Monday, August 4, 2025
!-- afp header code starts here -->
Homeರಾಜಕೀಯಮುಡಾದಲ್ಲಿ ಸಿದ್ದರಾಮಯ್ಯ ಅವರ ಪಾತ್ರ ಯಾವ ಹಂತದಲ್ಲೂ ಇಲ್ಲ: ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿಕೆ

ಮುಡಾದಲ್ಲಿ ಸಿದ್ದರಾಮಯ್ಯ ಅವರ ಪಾತ್ರ ಯಾವ ಹಂತದಲ್ಲೂ ಇಲ್ಲ: ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿಕೆ

ಹಾಸನ ; ಮುಡಾದಲ್ಲಿ ಸಿದ್ದರಾಮಯ್ಯ ಅವರ ಪಾತ್ರ ಯಾವ ಹಂತದಲ್ಲೂ ಇಲ್ಲ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ.

ಹಾಸನ ಜಿಲ್ಲೆ  ಸಕಲೇಶಪುರ ತಾಲ್ಲೂಕಿನ, ಹೆಬ್ಬನಹಳ್ಳಿಯಲ್ಲಿ ಮಾತನಾಡಿದ ಸಹಕಾರ ಸಚಿವ ಕೆ.ಎನ್.ರಾಜಣ್ಣ ತಪ್ಪು ಮಾಡಿದ್ದಾನೆ, ತಪ್ಪು ಮಾಡಿದ್ದಕ್ಕೆ ಶಿಕ್ಷೆ ಆಗುತ್ತೆ. ಮುಖ್ಯಮಂತ್ರಿ ಅಧಿಕಾರಿ ಮೇಲೆ ಪ್ರಭಾವ ಬೀರಿ ಸೈಟ್ ತಗೊಂಡಿದ್ರೆ ಏಕೆ ಸಸ್ಪೆಂಡ್ ಮಾಡ್ತಾರೆ.ಅವರ ಪರವಾಗಿ ಇದ್ದವನನ್ನು ಅಮಾನತು ಮಾಡ್ತಾರಾ? ಎಂದು ಪ್ರಶ್ನಿಸಿದ್ದಾರೆ.

ಪ್ರಕರಣ ಕೋರ್ಟ್ ಮುಂದೆ ಇದೆ.ಮುಡಾದಲ್ಲಿ ಸಿದ್ದರಾಮಯ್ಯ ಅವರ ಪಾತ್ರ ಯಾವ ಹಂತದಲ್ಲೂ ಇಲ್ಲ.ಸೈಟ್ ಹಂಚಿಕೆ ಆಗುವಾಗ ಇವರು ಅಧಿಕಾರದಲ್ಲಿ ಇಲ್ಲ, ವಿರೋಧ ಪಕ್ಷದಲ್ಲಿ ಇದ್ದರು.ಬಿಜೆಪಿ ಪಾರ್ಟಿಯ ಅಧ್ಯಕ್ಷರು, ಶಾಸಕರು, ಜೆಡಿಎಸ್, ಕಾಂಗ್ರೆಸ್ ಶಾಸಕರು ಇರುವ ಸಭೆಯಲ್ಲಿ ಸೈಟ್ ಕೊಟ್ಟಿದ್ದಾರೆ.ಇದರಲ್ಲಿ ಸಿದ್ದರಾಮಯ್ಯ ಅವರದ್ದು ಏನಿದೆ ಎಂದಿದ್ದಾರೆ.

ರಾಜಕೀಯ ದುರುದ್ದೇಶದಿಂದ ಗವರ್ನರ್ ಮೇಲೆ ಪ್ರಭಾವ ಬೀರಿ ಈ ರೀತಿ ಪರಿಸ್ಥಿತಿ ಸೃಷ್ಟಿಯಾಗಿದೆ.ಇದರಲ್ಲಿ ಸಿದ್ದರಾಮಯ್ಯ ಅವರದ್ದು ಯಾವುದೇ ಪಾತ್ರ ಇಲ್ಲದಿರುವುದರಿಂದ ನ್ಯಾಯಾಲಯದಲ್ಲಿ ನ್ಯಾಯ ಸಿಗುತ್ತೆ ಎಂದು ನಂಬಿದ್ದೇವೆ ಎಂದಿದ್ದಾರೆ.

