ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ..!?
ಸುಮಲತಾ ಅಂಬರೀಷ್.! ಮಂಡ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ ನಾಯಕಿ.! ಅಂದಾಗೆ ಹೀಗೆ ರಾಜಕೀಯ ನಾಯಕಿ ಆಗೋಕ್ಕಿಂತ ಮುಂಚೆ ಸುಮಲತಾ ಸಿನಿರಂಗದಲ್ಲಿ ನಾಯಕಿ ಆಗಿ ಕಾಣಿಸಿಕೊಂಡು ಸಾಕಷ್ಟು ನೇಮು-ಫೇಮು ಮಾಡಿದ್ದವರು. ಕನ್ನಡ ಚಿತ್ರರಂಗ ಸೇರಿದಂತೆ ಅನೇಕ ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು. ಆ ಬಳಿಕ ರೆಬೆಲ್ ಸ್ಟಾರ್ ಅಂಬರೀಷ್ ನಿಧನದ ಬಳಿಕ ರಾಜಕೀಯಕ್ಕೆ ಅನಿರೀಕ್ಷಿತವಾಗಿ ಎಂಟ್ರಿಯಾಗಿ ಮಂಡ್ಯ ರಾಜಕೀಯದಲ್ಲಿ ಹೊಸ ಸಂಚಲನವನ್ನೇ ನಿರ್ಮಾಣ ಮಾಡಿದ ನಾಯಕಿ.!
ಕಳೆದ ಬಾರಿ ಮಂಡ್ಯದಲ್ಲಿ ಸುಮಲತಾ ಸೃಷ್ಠಿಸಿದ್ರು ಇತಿಹಾಸ
ಕಳೆದ ಬಾರಿ ಮಂಡ್ಯ ರಾಜಕೀಯ ಯಾವ ರೀತಿ ರಾಜ್ಯ-ರಾಷ್ಟ್ರದ ಗಮನ ಸೆಳೆದಿತ್ತು ಅನ್ನೋದು ಎಲ್ಲರಿಗೂ ತಿಳಿದ ವಿಚಾರವೇ. ಆಗ ರಾಜ್ಯದಲ್ಲಿ ಆಸ್ತಿತ್ವದಲ್ಲಿದ್ದ ಜೆಡಿಎಸ್-ಕಾಂಗ್ರೆಸ್ ಸರ್ಕಾರವೇ ಮಂಡ್ಯಕ್ಕೆ ಹೋಗಿ ಸುಮಲತಾ ವಿರುದ್ಧ ಪ್ರಚಾರ ನಡೆಸಿತು. ಹತ್ತಾರು ಸಚಿವರು, ಘಟಾನುಘಟಿ ನಾಯಕರು ಸುಮಲತಾರನ್ನ ಹೆಣೆಯಲು ರಣತಂತ್ರ ರೂಪಿಸಿದ್ರು. ಆಗ ಸಿಎಂ ಆಗಿದ್ದ ಹೆಚ್.ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿಯೇ ಕಣದಲ್ಲಿ ಇದ್ದಿದ್ರಿಂದ ಮಂಡ್ಯ ರಣಕಣ ಇಂಡಿಯಾ ರಣರಂಗವಾಗಿ ಮಾರ್ಪಟಿತ್ತು. ನಿಖಿಲ್ ಗೆದ್ದೆ ಗೆಲುತ್ತಾರೆ ಅಂದುಕೊಂಡಿದ್ದವರಿಗೆ ಒಂದು ಲಕ್ಷಕ್ಕೂ ಅಧಿಕ ಮತಗಳಿಂದ ಸುಮಲತಾ ಗೆದ್ದು ಬೀಗಿದ್ದು ಇದೀಗ ಇತಿಹಾಸ.

2 ಕಡೆ ಮುಚ್ಚಿದ ಬಾಗಿಲು. ಸುಮಲತಾ ಮುಂದಿನ ನಡೆ ಏನು.?
