ಚಿಕ್ಕಬಳ್ಳಾಪುರ; ಇಂದು ಪ್ರಧಾನಿ ನರೇಂದ್ರ ಹಾಗೂ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರವರು ಬಿಜೆಪಿ ಅಭ್ಯರ್ಥಿ ಡಾ.ಸುಧಾಕರ್ ಪರ ಅದ್ದೂರಿ ಮತಪ್ರಚಾರ ಮಾಡಿದ್ರು.
ಚಿಕ್ಕಬಳ್ಳಾಪುರದ ಅಗಲಕುರ್ಕಿಯಲ್ಲಿ ನಡೆದ ಬಿಜೆಪಿ ಜೆಡಿಎಸ್ ಮೈತ್ರಿ ಸಮಾವೇಶದಲ್ಲಿ ಹೆಚ್ ಡಿ ದೇವೇಗೌಡ ಮಾತಾನಾಡಿ, ರಾಜ್ಯ ಸರ್ಕಾರ ಪ್ರಕಟಿಸಿದ್ದ ಚೋಂಬು ಜಾಹೀರಾತು ವಿರುದ್ಧ ಕಿಡಿಕಾರಿದರು. 2014ರಲ್ಲಿ ಕಾಂಗ್ರೆಸ್ ಮನಮೋಹನ್ ಸಿಂಗ್ ಆಡಳಿತದಲ್ಲಿ ಹಾಗೂ ಸಿದ್ದರಾಮಯ್ಯ ಸರ್ಕಾರ ದೇಶಕ್ಕೆ ಚೊಂಬು ಕೊಟ್ಟಿದ್ರು ಆದರೆ ಮೋದಿ ಬಂದ ಬಳಿಕ ಆ ಚೊಂಬುನ್ನು ಅಕ್ಷಯ ಪಾತ್ರೆಯನ್ನಾಗಿ ಮಾಡಿದ್ದಾರೆ.
ದೇಶದ ಜನತೆಗೆ ಚೊಂಬು ಕೊಟ್ಟಿರುವುದು ಮೋದಿ ಸರ್ಕಾರವಲ್ಲ ಸಿದ್ದರಾಮಯ್ಯ ಆಡಳಿತ ಚೊಂಬು ಕೊಟ್ಟಿದ್ದಾರೆಂದು ಚಿಕ್ಕಬಳ್ಳಾಪುರ ಬಿಜೆಪಿ ಸಮಾವೇಶದಲ್ಲಿ ಪತ್ರಿಕೆಯ ಚೊಂಬು ಜಾಹೀರಾತು ಹಾಗೂ ಕೈ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ರು.
ಏನಿದು ಪತ್ರಿಕೆಯಲ್ಲಿ ಚೊಂಬು ಸಮರ..?
ರಾಜ್ಯ ಸರ್ಕಾರ ಪತ್ರಿಕೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ವಿರುದ್ಧ ಚೊಂಬು ಜಾಹೀರಾತು ನೀಡಿ ಟೀಕಿಸಿದ್ದರು. ರಾಜ್ಯದ ಎಲ್ಲಾ ಪತ್ರಿಕೆಯಲ್ಲಿ ಅದುವೇ ಟ್ರೆಂಡ್ ಆಗಿತ್ತು. ಪತ್ರಿಕಾ ಜಾಹೀರಾತುನಲ್ಲಿ ಎಲ್ಲರ ಖಾತೆಗೆ 15 ಲಕ್ಷ ಹಣ ಹಾಕುವ ಚೊಂಬು, ಬರ/ನೆರೆ ಪರಿಹಾರದ ಚೊಂಬು, ತೆರಿಗೆ ಹಂಚಿಕೆಯಲ್ಲಿ ಚೊಂಬು, ರೈತರ ಆದಾಯ ಡಬಲ್ ಮಾಡುವ ಚೊಂಬು, 7 ಜನ ಬಿಜೆಪಿ/ಜೆಡಿಎಸ್ ಸಂಸದರು ರಾಜ್ಯಕ್ಕೆ ನೀಡಿದ ಕೊಡುಗೆ ಕೇವಲ ಚೊಂಬು, ಈ ಚುನಾವಣೆಯಲ್ಲಿ ಬಿಜೆಪಿಗೆ ನೀಡೋಣ ಇದೇ ಚೊಂಬು, ಕನ್ನಡಿಗರಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ಕಾಂಗ್ರೆಸ್ ಚೊಂಬಿನ ಫೋಟೋ ಸಮೇತ ಜಾಹೀರಾತು ನೀಡಲಾಗಿತ್ತು.ಪತ್ರಿಕೆಯಲ್ಲಿ ಮಾತ್ರ ಪ್ರಕಟಿಸದೇ ಇಂದು ಮೋದಿ ಬೆಂಗಳೂರಿಗೆ ಬರುವ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಚೊಂಬು ಹಿಡಿದು ಪ್ರತಿಭಟನೆಗೆ ಮುಂದಾಗಿದ್ದ ಕಾರ್ಯಕರ್ತರನ್ನು ಪೊಲೀಸ್ ವಶಕ್ಕೆ ಪಡೆದುಕೊಂಡರು.