ಹಾಸನ: ಇತರ ದೇಶಗಳಿಗೆ ಹೋಲಿಸಿದರೆ ಭಾರತ ದೇಶ ಕೂಡ ಸೈನ್ಯದ ವಿಭಾಗಗಳಲ್ಲಿ ಸಶಕ್ತವಾಗಿದೆ ಎಂಬುದಕ್ಕೆ ಆಪರೇಷನ್ ಸಿಂಧೂರ ಪ್ರತ್ಯಕ್ಷ ಸಾಕ್ಷಿಯಾಗಿದೆ ಎಂದು ಶಾಸಕರಾದ ಸ್ವರೂಪ್ ಪ್ರಕಾಶ್ ಬಣ್ಣಿಸಿದರು
ಹಾಸನ ನಗರದ ಕೆಆರ್ ಪುರಂ ನಲ್ಲಿ ಜನರಲ್ ಕಾರ್ಯಪ್ಪ ಪಾರ್ಕ್ ನಲ್ಲಿ ಇಂದು ನಡೆದ ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಸೈನಿಕರಿಗೆ ಪುಷ್ಪ ನಮನ ಸಲ್ಲಿಸಿ ಬಳಿಕ ಅವರು ಮಾತನಾಡಿದರು.
ಇಡೀ ವಿಶ್ವವೇ ತಿರುಗಿ ನೋಡೋ ಕೆಲಸವನ್ನು ಭಾರತೀಯ ಸೇನೆ ಆಪರೇಷನ್ ಸಿಂಧೂರ ಮೂಲಕ ಮಾಡಿ ತೋರಿಸಿದೆ. ಜಮ್ಮು ಕಾಶ್ಮೀರ ಸಿಯಾಚಿನ್ ಸೇರಿದಂತೆ ವಿವಿಧ ಭಾಗಗಳಲ್ಲಿ ಕೆಲಸ ಮಾಡುವುದು ಸವಾಲಿನ ಕೆಲಸವಾಗಿದೆ ಅಂತ ಜಾಗದಲ್ಲಿ ಕೂಡ ಕೆಲಸ ಮಾಡಿ ದೇಶದ ರಕ್ಷಣೆಗೆ ಪಣತೊಟ್ಟಿರುವ ಸೈನಿಕರ ಕೊಡುಗೆ ಅಪಾರವಾದದ್ಗೆದು ಎಂದು ಹೇಳಿದ್ದಾರೆ.
ಹಾಗೆ ರಕ್ತದಾನ ಶಿಬಿರವನ್ನು ಟೇಪ್ ಕತ್ತರಿಸುವ ಮೂಲಕ ಚಾಲನೆ ನೀಡಿ ದೇಶದ ಪ್ರತಿಯೊಬ್ಬ ಪ್ರಜೆ ರಕ್ತದಾನ ಮಾಡಬೇಕೆಂದು ಹಾಗೂ ರಕ್ತದಾನ ಮಾಡುವುದರಿಂದ ನಮ್ಮ ಆರೋಗ್ಯ ವೃದ್ಧಿಸುತ್ತದೆ ಎಂದು ಕರೆ ನೀಡಿದ ನಂತರ ಎಸ್ ಎಸ್ ಎಲ್ ಸಿ, ಪಿಯುಸಿಗಳಲ್ಲಿ ಅತಿ ಹೆಚ್ಚು ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ಸೈನಿಕರ ಸಂಘದ ವತಿಯಿಂದ ಗೌರವಧನ ನೀಡಲಾಯಿತು