ಕಳೆದ ಸಲದ ಚುನಾವಣೆ ವೇಳೆ ಸೃಷ್ಟಿಯಾಗಿದ್ದ ಸನ್ನಿವೇಶವೇ ಈ ಸಲವೂ ಸೃಷ್ಟಿಯಾಗಿದೆ. ಬಿಜೆಪಿಯಿಂದ ಟಿಕೆಟ್ ಸಿಗುತ್ತೆ ಅಂತಾ ನೀರಿಕ್ಷೆಯಲ್ಲಿದ್ದ ಸುಮಲತಾರಿಗೆ ನಿರಾಸೆ ಕಾದಿತ್ತು. ಬಿಜೆಪಿ ಮಂಡ್ಯದಲ್ಲಿ ಜೆಡಿಎಸ್ ಗೆ ಸೀಟು ಬಿಟ್ಟು ಕೊಟ್ಟಿದ್ದರಿಂದ ಮಂಡ್ಯ ಜೆಡಿಎಸ್ ಪಾಲಾಯ್ತು. ಹೋಗ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಬಿಜೆಪಿ ಬೆಂಬಲದೊಂದಿಗೆ ಕಣಕ್ಕೆ ಇಳಿಯಬಹುದೇನೋ ಅಂದುಕೊಂಡಿದ್ದ ಸುಮಲತಾರಿಗೆ ಅಲ್ಲಿಯೂ ಕೂಡ ನಿರಾಸೆಯಾಯ್ತು. ಸ್ವತಃ ಕುಮಾರಸ್ವಾಮಿಯೇ ಜೆಡಿಎಸ್ ಕ್ಯಾಂಡಿಡೇಟ್ ಆಗಿರೋದ್ರಿಂದ ಸದ್ಯ ಸುಮಲತಾರಿಗೆ ಬಿಜೆಪಿ-ಜೆಡಿಎಸ್ ಎರಡು ಕಡೆ ಬಾಗಿಲು ಮುಚ್ಚಿದೆ.
ಪಕ್ಷೇತರವಾಗಿ ಸ್ಪರ್ಧೆ ಮಾಡಲೇಬೇಕೆಂದ ಬೆಂಬಲಿಗರು.!
ಈ ಬೆಳವಣಿಗೆ ನಡೆಯುತ್ತಲೇ ಇಂದು ಬೆಂಗಳೂರಿನಲ್ಲಿ ಸುಮಲತಾ ಬೆಂಬಲಿಗರ ಸಭೆ ಕರೆದಿದ್ರು. ಅಲ್ಲಿ ಅನೇಕ ಬೆಂಬಲಿಗರ ಅಭಿಪ್ರಾಯವನ್ನ ಪಡೆದ್ರು. ಯಾವುದೇ ಕಾರಣಕ್ಕೂ ನೀವು ಕಣದಿಂದ ಹಿಂದೆ ಸರಿಯಬಾರದು, ಪಕ್ಷೇತರವಾಗಿಯಾದ್ರೂ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕು ಅನ್ನೋ ಕೂಗು ಕೇಳಿಬಂತು. ನಿಮ್ಮೊಂದಿಗೆ ನಾವಿದ್ದೇವೆ, ಯಾರೇ ಎದುರಾಳಿಯಾಗಿ ನಿಂತ್ರೂ ಕೂಡ, ನಮ್ಮ ಪ್ರಾಣಕ್ಕೆ ಸಂಚಕಾರ ಬಂದ್ರೂ ಕೂಡ ನಿಮ್ಮ ಪರವಾಗಿ ನಾವು ಹೋರಾಟ ಮಾಡ್ತೀವಿ, ನೀವು ಮಾತ್ರ ಚುನಾವಣೆಯಲ್ಲಿ ಸ್ಪರ್ಧೆ ಮಾಡಲೇಬೇಕು ಅಂತಾ ಒತ್ತಾಯ ಮಾಡಿದ್ರು. ಅಭಿಮಾನಿಗಳ ಪ್ರೀತಿ-ಆಧಾರ ಕಂಡು ಭಾವುಕರಾದ ಸುಮಲತಾ, ಅಭಿಮಾನಿಗಳಿಗೆ ಕೈ ಎತ್ತಿ ಮುಗಿದ್ರು.!

