ಬೆಂಗಳೂರು: ಮಹಿಳೆ ಅಪಹರಣ ಪ್ರಕರಣದಲ್ಲಿ ಎಸ್ ಐಟಿ ಅಧಿಕಾರಿಗಳಿಂದ ಅರೆಸ್ಟ್ ಆಗಿ ಸದ್ಯ ಎಸ್ ಐಟಿ ಕಸ್ಟಡಿಯಲ್ಲಿರುವ ಮಾಜಿ ಸಚಿವ, ಶಾಸಕ ಹೆಚ್ ಡಿ ರೇವಣ್ಣ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು ಆಸ್ಪತ್ರೆಗೆ ದಾಖಲು
ಮಾಡಲಾಗಿದೆ.
ಮೇ.4 ರಂದು ರೇವಣ್ಣ ಅವರನ್ನು ಎರೆಸ್ಟ್ ಮಾಡುತ್ತಿದ್ದಂತೆ ಕೋರ್ಟ್ ಮೂಲಕ ಎಸ್ ಐಟಿ ಅಧಿಕಾರಿಗಳು ರೇವಣ್ಣ ಅವರನ್ನು ನಾಲ್ಕು ದಿನಗಳ ಕಾಲ ಅಂದರೆ ಮೇ.8 (ನಾಳೆ) ವರೆಗೆ ತನ್ನ ಕಸ್ಟಡಿಗೆ ಪಡೆದಿದೆ. ಇದರ ಬೆನ್ನಲ್ಲೇ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ರೇವಣ್ಣ ಅವರು ಎಸ್ ಐಟಿ ಅಧಿಕಾರಿಗಳ ನಿರಂತರ ವಿಚಾರಣೆಯಿಂದ ಕುಗ್ಗಿದ್ದರು ಎನ್ನಲಾಗುತ್ತಿದೆ. ಈ ಮಧ್ಯೆ ರೇವಣ್ಣಗೆ ಮಧ್ಯಾಹ್ನದಿಂದ ಹೊಟ್ಟೆ ಉರಿ ಹಾಗೂ ಎದೆನೋವು ಕಾಣಿಸಿಕೊಂಡಿತ್ತು. ಹಾಗಾಗಿ ಅವರನ್ನು ಬೌರಿಂಗ್ ಆಸ್ಪತ್ರೆಗೆ ತರೆ ತಂದು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿತ್ತು. ವೇಳೆ ಎದೆನೋವು ಹಾಗೂ ಹೊಟ್ಟೆ ಉರಿ ಹೆಚ್ಚಾದ ಹಿನ್ನೆಲೆ ವೈದ್ಯರು ಅಡ್ಮಿಟ್ ಮಾಡುವಂತೆ ಸೂಚನೆ ನೀಡಿದ್ದಾರೆ. ಎನ್ನಲಾಗಿದೆ. ಅದರಂತೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ
ಇನ್ನು ವೈದ್ಯರು ಅಡ್ಮಿಟ್ ಮಾಡಬೇಕೆಂದು ಸೂಚನೆ ನೀಡಿದ ಬೆನ್ನಲ್ಲೇ ಎಸ್ಐಟಿ ಅಧಿಕಾರಿಗಳು ಸಹ ಅನುಮತಿ ನೀಡಿದ್ದಾರೆ. ಈ ವೇಳೆ ಜಯನಗರ ಎಸಿಪಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಆಸ್ಪತ್ರೆ ಬಳಿ ಭದ್ರತೆಯನ್ನೂ ಒದಗಿಸಲಾಗಿದ್ದು, ಪೊಲೀಸರು ಹೆಚ್ಚುವರಿ ಬ್ಯಾರಿಗೇಟ್ಗಳನ್ನೂ ತರಿಸುತ್ತಿದ್ದಾರೆ ಎನ್ನಲಾಗಿದೆ.