Sunday, August 3, 2025
!-- afp header code starts here -->
Homeಜಿಲ್ಲಾಸುದ್ದಿಮಲೆನಾಡಿನಲ್ಲಿ ಭಾರೀ ಮಳೆಗೆ ಹೆಚ್ಚಾದ ಅನಾಹುತ: ನಯನ ಮೋಟಮ್ಮನವರೇ ಕಾಣ್ತಿಲ್ವಾ ಜನರ ಗೋಳು?

ಮಲೆನಾಡಿನಲ್ಲಿ ಭಾರೀ ಮಳೆಗೆ ಹೆಚ್ಚಾದ ಅನಾಹುತ: ನಯನ ಮೋಟಮ್ಮನವರೇ ಕಾಣ್ತಿಲ್ವಾ ಜನರ ಗೋಳು?

ಮೂಡಿಗೆರೆ: ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿಂದ ಎಡಬಿಡದೆ ಮಳೆ ಬರುತ್ತಿದ್ದು ಅನಾಹುತದ ಸಂಭವಿಸಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ.

ಮಲೆನಾಡನಲ್ಲಿ ಜನ ಹೆಚ್ಚಿನ ಸಂಕಷ್ಟದಲ್ಲಿ ಇದ್ದಾರೆ.ಕಳಸ ಸಮೀಪ ಭದ್ರಾ ನದಿಗೆ ಪಿಕ್ ಅಪ್ ಸಮೇತ ಶಮಂತ್(23) ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.ಈ ವಿಷಯ ತಿಳಿದ ತಕ್ಷಣ ಶಮಂತ್ ತಾಯಿ ರವಿಕಲಾ(48) ಕೆರೆಗೆ ಹಾರಿ ಪ್ರಾಣ ಬಿಟ್ಟಿದ್ದಾರೆ.ಈ ಭಾಗದಲ್ಲಿ ಜನತೆ ಮಳೆಯ ಜೊತೆಗೆ ಸಾವುಗಳನ್ನು ನೋಡಿ ತಲ್ಲಣಿಸಿದ್ದಾರೆ.ಆದರೆ ಶಾಸಕಿ ನಯನ ನನಗೂ ಇದಕ್ಕೂ ಸಂಬಂಧ ಇಲ್ಲ ಎನ್ನುವಂತೆ ಬೆಂಗಳೂರಿನಲ್ಲಿ ಇದ್ದಾರೆ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಅನಾಹುತಗಳು ಸಂಭವಿಸುವುದು ಆಕಸ್ಮಿಕವಾಗಿ ನಡೆಯುತ್ತವೆ.ಆದರೆ ತಕ್ಷಣ ಸ್ಪಂದಿಸುವುದು ಜನಪ್ರತಿನಿಧಿಗಳ ಕರ್ತವ್ಯ. ಅಧಿಕಾರಿಗಳಿಗೆ ಹೇಳಿ ಕೆಲಸ ಮಾಡಿಸುವುದು ಬೇರೆ ಜನಪ್ರತಿನಿಧಿಯಾಗಿ ಬೆಂಗಳೂರು ಸೇರಿರುವ ನಯನ ಬಗ್ಗೆ ಜನ ಬಹು ಬೇಸರದಿಂದ ಮಾತನಾಡುತ್ತಿರುವುದರ ಜೊತೆಗೆ ಕಾಂಗ್ರೆಸ್ ಪಕ್ಷದವರೆ ಇಂತಹ ಶಾಸಕರನ್ನು ಗೆಲ್ಲಿಸಿ ಕೊಂಡೆವು ಎಂದು ಕೈ,ಕೈ ಹಿಸುಕಿ ಕೊಳ್ಳುತ್ತಿದ್ದಾರೆ ಜೊತೆಗೆ ನಿರಾಸೆ ವ್ಯಕ್ತಪಡಿಸುತ್ತಿದ್ದಾರೆ.

ವಿದ್ಯೆಯ ಜೊತೆಗೆ ಬುದ್ದಿ ಬೇಕು ಆಗ ಜನರ ಜೊತೆಗೆ ಬರೆಯುವುದು ಮತ್ತು ಸ್ಪಂದಿಸುವ ಗುಣಗಳು ಬರುತ್ತವೆ.ಕಾನ್ವೆಂಟ್ ಶಿಕ್ಷಣ ಹೈಟೆಕ್ ಸಂಸ್ಕೃತಿ ಹೈ_ಪೈ ಬೆಂಗಳೂರು ಓಡಾಟ ನಡೆಸಿದರೆ ಇಲ್ಲಿ ಜನ ಹೈರಾಣಾಗಿದ್ದಾರೆ. ಈಗಾಗಲೇ ಯಾವುದೇ ರಾಷ್ಟ್ರೀಯ ಹಬ್ಬಗಳಲ್ಲಿ ಭಾಗವಹಿಸುವುದಿಲ್ಲ ಹೋಗಲಿ ಸಂಕಷ್ಟದ ಸಮಯದಲ್ಲೂ ದೂರದ ಬೆಂಗಳೂರು ತೋರಿಸುವ ಮೂಲಕ ಜನಸಾಮಾನ್ಯರ ಜೊತೆಗೆ ಸಂಪರ್ಕ ಇಲ್ಲ ಎಂಬಂತೆ ಪದೇ,ಪದೇ ವರ್ತಿಸಿದರೆ ಕಷ್ಟ ಯಾರ ಬಳಿ ಹೇಳಿಕೊಳ್ಳುವುದು ಎನ್ನುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!