ಮಂಡ್ಯ (26): ಮಂಡ್ಯದಲ್ಲಿ NDA ಅಭ್ಯರ್ಥಿ ಕುಮಾರಸ್ವಾಮಿ ಪರ ಸುಮಲತಾ ಅಂಬರೀಶ್ ಸರಿಯಾಗಿ ಪ್ರಚಾರ ಮಾಡ್ಲಿಲ್ಲ, ಸಹಕರಿಸಲಿಲ್ಲ ಅಂತ ಕಳೆದ ವಾರವಷ್ಟೇ , ಮಾಜಿ ಪ್ರಧಾನಿ ದೇವೇಗೌಡ್ರು ಕಿಡಿಕಾರಿದ್ದರು.ಈ ಬಗ್ಗೆ ಪ್ರತಿಕ್ರಿಯಿಸಿದ ಸುಮಲತಾ ಅಂಬರೀಶ್ ,ದೇವೆಗೌಡರು ದೊಡ್ಡವರು, ಅವರಿಗೆ ಯಾರೋ ಸರಿಯಾದ ಮಾಹಿತಿ ಕೊಡದೆ ಆ ರೀತಿಯಾಗಿ ಹೇಳಿಕೆ ನೀಡಿದ್ದಾರೆ ಅಂತ ಹೇಳಿದ್ರು.

ನಾನು ಗೆದ್ದ ಸ್ಥಾನವನ್ನ NDA ಅಭ್ಯರ್ಥಿ ಕುಮಾರಸ್ವಾಮಿಗೆ ಬಿಟ್ಟು ಕೊಟ್ಟು ದೊಡ್ಡ ತ್ಯಾಗ ಮಾಡಿದ್ದೀನಿ. ಈ ವೇಳೆ ನನ್ನ ಅಭಿಮಾನಿಗಳು ವಿರೋಧವನ್ನು ವ್ಯಕ್ತಪಡಿಸಿದರು. ಗೆದ್ದ ಸೀಟನ್ನು ತ್ಯಾಗ ಮಾಡಿ, ಪಕ್ಷಕ್ಕಾಗಿ ಏನು ಮಾಡಲು ಸಾಧ್ಯವೋ ಅದೆಲ್ಲ ಮಾಡಿದ್ದೀನಿ. ಹಾಗಿದ್ರೂ ದೇವೇಗೌಡರು ,ಕುಮಾರಸ್ವಾಮಿ ಪರ ಪ್ರಚಾರ ಮಾಡಿಲ್ಲ ಅ೦ದಿರೋದು ನನಗೆ ಬೇಸರ ತರಿಸಿದೆ ಅಂತ ಸುಮಲತಾ ಬೇಸರ ಹೊರಹಾಕಿದ್ದಾರೆ.
ನಮ್ಮ ಮನೆಗೆ ಬಂದು ಹೋದ ಮೇಲೆ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ನ ಯಾವ ನಾಯಕರು ಕೂಡ ನನಗೆ ಒಂದೇ ಒಂದು ದಿನ ಯಾವುದೇ ಪ್ರಚಾರಕ್ಕೆ ಆಹ್ವಾನಿಸಿಲ್ಲ .ಅವರು ಕರೆದು ನಾನು ಬರದೇ ಇದ್ದರೆ ತಪ್ಪಾಗುತ್ತದೆ. ಆದರೆ ಅವರು ನನ್ನನ್ನು ಕರೆದಿಲ್ಲ, ನಾನಿಲ್ಲದೇ ಅವರು ಚುನಾವಣೆ ಮಾಡಿಕೊಳ್ಳುತ್ತೀವಿ ಎಂಬ ಭಾವನೆ ಇರಬಹುದು ಎಂದು ಸುಮಲತಾ ಅಂಬರೀಶ್ ಟಾಂಗ್ ಕೊಟ್ಟರು. ಅಲ್ಲದೆ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಲೆಂದು ಇಷ್ಟು ದೊಡ್ಡ ತ್ಯಾಗ ಮಾಡಿರೋದಾಗಿ ಸುಮಲತಾ ಟಾಂಗ್ ಕೊಟ್ಟಿದ್ದಾರೆ.