ಹಾಸನ (ಮೇ1): ಪ್ರಜ್ವಲ್ ರೇವಣ್ಣ ರಾಸಲೀಲೆ ಪ್ರಕರಣಕ್ಕೆ ಸಂಭ೦ಧಪಟ್ಟಂತೆ ಇದೀಗ ಆರೋಪಿ ಪ್ರಜ್ವಲ್ ಖುದ್ದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರತ್ಯಕ್ಷವಾಗಿದ್ದಾರೆ. ತಾನು ವಿದೇಶ ಪ್ರವಾಸದಲ್ಲಿರುವುದರಿಂದ ವಿಚಾರಣೆಗೆ ಹಾಜರಾಗಲು ಏಳು ದಿನಗಳ ಸಮಯಾವಕಾಶ ಕೋರಿ ವಕೀಲರ ಮೂಲಕ ಎಸ್.ಐ.ಟಿ.ಗೆ ಮನವಿ ಪತ್ರ ಕಳುಹಿಸಿದ್ದಾರೆ.

ತಮ್ಮ ಮನವಿ ಪತ್ರದಲ್ಲಿ, ಸತ್ಯ ಆದಷ್ಟು ಬೇಗ ಹೊರಬರಲಿದೆ ಎಂದು ಬರೆದಿದ್ದು, ತನ್ನ ವಕೀಲರ ಮನವಿ ಪತ್ರವನ್ನ ಪೋಸ್ಟ್ ಮಾಡಿದ್ದಾರೆ. ಪ್ರಜ್ವಲ್ ರೇವಣ್ಣರ ಈ ಪೋಸ್ಟ್ ನೋಡಿದ್ರೆ, ಮೇ 4ರಂದು ಕೂಡ ಎಸ್ ಐ ಟಿ ವಿಚಾರಣೆಗೆ ಪ್ರಜ್ವಲ್ ರೇವಣ್ಣ ಹಾಜರಾಗೋದು ಬಹುತೇಕ ಡೌಟ್ ಅನ್ಸುತ್ತೆ. ಎಸ್ ಐ ಟಿ ಅಧಿಕಾರಿಗಳಿಗೆ ಬರೆದಿರುವ ಮನವಿ ಪ್ರತ್ರದಲ್ಲಿ 7 ದಿನಗಳ ಕಾಲವಕಾಶ ಕೇಳಲಾಗಿದೆ. ಹೀಗಾಗಿ ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ಬಂದ ನಂತರದಲ್ಲೂ ಕೂಡ ತಾವು ಮುಂದೆ ಯಾವ ರೀತಿ ಹೆಜ್ಜೆ ಇಡಬೇಕು ಅನ್ನೋದನ್ನ ವಕೀಲರೊಂದಿಗೆ ಚರ್ಚಿಸಿ ಎಸ್ ಐ ಟಿ ವಿಚಾರಣೆಗೆ ಹಾಜರಾಗೋ ಸಾಧ್ಯತೆ ಇದೆ.