Sunday, August 3, 2025
!-- afp header code starts here -->
Homebig breakingವಿಧಾನಸಭೆ ಚುನಾವಣೆ : ಜಮ್ಮು ಕಾಶ್ಮೀರದಲ್ಲಿ ʼಕೈʼಗೆ ಜಾಮೂನು - ಹರಿಯಾಣದಲ್ಲಿ ಹ್ಯಾಟ್ರಿಕ್‌ ಭಾರಿಸಿದ ʼಕಮಲʼ...

ವಿಧಾನಸಭೆ ಚುನಾವಣೆ : ಜಮ್ಮು ಕಾಶ್ಮೀರದಲ್ಲಿ ʼಕೈʼಗೆ ಜಾಮೂನು – ಹರಿಯಾಣದಲ್ಲಿ ಹ್ಯಾಟ್ರಿಕ್‌ ಭಾರಿಸಿದ ʼಕಮಲʼ ಕಿಲಕಿಲ..!

ಬೆಂಗಳೂರು : ರಾಷ್ಟ್ರ ರಾಜಕಾರಣದಲ್ಲಿ ಬಹಳ ಕುತೂಹಲ ಕೆರಳಿಸಿದ್ದ ಜಮ್ಮು ಕಾಶ್ಮೀರ ಮತ್ತು ಹರಿಯಾಣ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಂದಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್‌ ತೆಕ್ಕೆಗೆ ಒಂದೊಂದು ರಾಜ್ಯದ ಆಡಳಿತ ಸಿಕ್ಕಿದೆ.
ಭಾರತದ ಶಿಖರ ಜಮ್ಮು ಕಾಶ್ಮೀರದಲ್ಲಿ 90 ಸ್ಥಾನದ ಪೈಕಿ ನ್ಯಾಷನಲ್‌ ಕಾನ್ಫರೆನ್ಸ್‌ & ಕಾಂಗ್ರೆಸ್‌ ಮೈತ್ರಿ 51, ಬಿಜೆಪಿ 29, ಪಿಡಿಪಿ 03, ಇತರೆ 07 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಮ್ಯಾಜಿಕ್‌ ನಂಬರ್‌ 46 ಆಗಿರುವ ಕಾರಣ ಹೆಚ್ಚು ಸ್ಥಾನ ಪಡೆದಿರುವ INDI ಕೂಟದ ತೆಕ್ಕೆಗೆ ಆಡಳಿತ ಸಿಕ್ಕಿದೆ. ನ್ಯಾಷನಲ್‌ ಕಾನ್ಫರೆನ್ಸ್‌ ಹಾಗೂ ಕಾಂಗ್ರೆಸ್‌ ಮೈತ್ರಿ ಸರ್ಕಾರ ರಚನೆಯಾಗಲಿದೆ. ಸಿಎಂ ಆಗಿ ಓಮರ್‌ ಅಬ್ದುಲ್ಲಾ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.
ಮತ್ತೊಂದೆಡೆ ತೀವ್ರ ಕುತೂಹಲ ಕೆರಳಿಸಿದ್ದ ಹರಿಯಾಣ ಚುನಾವಣೆ ಫಲಿತಾಂಶ ಹಂತ ಹಂತಕ್ಕೂ ಹಾವು ಏಣಿ ಆಟ ಆಡುತ್ತಲೇ ಇತ್ತು. ಎಣಿಕೆಯ ಆರಂಭದಲ್ಲಿ ಕಾಂಗ್ರೆಸ್‌ ಮುನ್ನಡೆಯಲ್ಲಿತ್ತು. ಆರಂಭಿಕ ಮುನ್ನಡೆ ಗಮನಿಸಿದ ಕಾಂಗ್ರೆಸ್‌ ದೇಶದ ವಿವಿಧೆಡೆ ಸಂಭ್ರಮಾಚರಣೆಯನ್ನೂ ನಡೆಸಿತ್ತು. ಆದರೆ 11 ಗಂಟೆ ಬಳಿಕ ಫಲಿತಾಂಶದ ಚಿತ್ರಣ ಬದಲಾಗುತ್ತಾ ಸಾಗಿತು. ಹಿನ್ನಡೆಯಲ್ಲಿದ್ದ ಬಿಜೆಪಿ ಏಕಾಏಕಿ ಮುನ್ನಡೆಗೆ ಬಂತು. 90 ಸ್ಥಾನಗಳ ಪೈಕಿ ಬಿಜೆಪಿ 51 ಸ್ಥಾನ ಪಡೆದು ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್‌ 34, ಐಎನ್‌ಎಲ್‌ಡಿ 2, ಇತರೆ 03 ಸ್ಥಾನದಲ್ಲಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಹರಿಯಾಣದಲ್ಲಿ ಹ್ಯಾಟ್ರಿಕ್‌ ಗೆಲುವನ್ನು ಬಿಜೆಪಿ ಪಡೆದುಕೊಂಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!