Lok Sabha Elections;ಚುನಾವಣಾ ಆಯೋಗವು ಲೋಕಸಭಾ ಚುನಾವಣಾ ವೇಳಾಪಟ್ಟಿಯನ್ನು ಘೋಷಿಸಲು ಸಮಯ ನಿಗದಿಪಡಿಸಿದೆ. ಚುನಾವಣೆ ದಿನಾಂಕ ಹಾಗೂ ನಿಯಮಗಳನ್ನು ತಿಳಿಸುವ ಸಲುವಾಗಿ ಚುನಾವಣಾ ಆಯೋಗದ ನೂತನ ಆಯುಕ್ತರು ಪತ್ರಿಕಾಗೋಷ್ಠಿಯನ್ನು ನಡೆಸಲಿದ್ದಾರೆ.

Lok Sabha Elections; ಚುನಾವಣಾ ಆಯೋಗವು ಲೋಕಸಭಾ ಚುನಾವಣಾ ವೇಳಾಪಟ್ಟಿಯನ್ನು ಘೋಷಿಸಲು ಸಮಯ ನಿಗದಿಪಡಿಸಿದೆ. ನಾಳೆ (ಮಾರ್ಚ್ 16) ಮಧ್ಯಾಹ್ನ 3 ಗಂಟೆಗೆ 2024ರ ಸಾರ್ವತ್ರಿಕ ಚುನಾವಣೆಗಳು ಮತ್ತು ಕೆಲವು ರಾಜ್ಯ ವಿಧಾನಸಭೆಗಳ ವೇಳಾಪಟ್ಟಿಯನ್ನು ಘೋಷಿಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ.
ಚುನಾವಣೆ ದಿನಾಂಕ ಹಾಗೂ ನಿಯಮಗಳನ್ನು ತಿಳಿಸುವ ಸಲುವಾಗಿ ಚುನಾವಣಾ ಆಯೋಗದ ನೂತನ ಆಯುಕ್ತರು ಪತ್ರಿಕಾಗೋಷ್ಠಿಯನ್ನು ನಡೆಸಲಿದ್ದಾರೆ. ಆಯೋಗವು ಲೋಕಸಭೆ ಚುನಾವಣೆ ವೇಳಾಪಟ್ಟಿಯನ್ನು ಅಂತಿಮಗೊಳಿಸುವಲ್ಲಿ ಕಾರ್ಯನಿರತವಾಗಿದೆ. ಅದರ ಜೊತೆಗೆ 18ನೇ ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯ ಬಗ್ಗೆ ತಿಳಿಸಿದೆ.

ಸಾರ್ವತ್ರಿಕ ಚುನಾವಣೆಗಳ ಜೊತೆಗೆ ಕೆಲವು ರಾಜ್ಯಗಳ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನೂ ಆಯೋಗ ಇದೇ ವೇಳೆ ಪ್ರಕಟಿಸಲಿದೆ.ಚುನಾವಣೆ ಘೋಷಣೆಯಾದ ತಕ್ಷಣ ನೀತಿ ಸಂಹಿತೆ (MCC) ಜಾರಿಗೆ ಬರಲಿದೆ. ಮುಖ್ಯ ಚುನಾವಣಾ ಆಯುಕ್ತ (CEC) ರಾಜೀವ್ ಕುಮಾರ್ ಅವರು ನೀತಿ ಸಂಹಿತೆ ಜಾರಿಯನ್ನು ಪ್ರಕಟಿಸಲಿದ್ದಾರೆ.

