ಚಿಕ್ಕಮಗಳೂರು/ ಮೂಡಿಗೆರೆ : ನವೀನ್ ಹಾವಳಿ… ಭ್ರಷ್ಟಾಚಾರ, ಲಂಚ, ದುರಾಸೆ, ಸ್ವಾರ್ಥ ಇಂತಹದ್ದೇ ತುಂಬಿ ತುಳುಕುತ್ತಿರುವ ಪ್ರಸ್ತುತ ದಿನಮಾನಗಳಲ್ಲಿ ಈ ವ್ಯಕ್ತಿ ಎಲ್ಲರಿಗಿಂತ ಭಿನ್ನವಾಗಿ ಗುರುತಿಸಿಕೊಂಡಿದ್ದಾರೆ. ಅದೆಷ್ಟೋ ಮಂದಿ ಮೊದಲಿಗೆ ಇದ್ದ ಬದ್ದತೆ ಯನ್ನ ಬರಬರುತ್ತಾ ಕಳೆದುಕೊಳ್ಳುತ್ತಾರೆ. ಆದ್ರೆ ಈ ನವೀನ್ ಹಾವಳಿ ಮಾತ್ರ ತನ್ನ ಸಿದ್ದಾಂತ, ಬದ್ದತೆಗೆ ಎಂದೂ ಬೆನ್ನು ತೋರಿಸಿದವರಲ್ಲ. ಕಳೆದ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಬರಿಗಾಲಲ್ಲಿ ಪ್ರಚಾರ ಮಾಡಿ, ಗೆದ್ರೆ ಮಾತ್ರ ಚಪ್ಪಲಿ ಧರಿಸ್ತೇನೆ.. ಅಲ್ಲಿಯವರೆಗೂ ಚಪ್ಪಲಿ ಧರಿಸಲ್ಲ ಅಂತಾ ಶಪಥ ಮಾಡಿದ ವ್ಯಕ್ತಿ.. ಚುನಾವಣೆ ಗೆಲ್ಲೋಕೆ ಲಕ್ಷಾಂತರ ರೂಪಾಯಿ ಚೆಲ್ಲುವ ಅನಿವಾರ್ಯತೆ ಇರೋ ಈ ಸಂದರ್ಭದಲ್ಲೂ ಒಂದೇ ಒಂದು ರೂಪಾಯಿ ಕೂಡ ಯಾರಿಗೂ ಕೊಡದೇ ನಿಡುವಾಳಿ ಗ್ರಾಮ ಪಂಚಾಯ್ತಿ ಸದಸ್ಯನಾಗಿ, ಆ ಬಳಿಕ ಉಪಾಧ್ಯಕ್ಷನಾಗಿಬಿಟ್ರು.

ಹಾಗಂತ ಇನ್ನೇನು ಸೀಟು ಭದ್ರವಾಯ್ತು ಅಂತಾ ಆ ಸೀಟಿಗೆ ಅಂಟಿಕೊಂಡು ಕೂರಲಿಲ್ಲ.! ಮತ್ತೆ ತನ್ನೂರಿನ ನಿವೇಶನ ರಹಿತ ಜನರಿಗೆ ಸೂರು ಬೇಕು ಅಂತಾ ಮೂಡಿಗೆರೆ ತಾಲೂಕು ಕಚೇರಿ ಎದುರು ಏಕಾಂಗಿಯಾಗಿ ಪ್ರತಿಭಟನೆ ಮಾಡಿ ಅಧಿಕಾರಿಗಳ, ಜನಪ್ರತಿನಿಧಿಗಳ ಗಮನ ಸೆಳೆದು ಬಿಟ್ರು. ಸದಾ ಬಡವರು, ಕೂಲಿ ಕಾರ್ಮಿಕರ ಮಧ್ಯೆಯೇ ಇರುವ ನವೀನ್, ಕೊನೆಗೂ ಒಂದಷ್ಟು ಮಂದಿಗೆ ಹಕ್ಕುಪತ್ರ ಕೊಡಿಸುವಲ್ಲಿ ಯಶಸ್ವಿಯಾದ್ರು. ಮೊನ್ನೆ ಮೂಡಿಗೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಕೆ.ಜೆ ಜಾರ್ಜ್, ಶಾಸಕಿ ನಯನಾ ಮೋಟಮ್ಮನವರು ಕೆಲವರಿಗೆ ಹಕ್ಕುಪತ್ರ ವಿತರಿಸಿದರು.
