ಬಿಜೆಪಿ ಜಿಲ್ಲಾ ಮಾಧ್ಯಮ ವಕ್ತಾರ ಐನೆಟ್ ವಿಜಿ ಕುಮಾರ್ ಮೇಲೆ ಹಲ್ಲೆ ಮಾಡಿದ ಪ್ರೀತಂಗೌಡ ಬೆಂಬಲಿಗರನ್ನು ಹಾಸನ ಪೊಲೀಸರು ಬಂಧಿಸಿದ್ದಾರೆ.
ಪ್ರೀತಂಗೌಡ ಬೆಂಬಲಿಗರು ಐನೆಟ್ ಶಾಪ್ ಒಳಗೆ ಏಕಾಏಕಿ ನುಗ್ಗಿ ವಿಜಿ ಕುಮಾರ್ ಹಲ್ಲೆ ಮಾಡಿ ಓಡಿ ಹೋಗಿದ್ರು. ಬಳಿಕ ವಿಜಿ ಕುಮಾರ್ ನನ್ನು ಹಾಸನದ ಹಿಮ್ಸ್ ಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಯಿತು. ವಿಷಯ ತಿಳಿದ ಮಾಜಿ ಪ್ರಧಾನಿ ದೇವೇಗೌಡ, ಹಾಗೂ ಪ್ರಜ್ವಲ್ ರೇವಣ್ಣ ಆಸ್ಪತ್ರೆಗೆ ಭೇಟಿ ನೀಡಿ ವಿಜಿ ಕುಮಾರ್ ಆರೋಗ್ಯ ವಿಚಾರಿಸಿ ಧೈರ್ಯ ನೀಡಿ ಹಲ್ಲೆಗೆ ಮಾಡಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಪೊಲೀಸರಿಗೆ ಆದೇಶ ಮಾಡಿದ್ರು.
ಇಂದು ಹಲ್ಲೆಗೆ ಸಂಬಂಧಿಸಿದಂತೆ ಸುರೇಶ್, ಕಿರಣ್, ಮೋಹನ್, ಅಭಿಷೇಕ್, ಪವನ್ ಎಂಬುವವರನ್ನು ವಿರುದ್ಧ ಪ್ರಕರಣ ದಾಖಲಿಸಿಕೊಂಡು ಐವರು ಆರೋಪಿಗಳನ್ನು ಪೊಲೀಸರು
ಬಂಧಿಸಿ ನ್ಯಾಯಾಧೀಶರ ಎದುರು ರಾತ್ರಿಯೇ ಹಾಜರುಪಡಿಸಿದ್ರು. ವಿಚಾರಣೆ ನಡೆಸಿ ಐವರು ಆರೋಪಿಗಳಿಗೆ ನ್ಯಾಯಾಧೀಶರು ಜಾಮೀನು ನೀಡಿದ್ದಾರೆ.
ಲೋಕ ಸಭೆ ಚುನಾವಣೆ ಹಿನ್ನಲೆ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಒಪ್ಪಂದ ಮಾಡಿಕೊಂಡಿದ್ರು. ಆದಾದ ಬಳಿಕ ಮೈತ್ರಿ ಅಭ್ಯರ್ಥಿ ಪ್ರಜಲ್ ರೇವಣ್ಣ ಹಾಗೂ ಪ್ರೀತಂಗೌಡ ಮೇಲ್ನೊಟಕ್ಕೆ ಚೆನ್ನಾಗಿ ಇದ್ದಂತೆ ಇದ್ರು. ಅದಕ್ಕೆ ಸಾಕ್ಷಿಯಾಗಿ ಪ್ರೀತಂಗೌಡ ಬೆಂಬಲಿಗರು ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಾಟೇಲ್ ಗೆ ಬೆಂಬಲ ಸೂಚಿಸುವುದಾಗಿ ಬಹಿರಂಗ ಹೇಳಿಕೆ ಕೊಟ್ಟಿದ್ರು. ಅದರ ಬೆನ್ನಲೇ ಈಗ ವಿಜಿ ಕುಮಾರ್ ಹಲ್ಲೆ ನಡೆದಿರುವುದು ಜೆಡಿಎಸ್ ನಾಯಕರಲ್ಲಿ ಒಂದು ರೀತಿಯ ಕಳವಳ ಉಂಟಾಗಿದೆ.
ಒಟ್ಟಾರೆ ಹಾಸನ ಲೋಕ ಸಭಾ ಕ್ಷೇತ್ರದಲ್ಲಿ ಮೈತ್ರಿ ಒಳಜಗಳದಿಂದ ಬೂದಿ ಮುಚ್ಚಿದ ಕೆಂಡದಂತಾಗಿದೆ. ಮೈತ್ರಿ ಒಳ ಜಗಳ ಮುಂದುವರಿದರೇ ಹಾಸನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆ ಗೆಲುವು ಗ್ಯಾರಂಟಿ ಎಂದು ಮತದಾರು ಅಭಿಪ್ರಾಯ ಪಟ್ಟಿದ್ದಾರೆ.