Wednesday, August 6, 2025
!-- afp header code starts here -->
Homeರಾಜಕೀಯಮೂಡಿಗೆರೆ: ಶಾಸಕಿ ನಯನ ಕಮಲಮ್ಮರ ಕೇಸರಿ ಶಾಲು, ಕೆರಳಿ ನಿಂತ ಪ್ರಗತಿಪರರು!

ಮೂಡಿಗೆರೆ: ಶಾಸಕಿ ನಯನ ಕಮಲಮ್ಮರ ಕೇಸರಿ ಶಾಲು, ಕೆರಳಿ ನಿಂತ ಪ್ರಗತಿಪರರು!

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ಶಾಸಕಿ ನಯನಮೋಟಮ್ಮ ಅಲಿಯಾಸ್ ನಯನ ಕಮಲಮ್ಮರ ಕೇಸರಿ ಶಾಲು ಪ್ರಗತಿಪರರನ್ನು ಕೆರಳಿಸುವುದರ ಜೊತೆಗೆ ಗಾಂಧಿ ಪ್ರತಿಮೆ ಮುಂದೆ ಪಶ್ಚಾತ್ತಾಪ ಪಟ್ಟುಕೊಳ್ಳಲು ನಾಳೆ ತಯಾರಾಗಿದ್ದಾರೆ.ಸದಾ ಕೋಮುವಾದವನ್ನೆ ಉಸಿರಾಡುವ ಹಲವಾರು ಜಿಲ್ಲೆಗಳಿಗೆ ಕಾಲಿಡದಂತೆ ನಿಷೇದ ಇರುವ ವ್ಯಕ್ತಿಯೊಂದಿಗೆ ವೇದಿಕೆ ಹಂಚಿಕೊಂಡಿರುವುದು ಪ್ರಗತಿಪರ ಮನಸ್ಸುಗಳನ್ನು ಘಾಸಿಗೊಳಿಸಿದೆ.

ನಯನಗೆ ಇದು ಕ್ಷುಲ್ಲಕ ವಿಷಯ ಇರಬಹುದು ಆದರೆ ಪ್ರಗತಿಪರ ವಿಚಾರಧಾರೆ ಜ್ಯಾತ್ಯಾತೀತ ತತ್ವಕ್ಕೆ ಬೆಂಕಿ ಇಟ್ಟಂತೆ ಆಗಿದೆ.ಇದರ ಜೊತೆಗೆ ನಯನಮೋಟಮ್ಮ ಗೊತ್ತಿಲ್ಲದೆ ಆಗಿದೆ ಇಲ್ಲಿಗೆ ಬಿಟ್ಟು ಬಿಡಿ ಮುಂದೆ ಇದಕ್ಕೆ ಅವಕಾಶ ಕೊಡುವುದಿಲ್ಲ ಎಂದಿದ್ದರೆ ಸಮಸ್ಯೆ ಜಟಿಲ ಆಗುತ್ತಿರಲಿಲ್ಲ.ಆದರೆ ನಾನು ಮಾಡುವುದೆ ಸರಿ ಎಂದು ತನ್ನ ಹಿಂಬಾಲಕರ ಮೂಲಕ ಪತ್ರಿಕೆಗಳಲ್ಲಿ ಹೇಳಿಕೆ ನೀಡಿರುವುದು ಬೆಂಕಿಗೆ ಪೆಟ್ರೋಲ್ ಸುರಿದಂತೆ ಆಗಿದೆ.

ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಉಗಿದ ಮೇಲಾದರು ಎಚ್ಚತ್ತುಕೊಳ್ಳದ ನಯನರ ವರ್ತನೆ ನೋಡಿ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.ಇದರ ಜೊತೆಗೆ ಸಮಸ್ಯೆ ಬೆಳೆಸದಂತೆ ಮಾಡಲು ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಅಂಶುಮಂತ್ ಶತಪ್ರಯತ್ನ ನಡೆಸಿದರೆ ಮುಂದೆ ಕಾಂಗ್ರೆಸ್ ಅಧ್ಯಕ್ಷ ಆಗಲೇ ಬೇಕು ಎಂದು ನಯನ ರನ್ನು ಓಲೈಸಲು ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾನಂದಸ್ವಾಮಿ ನೀವು ಮಾಡಿರುವುದು ಸರಿ ಎಂದು ಫೇಸ್ ಬುಕ್ಕಲ್ಲಿ ಕಾಮೆಂಟ್ ಹಾಕಿ ಸಮಾಧಾನ ಮಾಡಿರುವುದು ಕಾಂಗ್ರೆಸ್ ನಲ್ಲಿ ಏನು ನಡೆಯುತ್ತಿದೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡುವಂತಾಗಿದೆ.

ಕಾಂಗ್ರೆಸ್ ನ ಮುಖಂಡರು ಮತ ಪಡೆಯಲು ಪ್ರಗತಿಪರರ ಮನೆ ಬಾಗಿಲಿಗೆ ಹೋಗಿರುವುದು ಸುಳ್ಳಾ ಈಗ ಮೌನವಹಿಸಿರುವುದು ಶಾಸಕರನ್ನು ಮೆಚ್ಚಿಸಲಾ ಎಂಬ ಪ್ರಶ್ನೆ ಕೇಳ ಬೇಕಾಗಿದೆ. ಅಧಿಕಾರ ಮದ ಸಣ್ಣ ವಿಷಯಕ್ಕೆ ಮತ್ತಷ್ಟು ಬೆಂಕಿ ಉಗುಳುವ ಮಟ್ಟಕ್ಕೆ ಹೋಗುತ್ತಿರುವುದು ಮಾತ್ರ ಸತ್ಯ. ಈಗಾಗಲೇ ಬಿ,ಎಸ್,ಪಿಯವರು ಕೆಂಡ ಕಾರಿದ್ದಾರೆ ನಯನ ಮಾತ್ರ ನನಗೆ ಮತ ಹಾಕದವರ ಪಿತೂರಿ ಎಂದರೆ ನಿಜವಾಗಿ ಪಿತೂರಿ ನಡೆಸುವವರು ನಿಮ್ಮ ಮೆಚ್ಚಿಸುವವರು ಎಂದು ಅರಿತು ಕೊಳ್ಳುವುದು ಒಳ್ಳೆಯದು .

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!