ಕಳೆದ ಬಾರಿಯೂ ಇದೇ ರೀತಿಯ ಸವಾಲು ಎದುರಿಸಿದ್ದೆ.!
ನಿಮ್ಮ ಅಭಿಮಾನಿಗಳು ಚುನಾವಣೆಗೆ ನಿಲ್ಲಲೇಬೇಕು ಎಂದು ಆಗ್ರಹಿಸುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಸುಮಲತಾ, ಕಳೆದ ಬಾರಿಯೂ ಇದೇ ರೀತಿಯ ಸವಾಲು ಎದುರಾಗಿತ್ತು. ಆಗ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿತ್ತು. ರಾಜ್ಯದಲ್ಲಿ ಕೂಡ ಅವರದೇ ಸರ್ಕಾರ ಇತ್ತು. ಆಗ ನಿಮಗೆ ಟಿಕೆಟ್ ಕೊಡುವುದಿಕ್ಕೆ ಆಗಲ್ಲ ಎಂದು ಕಾಂಗ್ರೆಸ್‌ನವರು ಹೇಳಿದ್ದರು. ಈಗ ಅದೇ ಚಾಲೆಂಜ್ ಬೇರೆ ರೀತಿಯಲ್ಲಿ ನನ್ನ ಮುಂದೆ ಬಂದಿದೆ. ಇದನ್ನು ಯಾವ ರೀತಿ ನಾವು ಎದುರಿಸಬೇಕು ಎಂಬ ಪ್ರಶ್ನೆ ನನ್ನ ಮುಂದಿದೆ. ಹೀಗಾಗಿ ನನ್ನ ಮುಂದಿನ ನಡೆ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ಅಷ್ಟು ಸುಲಭವಾಗಿಲ್ಲ ಎಂದರು.
ನನ್ನನ್ನ ನಂಬಿಕೊಂಡಿರೋ ಅಭಿಮಾನಿಗಳನ್ನ ಕಾಪಾಡಬೇಕು.!
ಮೊನ್ನೆಯವರೆಗೂ ನಮ್ಮ ಕ್ಷೇತ್ರವನ್ನು ಬಿಜೆಪಿ ಉಳಿಸಿಕೊಳ್ಳುತ್ತದೆ ಎಂಬ ವಿಶ್ವಾಸ ಇತ್ತು. ಬಿಜೆಪಿ ನಾಯಕರು ಕೂಡ ಸಾಕಷ್ಟು ಪ್ರಯತ್ನಪಟ್ಟಿದ್ದಾರೆ ಎಂಬುದು ನನಗೆ ಗೊತ್ತಿದೆ. ಆದರೆ, ಬಿಜೆಪಿ ಈಗ ತೆಗೆದುಕೊಂಡಿರೋ ನಿರ್ಧಾರದಲ್ಲಿ ನಮ್ಮ ಭವಿಷ್ಯ ಏನು? ನಮ್ಮನ್ನು ನಂಬಿಕೊಂಡಿರೋ ಜನರ ಭವಿಷ್ಯ ಏನು? ಎಂಬುದು ನನಗೆ ಮುಖ್ಯ ಆಗುತ್ತದೆ. ನಾನು ಬಿಜೆಪಿ ನಾಯಕರ ಜೊತೆ ಮಾತನಾಡಿದಾಗಲೂ ನನಗೆ ನನ್ನ ಭವಿಷ್ಯ ಮುಖ್ಯ ಅಲ್ಲ, ನನ್ನನ್ನು ನಂಬಿಕೊಂಡಿರೋ ಅಭಿಮಾನಿಗಳನ್ನು ಕಾಪಾಡಬೇಕಾದ ಕರ್ತವ್ಯ, ಜವಾಬ್ದಾರಿ ನನ್ನ ಮೇಲಿದೆ ಎಂದು ಹೇಳಿದ್ದೆ ಅಂತಾ ಸುಮಲತಾ, ಅಭಿಮಾನಿಗಳಿಗೆ ಹೇಳಿದ್ರು
ಬಿಜೆಪಿಯಿಂದ ಉನ್ನತ ಸ್ಥಾನಮಾನದ ಆಫರ್ ಬಂದಿದೆ!
