ಬೆಂಗಳೂರು: ಹುಬ್ಬಳ್ಳಿಯ MCA ವಿದ್ಯಾರ್ಥಿನಿ ನೇಹಾ ಹಿರೇಮಠ್ ನಿವಾಸಕ್ಕೆ, ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮತ್ತು ವಿಪಕ್ಷ ನಾಯಕ ಆರ್ ಅಶೋಕ್ ಭೇಟಿ ನೀಡಿ ನೇಹಾ ಕುಟು೦ಬಕ್ಕೆ ಸಾ೦ತ್ವನ ಹೇಳಿದ್ರು.

ಈ ವೇಳೆ ಮಾತನಾಡಿದ ಆರ್. ಅಶೋಕ್, ಕೊಲೆ ಆದ ತಕ್ಷಣ, ಪೊಲೀಸರು ಸಾಕ್ಷ್ಯಗಳನ್ನ ಸ೦ಗ್ರಹ ಮಾಡಬೇಕಿತ್ತು. ಆರೋಪಿ ಫಯಾಜ್ ಯಾರ್ಯಾರ ಜೊತೆ ಫೋನ್ ನಲ್ಲಿ ಮಾತಾನಾಡುತ್ತಿದ್ದ ,ಆ ಕರೆಗಳ ಡೀಟೇಲ್ ನ್ನು ಕಲೆಕ್ಟ್ ಮಾಡಬೇಕಿತ್ತು ಅಂತ ಹೇಳಿದರು. ಅಲ್ಲದೇ ಅವನೇನಾದರೂ ಡ್ರಗ್ಸ್ ಸೇವನೆ ಮಾಡಿದ್ದನಾ? ಅಥವಾ PFI ಮತ್ತು KFD ನಂತಹ ಸಮಾಜ ವಿರೋಧಿ ಸ೦ಘಟನೆ ಜೊತೆ ಲಿಂಕ್ ಇತ್ತಾ ಅನ್ನೋದರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಬೇಕಿತ್ತು ಅಂತ ಪೊಲೀಸರ ಕಾರ್ಯವೈಖರಿಯ ಬಗ್ಗೆ ಆಕ್ರೋಶ ಹೊರಹಾಕಿದ್ರು.
ಇಂಥ ಘಟನೆಗಳು ಆದಾಗ ಗೃಹ ಸಚಿವರು ಹಾರಿಕೆ ಉತ್ತರ ಕೊಡಬಾರದು .ಇದು ವಿಶೇಷ ಪ್ರಕರಣ ಆಗಿದ್ದರು, ಲವ್ ಜಿಹಾದ್ ಎಂದು ಹೇಳಿದರೆ ಎಲ್ಲಿ ತಮ್ಮ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೋ ಅಂತ ಅದನ್ನ ಮರೆಮಾಚಲು ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಕ ಮಾಡಿಲ್ಲ .ಆರೋಪಿಯನ್ನ ಜುಡಿಷಿಯಲ್ ಕಸ್ಟಡಿಗೆ ಕಳಿಸಿದ ಬಳಿಕ ಯಾರ್ಯಾರು ಭೇಟಿ ಮಾಡುತ್ತಿದ್ದಾರೆ, ಅವನನ್ನು ಬಚಾವ್ ಮಾಡಲು ಐಡಿಯಾ ಕೊಡಬಹುದಲ್ವಾ ಅಂತ ಹೇಳಿ ಸರ್ಕಾರ ಆರೋಪಿಯನ್ನ ಬಚಾವ್ ಮಾಡುತ್ತಿದ್ದು, ಈ ಪ್ರಕರಣವನ್ನ ಮುಚ್ಚಿ ಹಾಕಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.