ಇದೇ ವೇಳೆ ಹಿರಿಯ ಆರ್.ವಿ.ದೇಶಪಾಂಡೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಸಿಎಂ ಕುರ್ಚಿ ಖಾಲಿ ಇದೆಯಾ, ಖಾಲಿ ಇದ್ದರೆ ಕೇಳಬೇಕು.ಸಿಎಂ ಕುರ್ಚಿ ಒಂದೇ ಇರೋದು, ಕುರ್ಚಿ ಭರ್ತಿಯಾಗಿದೆ.ಬಹಳಷ್ಟು ಕುರ್ಚಿಗಳಿದ್ದರೆ ಕೇಳಬಹುದು, ಸಿಎಂ ಕುರ್ಚಿ ಒಂದೇ ಇರೋದು.ಸಿಎಂ ಕುರ್ಚಿ ಖಾಲಿ ಆದ ಮೇಲೆ ಕೇಳಲಿ.ದೇಶಪಾಂಡೆ ಅವರೊಬ್ಬರೆ ಅಲ್ಲಾ ಇರೋದು.ದೇಶಪಾಂಡೆ ಅವರ ತರ ಒಂದು ಪಟ್ಟಿನೇ ಇದೆ.ಅವರ ಹೇಳಿಕೆಯನ್ನು ಗಮನಿಸಿ, ಕ್ಯಾಬಿನೆಟ್ ಮಿನಿಸ್ಟರ್ ಆಗಿದ್ದೆ ಈಗ ಅದರ ಬಗ್ಗೆ ಆಸಕ್ತಿ ಇಲ್ಲ.ಸಿದ್ದರಾಮಯ್ಯ ಒಪ್ಪಿದ್ರೆ ಮುಖ್ಯಮಂತ್ರಿ ಆಗ್ತೀನಿ ಅಂದಿದ್ದಾರೆ.ಸಿದ್ದರಾಮಯ್ಯ ಒಪ್ಪಿದ್ರೆ ಮುಖ್ಯಮಂತ್ರಿ ಆಗ್ತಾರಾ.ಹೈಕಮಾಂಡ್ ಒಪ್ಪಿದ್ರೆ ಮುಖ್ಯಮಂತ್ರಿ ಆಗೋದು.ಅವರ ಹೇಳಿಕೆಯನ್ನು ತೀವ್ರವಾಗಿ ಪರಿಗಣಿಸಿ, ಚರ್ಚೆ ಮಾಡುವ ಅಗತ್ಯತೆ ಇಲ್ಲ.ಈ ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗದ ಪ್ರಭಾವಿ ಮುಖಂಡ.ದೇವರಾಜ ಅರಸು, ಬಂಗಾರಪ್ಪ ನಂತರ ಅಹಿಂದ ವರ್ಗದ ಒಬ್ಬ ಪಾಪ್ಯುಲರ್ ಲೀಡರ್ ಸಿದ್ದರಾಮಯ್ಯ.ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದೆ ನಲವತ್ತು ವರ್ಷ ರಾಜಕಾರಣ ಮಾಡಿದ್ದಾರೆ.ಏನಾದರೂ ಮಾಡಿ ಅವರ ಹೆಸರಿಗೆ ಮಸಿ ಬಳಿದು, ಅವರ ಪಾಪ್ಯುಲಾರಿಟಿ ಕಡಿಮೆ ಮಾಡಬೇಕು, ಅವರ ಪಾಪ್ಯುಲಾರಿಟಿ ಕಡಿಮೆ ಆದರೆ ಕಾಂಗ್ರೆಸ್ ಶಕ್ತಿ ಕೊಂದುತ್ತೆ.ಆ ದೃಷ್ಟಿಯಿಂದ ಅವರನ್ನು ಟಾರ್ಗೆಟ್ ಮಾಡ್ತಿದ್ದಾರೆ ಅದು ಸರಿಯಾದುದ್ದಲ್ಲ.ರಾಜಕಾರಣದಲ್ಲಿ ವೈಯುಕ್ತಿಕ ತೇಜೋವಧೆ ಮಾಡುವ ಕೆಲಸ ಯಾರು ಯಾರಿಗೂ ಮಾಡಬಾರದು ಎಂದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!