ಶಾಸಕಿ ನಯನಾ ಮೋಟಮ್ಮಗೆ ಹಾವಳಿ ಸವಾಲ್.!
ಆದ್ರೆ ಇದು ನವೀನ್ ಗೆ ಸಮಾಧಾನ ತಂದಿಲ್ಲ.! ನಿಡುವಾಳೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸರ್ವೇ ನಂಬರ್ 111,9,77,90, 41ರಲ್ಲಿ ವಾಸಿಸುತ್ತಿರುವ ಸುಮಾರು 70 ಕುಟುಂಬಗಳಿಗೆ ಇನ್ನೂ ಹಕ್ಕು ಪತ್ರ ಸಿಕ್ಕಿಲ್ಲ. ನಾನು ಹೋರಾಟದಲ್ಲಿ ಸೋತುಬಿಟ್ಟೆ, ಈ ಪಯಣದಲ್ಲಿ ನೀವೇ ಗೆಲ್ಲಿ ಅಂತಾ ಶಾಸಕಿ ನಯನಾ ಮೋಟಮ್ಮನವರಿಗೆ ಒಂದು ಸವಾಲನ್ನ ಹಾಕಿದ್ದಾರೆ ನವೀನ್ ಹಾವಳಿ.! ಹಾಗಂತ ಅದೆಂಥದ್ದೋ ಎದುರಿಸಲಾಗದ ಸವಾಲಂತೂ ಅಲ್ಲವೇ ಅಲ್ಲ. ಅದು ಒಬ್ಬರು ಶಾಸಕಿಗೆ ಈ ಸವಾಲು ಚಿಟಿಕೆ… ಚಿಟಿಕೆ ಹೊಡೆಯೋದ್ರಲ್ಲಿ ಮಾಡಿ ಮುಗಿಸುವಂತಹ ಕೆಲಸ. ಆದರೂ ತಾನು ಸೋಲುತ್ತೇನೆ ಅನ್ನೋ ಸಂಪೂರ್ಣ ವಿಶ್ವಾಸವಿದ್ರೂ ತನ್ನೂರಿನ ಜನರಿಗೆ ಒಳ್ಳೆಯದು ಆಗಲಿ ಅಂತಾ ನವೀನ್ ಈ ಸವಾಲನ್ನ ಶಾಸಕಿ ನಯನಾ ಮೋಟಮ್ಮನವರಿಗೆ ಹಾಕಿದ್ದಾರೆ.

ಏನಪ್ಪಾ ಸವಾಲ್ ಅಂದ್ರೆ..?