ಬಿಜೆಪಿಯಿಂದ ಸ್ಥಾನಮಾನದ ಆಫರ್ ಏನಾದ್ರೂ ಸಿಕ್ಕಿದಿಯಾ ಎಂಬ ಪ್ರಶ್ನೆಗೆ, ಬಿಜೆಪಿ ನಾಯಕರು ಹಾಗೂ ಶುಕ್ರವಾರ ಬಿ.ವೈ ವಿಜಯೇಂದ್ರ ಅವರು ಭೇಟಿಯಾದಾಗ ನಿಮಗೆ ಪಕ್ಷದಲ್ಲಿ ಉಜ್ವಲ ಭವಿಷ್ಯವಿದೆ. ನಮಗೆ ಸಹಕಾರ ಕೊಟ್ಟರೆ ಉನ್ನತ ಸ್ಥಾನಮಾನ ನೀಡುವ ಚಿಂತನೆ ಇದೆ. ಹೈಕಮಾಂಡ್ ಈ ಬಗ್ಗೆ ಮಾಹಿತಿ ನೀಡಿದೆ, ನೀವು ಯಾವುದಕ್ಕೂ ಕಳವಳ ವ್ಯಕ್ತಪಡಿಸಬೇಕಿಲ್ಲ. ನಾವೆಲ್ಲಾ ನೋಡ್ಕೋತಿವಿ. ನಿಮ್ಮ ಬೆಂಬಲಿಗರು, ಕಾರ್ಯಕರ್ತರನ್ನು ಕೈ ಬಿಡಲ್ಲ ಎಂದು ವಿಜಯೇಂದ್ರ ಹೇಳಿದ್ದರು ಎಂದು ಸುಮಲತಾ ತಿಳಿಸಿದ್ರು.
ಅಭಿಮಾನಿಗಳನ್ನ ಕೇಳಿಯೇ ನನ್ನ ಮುಂದಿನ ಹೆಜ್ಜೆ.!
ಇನ್ನು, ಜೆಪಿ ನಡ್ಡಾ ಅವರಿಗೂ ಕೂಡ ನನ್ನ ಭವಿಷ್ಯವೇನೋ ನೀವು ನೋಡ್ಕೋತಿರಿ. ನನ್ನ ಬೆಂಬಲಿಗರ ಭವಿಷ್ಯ, ಕಾರ್ಯಕರ್ತರ ಭವಿಷ್ಯ ಏನಾಗಬೇಕು ಎಂದು ಕೇಳಿದ್ದೆ. ಅದಕ್ಕೆ ಅವರು ನೀವು ಹೇಳಿದ ರೀತಿಯೇ ಮಾಡೋಣ ಎಂದಿದ್ದರು. ಆದರೂ ಏನೇ ನಿರ್ಧಾರ ತೆಗೆದುಕೊಂಡರೂ ನಮ್ಮ ಬೆಂಬಲಿಗರ ಅಭಿಪ್ರಾಯವನ್ನು ಕೇಳಿಯೇ ಹೆಜ್ಜೆ ಇಡಬೇಕು ಎಂದು ನಿರ್ಧರಿಸಿ ಈ ಸಭೆ ಕರೆದಿದ್ದೇನೆ. ಮುಂದೆ ಏನ್ಮಾಡಬೇಕು ಎಂಬುದನ್ನ ಯೋಚಿಸಿ ನಿಮ್ಮ ಮುಂದೆಯೇ ನನ್ನ ನಿರ್ಧಾರ ಪ್ರಕಟ ಮಾಡ್ತೇನೆ ಅಂತಾ ಸುಮಲತಾ ಸಭೆಯಲ್ಲಿ ಹೇಳಿದ್ರು.

ಏಪ್ರಿಲ್ 3ರಂದು ನಿರ್ಧಾರ ಪ್ರಕಟ.!
