಈಶ್ವರಪ್ಪ ರವರು ಶಿವಮೊಗ್ಗ ಲೋಕಸಭಾ ಕ್ಷೇತ್ರದ “ರಾಷ್ಟ್ರ ಭಕ್ತರ ಬಳಗದ” ‘ಪಕ್ಷೇತರ’ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದು. ದಿನಾಂಕ:12-04-2024 ಶುಕ್ರವಾರ ಬೆಳಿಗ್ಗೆ 10ಕ್ಕೆ ನಗರದ ರಾಮಣ್ಣ ಶೆಟ್ಟಿ ಪಾರ್ಕ್ ಶ್ರೀ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬೃಹತ್ ಮೆರವಣಿಗೆಯ ಮೂಲಕ ರಾಷ್ಟ್ರ ಭಕ್ತ, ಹಿಂದೂ ಕಾರ್ಯಕರ್ತರ ನೇತೃತ್ವದಲ್ಲಿ ನಾಮಪತ್ರ ಸಲ್ಲಿಸಲಾಗುವುದು. ಆ ವೇಳೆ ಅಭಿಮಾನಿಗಳು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ತಮ್ಮಲ್ಲಿ ಕೇಳಿಕೊಳ್ಳುತ್ತೇವೆ. ದೇಶಕ್ಕೆ ನರೇಂದ್ರ ಮೋದಿ – ಶಿವಮೊಗ್ಗಕ್ಕೆ ಹಿಂದುತ್ವವಾದಿ’ ಎಂದು ಪೋಸ್ಟರ್ ನಲ್ಲಿ ಬರಸಿಕೊಳ್ಳಲಾಗಿದೆ.

ಪೋಸ್ಟರ್ ನಲ್ಲಿ ಭಾರತ ಕಂಡ ಶ್ರೇಷ್ಠ ಜನನಾಯಕ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಸದಾ ಖಂಡಿಸುವ “ಕುಟುಂಬ ರಾಜಕಾರಣ ವನ್ನು ರಾಜ್ಯ ಬಿಜೆಪಿಯಿಂದ ಕಿತ್ತೊಗೆಯಲು, ರಾಜ್ಯಾದ್ಯಂತ ಭಾರತೀಯ ಜನತಾ ಕಾರ್ಣಯ ನಿಷ್ಠಾವಂತ ಕಾರ್ಯಕರ್ತರ ನೋವಿಗೆ ಸ್ಪಂದಿಸಲು ತನ್ನ ಮಕ್ಕಳನ್ನು “ಹೊಂದಾಣಿಕ ರಾಜಕಾರಣದ ಮೂಲಕ ಗೆಲ್ಲಿಸಿ ವಿಕಾರಿಪುರದಲ್ಲಿ ವೀರಶೈವ ಸಮಾಜದ ನಾಯಕ ಶ್ರೀ ನಾಗರಾಜ್ ಗೌಡ ಹಾಗು ಹಿಂದುಳಿದ ವರ್ಗಗಳ ನಾಯಕ ಶ್ರೀ ಗೋಡೆ ಮಾಲ್ವೇಶ್ ಅವರನ್ನು ಸೋಲಿಸಿದ ಅಪ್ಪ-ಮಕ್ಕಳ ಹೊಂದಾಣಿಕೆ ರಾಜಕಾರಣವನ್ನು ಐಯಣಗಳೆಯಲು ಆಪ್ತರಿಗೆ ಟಿಕೆಟ್ ಹಂಚಿ ಆಗದವರಿಗೆ ಟಿಕೆಟ್ ವಂಚಿಸುವ ಕುತಂತ್ರ ರಾಜಕಾರಣವನ್ನು ಕಡೆಗಾಣಿಸಲು, ನಿಸ್ತಿನ ಪಕ್ಷವೆಂದೇ ಹೆಸರಾದ ಬಿಜೆಪಿಯನ್ನು ರಾಜ್ಯದಲ್ಲಿ ಶುದ್ದೀಕರಿಸಲು ಈ ಶುಭ ಸಮಯಕ್ಕೆ ತಾವೆಲ್ಲರೂ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಕೆ.ಎಸ್. ಈಶ್ವರಪ್ಪನವರನ್ನು ಬೆಂಬಲಿಸಿ ನಾಮಪತ್ರಿಕೆ ಪೋಸ್ಟರ್ ನಲ್ಲೆ ಬರೆಯಲಾಗಿದೆ.

-ಕಾವ್ಯಶ್ರೀ ಕಲ್ಮನೆ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!