ಆ 70 ಕುಟುಂಬಗಳಲ್ಲಿ ಕನಿಷ್ಠ 10 ಕುಟುಂಬಗಳಿಗಾದ್ರೂ ಒಂದು ತಿಂಗಳ ಒಳಗೆ( ಏಪ್ರಿಲ್ 9ರ ಒಳಗೆ) ಹಕ್ಕುಪತ್ರ ಒದಗಿಸಿ ಅಂತಾ ಓಪನ್ ಚಾಲೆಂಜ್ ಹಾಕಿದ್ದಾರೆ ನವೀನ್.! ನೀವು ಸವಾಲನ್ನ ಗೆದ್ದಿದ್ದೇ ಆದ್ರೆ ನಾನು ತಲೆ ಕೂದಲು ಬೋಳಿಸುತ್ತೇನೆ, ಗಡ್ಡ-ಮೀಸೆ ತೆಗೆಯುತ್ತೇನೆ, ನಿಮಗೆ ಶರಣಾಗುತ್ತೇನೆ ಎಂದಿದ್ದಾರೆ ನವೀನ್ ಹಾವಳಿ. ನವೀನ್ ಪಲಾಯನವಾದಿಯಲ್ಲ. ಹೇಳಿದಂತೆ ಮಾಡೋ ಹುಡುಗ.! ಹಾಗಾಗೀ ತಲೆ ಕೂದಲು ಬೋಳಿಸ್ಕೊಂಡ, ಮೀಸೆ-ಗಡ್ಡ ತೆಗೆಯಿಸಿಕೊಂಡ ಪ್ಯಾದೆ ನವೀನನ್ನ ಕಾಣಲು ಎಲ್ಲರೂ ಕಾತುರರಾಗಿದ್ದಾರೆ. ಒಟ್ನಲ್ಲಿ, ಜನರಿಗೆ ಒಳ್ಳೆಯದು ಮಾಡಲು ತಾನು ಜನರ ಮುಂದೆ ಕಾಮಿಡಿಯನ್ ಆಗಲು ಕೂಡ ರೆಡಿಯಾಗಿದ್ದಾನೆ ಈ ಗ್ರಾಮ ಪಂಚಾಯ್ತಿ ಸದಸ್ಯ.
https://www.facebook.com/share/r/1DMbxot5rD
ನಯನಾ ಮೋಟಮ್ಮರಿಗೆ ಗೊತ್ತಾಗಲಿ ಎಂದೇ ಈ ಬರವಣಿಗೆ.!
ಇಷ್ಟೆಲ್ಲಾ ಸವಾಲ್ ಹಾಕಿದ್ಮೇಲೆ, ಈ ವಿಚಾರ ನಯನಾ ಮೋಟಮ್ಮನವರಿಗೆ ಗೊತ್ತಾಗಲಿ ಅನ್ನೋದು ನನ್ನ ಕಳಕಳಿ. ನವೀನ್ ಹಾವಳಿ ಹಾಕಿರೋ ಪೋಸ್ಟನ್ನ ಮೇಡಂ ನೋಡ್ತಾರೋ.? ಬಿಡ್ತಾರೋ..? ಗೊತ್ತಿಲ್ಲ. ಆದ್ರೆ ಪಬ್ಲಿಕ್ ಇಂಪ್ಯಾಕ್ಟ್ ಹಾಕಿರೋ ಈ ಪೋಸ್ಟನ್ನ ನಯನಾ ಮೇಡಂ ನೋಡ್ತಾರೆ ಅನ್ನೋ ವಿಶ್ವಾಸ ನಮ್ಮದು. ಕಾರಣ ನಿಮಗೆಲ್ಲಾ ಗೊತ್ತೇ ಇದೆ, ಮೇಡಂ ಅವರಿಗೆ ನಮ್ಮ ಮೇಲೆ ಸ್ವಲ್ಪ ಹೆಚ್ಚೇ ಲವ್ವು.. ಈ ಪ್ರೀತಿಯಿಂದಾದ್ರೂ ನವೀನ್ ಹಾಕಿರೋ ಸವಾಲನ್ನ ನೀವು ಮೆಟ್ಟಿ ನಿಲ್ಲಿ ಮೇಡಂ.! ನಿಮ್ಮ ಜೊತೆ ನಾವು ಇರುತ್ತೇವೆ, ನಿಮಗೆ ಗೆಲುವಾಗಲಿ.! ನಾವಿಬ್ಬರು ಸೇರಿಕೊಂಡು ಎದುರಾಳಿಗೆ ಸೋಲುಣಿಸೋಣ.! ನವೀನ್ ಹಾವಳಿ ಸೋತಿರೋ ಪೋಸ್ಟನ್ನ ಹಾಕಲು ಮುಂದಿನ ತಿಂಗಳು ನಾನು ಕಾಯ್ತಾ ಇರ್ತೇನೆ.!
ಏನಂತೀರಾ.?
ಪ್ರಶಾಂತ್ ಮೂಡ್ಗೆರೆ
PUBLIC IMPACT
