ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ನಿವಾಸಕ್ಕೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದಾರೆ.
ಮಂಡ್ಯ; ಈ ಹಿಂದೆ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧಿಸುವ ಸಲುವಾಗಿ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ವೈಮನಸ್ಸು ಬೆಳೆಸಿಕೊಂಡಿದ್ದರು.
ಅದಾಗಿಯೂ ಕಳೆದ ಬಾರಿ ಚುನಾವಣೆಯಲ್ಲಿ ಸುಮಲತಾ ಜಯ ಸಾಧಿಸಿ ಸಂಸದೆಯಾಗಿ ಆಯ್ಕೆಯಾದರು. ಅವಾಗಿನಿಂದ ಇಲ್ಲಿವರೆಗೂ ಸುಮಲತಾ ಹಾಗೂ ಹೆಚ್ ಡಿ ಕೆ ರಾಜಕೀಯ ರಂಗದಲ್ಲಿ ಒಟ್ಟಾಗಿ ಕಾಣಿಸಿಕೊಂಡಿರಲಿಲ್ಲ. ಆದರೆ ಐದು ವರ್ಷಗಳ ಬಳಿಕ ಹೆಚ್ಡಿಕೆ ಸಂಸದೆ ಮನೆಗೆ ಭೇಟಿ ನೀಡಿ ಈ ಬಾರಿಯ ಲೋಕ ಸಭೆ ಚುನಾವಣೆಗೆ ಬೆಂಬಲ ನೀಡುವಂತೆ ಕೋರಿದ್ದಾರೆ.

ಇನ್ನು ಹೆಚ್ಡಿಕೆ ಭೇಟಿ ಬಳಿಕ ಪ್ರತಿಕ್ರಿಯಿಸಿದ ಸಂಸದೆ ಸುಮಲತಾ, ಹಳೇದನ್ನು ಮರೆತು ಬೆಂಬಲ ಕೊಡುವಂತೆ ಕೇಳಿದ್ದಾರೆ. ಇಂದು ಆರೋಗ್ಯಕರವಾದ ಭೇಟಿಯಾಗಿತ್ತು. ಆದರೆ ಮಂಡ್ಯ ಕಾರ್ಯಕರ್ತರಿಗೆ ಮನಸ್ಸು ನೋಯಿಸಲ್ಲ ಹಾಗೆಯೇ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಏಪ್ರೀಲ್ 3 ರಂದು ನಟ ದರ್ಶನ್ ಹಾಗೂ ಅಭಿಷೇಕ್ ಅಂಬರೀಶ್ ಸಮ್ಮುಖದಲ್ಲಿ ತಿಳಿಸಲಾಗುವುದು ಎಂದರು. ಆದರೆ ಹೆಚ್ಡಿಕೆ ಗೆ ಬೆಂಬಲ ಸೂಚಿಸುವ ಬಗ್ಗೆ ಎಲ್ಲೂ ಮಾಹಿತಿ ನೀಡಿಲ್ಲ.

ಸಂಸದೆ ಸುಮಲತಾ ಅಂಬರೀಶ್ ನಿವಾಸಕ್ಕೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಭೇಟಿ ನೀಡಿದಕ್ಕೆ ಅಂಬರೀಶ್ ಕುಟುಂಬಕ್ಕೆ ನಾವೇನು ವಿಷ ಹಾಕಿದ್ವಾ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಸುಮಲತಾ, ಅಂಬರೀಶ್ ಕಾಂಗ್ರೆಸ್ ಪಕ್ಷಕ್ಕಾಗಿ ಸುಮಾರು ವರ್ಷ ದುಡಿದ್ರು ಆದರೆ ಅದನ್ನು ಕಾಂಗ್ರೆಸ್ ಗರು ಗುರುತಿಸಲಿಲ್ಲ ಇವಾಗ ಡಿಕೆಶಿ ಮಾಧ್ಯಮದ ಮುಂದೆ ದೊಡ್ಡ ದೊಡ್ಡ ಹೇಳಿಕೆ ಕೊಡ್ತಾರೆಂದು ಡಿಕೆಶಿ ವಿರುದ್ಧ ಸುಮಲತಾ ನೇರ ವಾಗ್ದಾಳಿ ನಡೆಸಿದ್ರು.
–ಕಾವ್ಯಶ್ರೀ ಕಲ್ಮನೆ