ಬೆಂಗಳೂರಿನ ಜೆಪಿ ನಗರದ ನಿವಾಸದ ಬಳಿ ತಮ್ಮ ಬೆಂಬಲಿಗರ ಸಭೆ ನಡೆಸಿದ ಬಳಿಕ ಮಾತನಾಡಿದ ಸುಮಲತಾ, ಮಂಡ್ಯ ಜಿಲ್ಲೆಯ ನಮ್ಮ ಬೆಂಬಲಿಗರು, ಅಂಬರೀಶ್ ಅವರ ಅಭಿಮಾನಿಗಳು ಬೆಂಗಳೂರಿಗೆ ಬಂದು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಮೊದಲಿನಿಂದಲೂ ಸಹ ನಾನು ಜನಾಭಿಪ್ರಾಯ ಸಂಗ್ರಹಿಸಿಯೇ ಮುಂದಿನ ಹೆಜ್ಜೆ ಇಟ್ಟಿದ್ದೇನೆ. ಜನರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಾನು ಕೂಡ ಕೆಲವರ ಜೊತೆ ಚರ್ಚೆ ಮಾಡಿ ನನ್ನ ನಿರ್ಧಾರವನ್ನು ಮಂಡ್ಯದಲ್ಲಿಯೇ ಏಪ್ರಿಲ್ 3ರಂದು ಘೋಷಣೆ ಮಾಡುತ್ತೇನೆ ಅಂತಾ ಸುಮಲತಾ ಹೇಳಿರೋದು ಸಾಕಷ್ಟು ಕುತೂಹಲ ಮೂಡಿಸಿದೆ.
ಮತ್ತೆ ಮರಕಳಿಸುತ್ತಾ 2019ರ ನೆನಪು.!
ಯೆಸ್, ಕಳೆದ ಬಾರಿಯ ಮಂಡ್ಯ ಲೋಕಸಭಾ ಚುನಾವಣೆ ಯಾವ ರೀತಿ ನಡೆಯಿತು ಅನ್ನೋದನ್ನ ಇಡೀ ಇಂಡ್ಯಾನೇ ನೋಡಿದೆ. ಕುಮಾರಸ್ವಾಮಿ ಅವರು ತಮ್ಮ ಪುತ್ರನನ್ನ ಗೆಲ್ಲಿಸಲು, ಸರ್ಕಾರದ ಇಡೀ ಪಟಾಲಂ ಅನ್ನ ಕಟ್ಟಿಕೊಂಡು ಹೋದ್ರೂ ಕೂಡ ಹೀನಾಯವಾಗಿ ಸೋಲುಂಡಿದ್ದು ಇನ್ನೂ ಹಸಿಹಸಿಯಾಗಿಯೇ ಇದೆ. ಈ ಮಧ್ಯೆ ಸುಮಲತಾ ಮತ್ತೆ ಪಕ್ಷೇತರವಾಗಿ ಸ್ಪರ್ಧಿಸ್ತಾರಾ ಅನ್ನೋದು ತೀವ್ರ ಕುತೂಹಲ ಹುಟ್ಟಿಸಿದೆ. ಒಂದು ವೇಳೆ ಸುಮಲತಾ ಬಿಜೆಪಿ ಜೊತೆ ಸಖ್ಯ ಬೆಳೆಸುವುದಾದ್ರೆ, ಇಷ್ಟೊತ್ತಿಗಾಗಲೇ ತಮ್ಮ ನಿರ್ಧಾರವನ್ನ ಹೇಳಿ ಬಿಡ್ತಾ ಇದ್ರು. ಅಥವಾ ಸುಮಲತಾರಿಗೆ ಬೇರೆ ಕಡೆ ನಿಂತು ಚುನಾವಣೆ ಎದುರಿಸಿ ಅಂದಾಗಲೂ ಅವರು ಓಕೆ ಅನ್ನಬಹುದಿತ್ತು. ಆದ್ರೆ ಸುಮಲತಾ ಅವರ ನಡೆ ನೋಡಿದ್ರೆ, ಖಂಡಿತಾ ಅವರು ಮಂಡ್ಯದಲ್ಲೇ ಪಕ್ಷೇತರವಾಗಿ ನಿಲ್ಲುವ ಸೂಚನೆ ಸಿಗ್ತಾ ಇದೆ. ಜನರ ಬೆಂಬಲವೂ ಕೂಡ ಇರೋದ್ರಿಂದ ಬಹುತೇಕ ಸುಮಲತಾ ಅವರು ಈ ಬಾರಿಯೂ ಪಕ್ಷೇತರವಾಗಿ ಸ್ಪರ್ಧೆ ಮಾಡೋದು ಪಕ್ಕಾ ಆದಂತಾಗಿದೆ.

