Monday, August 4, 2025
!-- afp header code starts here -->
Homeರಾಜಕೀಯಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ದೇವೇಗೌಡರನ್ನು ತರಬೇಡಿ ಎಂದು ಹೆಚ್ಡಿಕೆ: ದೊಡ್ಡಗೌಡರನ್ನು ಯಾಕೆ ಬೈಯ್ಬಾರ್ದು ಎಂದು ಜನ...

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ದೇವೇಗೌಡರನ್ನು ತರಬೇಡಿ ಎಂದು ಹೆಚ್ಡಿಕೆ: ದೊಡ್ಡಗೌಡರನ್ನು ಯಾಕೆ ಬೈಯ್ಬಾರ್ದು ಎಂದು ಜನ ಪ್ರಶ್ನೆ

ಬೆಂಗಳೂರು; ಜೆಡಿಎಸ್ ಯುವ ನಾಯಕನ ಲೈಂಗಿಕ ದೌರ್ಜನ್ಯ ಹಗರಣ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದೆ.ರಾಜ್ಯ ಸರ್ಕಾರವು ಈ ಪ್ರಕರಣದ ಕುಲ೦ಕುಷ ತನಿಖೆಗಾಗಿ SIT ತ೦ಡವನ್ನು ರಚಿಸಿದೆ. ಮಹಿಳಾ ಆಯೋಗವು ಈ ಅಶ್ಲೀಲ ವೀಡಿಯೊಗೆ ಸಂಬಂಧಿಸಿ ತಕ್ಷಣ ವರದಿಯನ್ನು ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ. ಆದ್ರೆ ಜನರು ಮಾತ್ರ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಯಾಕಂದರೆ ಒಬ್ಬ ಮಾಜಿ ಪ್ರಧಾನಿಯಾಗಿರುವ ದೇವೇಗೌಡರ ಕುಟುಂಬ, ತನ್ನ ಮೊಮ್ಮಗ ಪ್ರಜ್ವಲ್ ರೇವಣ್ಣನನ್ನು ಕಾನೂನಿಗೆ ಒಪ್ಪಿಸಿ ತನಿಖೆಗೆ ಸಹಕರಿಸಬೇಕಾಗಿತ್ತು ಅಲ್ಲದೆ ಪ್ರಜ್ವಲ್ ರಾತ್ರೋರಾತ್ರಿ ದೇಶ ಬಿಟ್ಟು ಹೋಗೋದನ್ನ ತಡೆಯುವ ಜವಾಬ್ದಾರಿ ಕೂಡ ಇವರ ಮೇಲಿತ್ತು. ಆದ್ರೆ ಇವ್ರು ಎಷ್ಟು ಬುದ್ಧಿವಂತರು ನೋಡಿ, ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸುತ್ತಿದ್ದಂತೆ , ಆರೋಪಿ ಪ್ರಜ್ವಲ್ ನನ್ನ ವಿದೇಶಕ್ಕೆ ಕಳಿಸಿ ಇದೀಗ ಅವರನ್ನಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಈ ಪ್ರಕರಣದ ಹೊಣೆ ಹೊತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ರೇವಣ್ಣ ಶಾಶ್ವತವಾಗಿ ರಾಜಕೀಯ ನಿವೃತ್ತಿ ಘೋಷಿಸಬೇಕಾಗಿತ್ತು ಎಂದು ರಾಜ್ಯದ ಜನರು ಆಕ್ರೋಶ ಹೊರಹಾಕಿದ್ದಾರೆ. ಹಾಸನದಲ್ಲಿ ಚುನಾವಣೆ ಪ್ರಚಾರ ಮಾಡುವಾಗ ,ಪ್ರಜ್ವಲ್ ,ರೇವಣ್ಣರ ಮಗ ಅಲ್ಲ ,ನನ್ನ ಮಗ ಅಂತ ಭಾವಿಸಿ ಮತ ಹಾಕಿ ಎಂದು ಪ್ರಚಾರ ಮಾಡಿದ್ದೀರಿ. ಇವಾಗ ನನಗು ಅವರಿಗೂ ಸಂಬಂಧವಿಲ್ಲ ಅಂದ್ರೆ ಹೇಗೆ?

ಪ್ರಜ್ವಲ್ ರೇವಣ್ಣ, ದೇವೇಗೌಡರ ಮೊಮ್ಮಗ, ದೇವೇಗೌಡರ ಕುಟುಂಬದ ಕುಡಿ., ದೇವೇಗೌಡರು ರೆಡಿ ಮಾಡಿದ್ದಾರೆ ಅನ್ನೋ ಒಂದೇ ಒಂದು ಕಾರಣಕ್ಕೆ ಅವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಜನರು ಅವರನ್ನ ಒಪ್ಪಿಕೊ೦ಡಿದ್ದಾರೆ.ಇಲ್ಲದೆ ಹೋಗಿದ್ದರೆ, ಅವ್ರಿಗೆ ಯಾವುದೇ ಅರ್ಹತೆ ಇರಲಿಲ್ಲ. ಹೀಗಾಗಿ ನಾವು ಯಾಕೆ ದೇವೇಗೌಡರ ಕುಟುಂಬವನ್ನ ದೂಷಿಸಬಾರದು ಅಂತ ಜನ ಕುಮಾರಸ್ವಾಮಿಯವರಿಗೆ ಪ್ರಶ್ನಿಸುತ್ತಿದ್ದಾರೆ. ಮೊನ್ನೆಯಷ್ಟೇ ಕುಮಾರಸ್ವಾಮಿಯವರು ,ದೇವೇಗೌಡರು ಮತ್ತು ನಾನು ರೇವಣ್ಣ ಕುಟುಂಬದಿಂದ ದೂರ ಆಗಿದ್ದೀವಿ . ರೇವಣ್ಣ ಮತ್ತು ನಮ್ಮ ಕುಟುಂಬಕ್ಕೂ ಯಾವುದೇ ಸ೦ಭ೦ಧವಿಲ್ಲ ಅಂತ ಪ್ರತಿಕ್ರಿಯೆ ನೀಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!