ಸುಮಕ್ಕ ಅಖಾಡಕ್ಕೆ ಬಂದ್ರೆ ತ್ರಿಕೋನ ಸ್ಪರ್ಧೆ ಫಿಕ್ಸ್.!
ಈಗಾಗಲೇ ಕಾಂಗ್ರೆಸ್ ನಿಂದ ಸ್ಟಾರ್ ಚಂದ್ರು, ಜೆಡಿಎಸ್ ನಿಂದ ಹೆಚ್.ಡಿ ಕುಮಾರಸ್ವಾಮಿ ಕಣದಲ್ಲಿರೋದ್ರಿಂದ ನೇರಾನೇರ ಸ್ಪರ್ಧೆ ನಡೀಯಬಹುದು ಅಂತಾ ಹೇಳಲಾಗ್ತಿತ್ತು. ಆದ್ರೆ ಸುಮಲತಾ ಅವರು ಪಕ್ಷೇತರವಾಗಿ ಅಖಾಡಕ್ಕೆ ಇಳಿದ್ರೆ, ತ್ರಿಕೋನ ಸ್ಪರ್ಧೆ ಏರ್ಪಡೋದ್ರಲ್ಲಿ ಸಂದೇಹವೇ ಇಲ್ಲ.! ಕಳೆದ ಬಾರಿ ಎಲ್ಲರ ನಿರೀಕ್ಷೆ ಮೀರಿ ಗೆದ್ದ ಸುಮಲತಾ ಅವರು, ಹಾಲಿ ಸಂಸದೆ ಕೂಡ. ಹಾಗಾಗೀ ಅವರ ಸ್ಪರ್ಧೆಯನ್ನ ಈ ಬಾರಿ ಅಷ್ಟು ಸುಲಭವಾಗಿ ನಿರ್ಲಕ್ಷ್ಯ ಮಾಡೋ ಹಾಗೇ ಇಲ್ಲ.!
ಕಳೆದ ಬಾರಿ ಮಗ, ಈ ಬಾರಿ ಅಪ್ಪ ನಾ ಎದುರಿಸ್ತಾರ ಸುಮಲತಾ.!?
ಹೌದು, ಕಳೆದ ಬಾರಿ ಸುಮಲತಾ ಮಾಜಿ ಸಿಎಂ ಹೆಚ್,ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಅವರನ್ನ ಎದುರಿಸಿ ಗೆದ್ದಿದ್ರು. ಆದ್ರೆ ಬದಲಾದ ಸನ್ನಿವೇಶದಲ್ಲಿ ಈ ಬಾರಿ ಸ್ವತಃ ಕುಮಾರಸ್ವಾಮಿ ಅವರೇ ಸುಮಲತಾರವರ ಎದುರಾಳಿ ಆಗ್ತಾರಾ..? ಅನ್ನೋ ಕುತೂಹಲ ಮೂಡಿದ್ದು, ತನ್ನ ನಿರ್ಧಾರವನ್ನ ಯೋಚಿಸಿ ಏಪ್ರಿಲ್ 3ರಂದು ಪ್ರಕಟಿಸ್ತೇನೆ ಅಂತಾ ಸುಮಲತಾ ಹೇಳಿದ್ದಾರೆ. ಹಾಗಾಗೀ ಸದ್ಯ ಎಲ್ಲರ ಚಿತ್ತ ಮಂಡ್ಯ, ಸುಮಲತರತ್ತ ನೆಟ್ಟಿದ್ದು, ಯಾವುದಕ್ಕೂ ಏಪ್ರಿಲ್ 3ರವರೆಗೆ ಕಾಯಲೇಬೇಕಾಗಿದೆ.!