ಹಾಸನದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರು ಇಂದು ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಅವರು ತಮ್ಮ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ.ಶ್ರೇಯಸ್ ಅವರ ಒಟ್ಟು ಆಸ್ತಿ 40 ಕೋಟಿ 99 ಲಕ್ಷದ 02 ಸಾವಿರದ 728 ರೂಪಾಯಿ.

ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರ ಪತ್ನಿ ಅಕ್ಷತಾ ಹೆಸರಿನಲ್ಲಿ ಕೋಟಿ ಬೆಲೆಬಾಳೋ ಸ್ಥಿರ ಹಾಗೂ ಚರಾಸ್ಥಿಯಿದೆ.ಶ್ರೇಯಸ್ ಪಟೇಲ್ 1.25 ಲಕ್ಷ ನಗದು ಹೊಂದಿದ್ದರೆ, ಅವರ ಪತ್ನಿ ಅಕ್ಷತಾ ದೆ 3.94 ಲಕ್ಷ ನಗದು ಹೊಂದಿದ್ದಾರೆ.ಅಲ್ಲದೇ ಶ್ರೇಯಸ್ ವಿವಿಧ ಬ್ಯಾಂಕ್ ನಲ್ಲಿ 6.23 ಲಕ್ಷ ಠೇವಣಿ ಹೊಂದಿದ್ದಾರೆ.
ಹಾಗೇ ಸ್ನೇಹಿತರು ಹಾಗು ಬಂಧುಗಳಿಂದ 50 ಲಕ್ಷ ಸಾಲ ಪಡೆದುಕೊಂಡಿದ್ದಾರೆ. ತಾಯಿಯಿಂದ 3.64 ಲಕ್ಷ ಹಾಗು ವ್ಯಕ್ತಿಯೊಬ್ಬರಿಂದ 88 ಲಕ್ಷ ಶ್ರೇಯಸ್ ಪತ್ನಿ ಅಕ್ಷತಾ ಸಾಲ ಪಡೆದಿರೋದಾಗಿ ಆಸ್ತಿ ವಿವರದಲ್ಲಿ ತಿಳಿಸಿದ್ದಾರೆ. ಇನ್ನು ಅಚ್ಚರಿಯ ವಿಚಾರ ಅಂದ್ರೆ ಶ್ರೇಯಸ್ ಪಟೇಲ್ ಪತ್ನಿ ಅಕ್ಷತಾಗಿಂದ ಹೆಚ್ಚು ಚಿನ್ನಾಭರಣ ಹೊಂದಿದ್ದಾರೆ.ಶ್ರೇಯಸ್ ಬಳಿ 59 ಲಕ್ಷದ 65 ಸಾವಿರ ರೂಪಾಯಿ ಬೆಲೆ ಬಾಳೋ ಚಿನ್ನಾಭರಣವಿದೆ. ಹಾಗೇ ಪತ್ನಿ ಅಕ್ಷತಾ ಬಳಿ 22 ಲಕ್ಷ ಬೆಲೆ ಬಾಳೊ 450 ಗ್ರಾಮ್ ಚಿನ್ನಾಭರಣ ಹಾಗೂ 1 kg ಬೆಳ್ಳಿಯಿದೆ. ಶ್ರೇಯಸ್ ಒಟ್ಟು 1ಕೋಟಿ 40 ಲಕ್ಷದ 96 ಸಾವಿರದ 246 ರೂ ಮೌಲ್ಯದ ಚರಾಸ್ಥಿ ಹೊಂದಿದ್ದಾರೆ.ಶ್ರೇಯಸ್ ಪತ್ನಿ ಹೆಸರಿನಲ್ಲಿ 31 ಲಕ್ಷದ 14 ಸಾವಿರದ 917 ರೂ ಮೌಲ್ಯದ ಚರಾಸ್ಥಿಯಿದೆ. ಶ್ರೇಯಸ್ 20 ಎಕರೆ ಕೃಷಿ ಭೂಮಿ ಒಡೆಯನಾಗಿದ್ದಾರೆ.ಬೆಂಗಳೂರು ಹಾಗು ಹೊಳೆನರಸೀಪುರ ದ ವಿವಿದೆಡೆ ಕೃಷಿಯೇತರ ಭೂಮಿ ಹೊಂದಿದ್ದಾರೆ ಎಂಬುವುದಾಗಿ ತಮ್ಮ ಆಸ್ತಿ ವಿವರದಲ್ಲಿ ತಿಳಿಸಿದ್ದಾರೆ.
ಒಟ್ಟು 39. ಕೋಟಿ 58 ಲಕ್ಷದ 6 ಸಾವಿರದ 482 ರೂ ಮೌಲ್ಯದ ಕೃಷಿಯೇತರ ಭೂಮಿ ಹಾಗು ವಾಣಿಜ್ಯ ಕಟ್ಟಡ ಹೊಂದಿದ್ದಾರೆ.ಪತ್ನಿ ಹೆಸರಿನಲ್ಲಿ ಬೆಂಗಳೂರಿನಲ್ಲಿ 1.36 ಕೋಟಿ ಬೆಲೆಬಾಳೋ ಒಂದು ನಿವೇಶನ ಹಾಗು ಮನೆ ಹೊಂದಿದ್ದಾರೆ ಶ್ರೇಯಸ್ ಪಟೇಲ್. ಪತ್ನಿ ಹೆಸರಿನಲ್ಲಿ ಒಟ್ಟು 1.68 ಕೋಟಿ ಚರ ಮತ್ತು ಸ್ಥಿರಾಸ್ಥಿಯಿದೆ. ಇದಲ್ಲದೇ ತನ್ನ ಹೆಸರಿನಲ್ಲಿ ಒಂದು ಇನ್ನೋವಾ ಕಾರು ಹಾಗೂ ಒಂದು ಟ್ರ್ಯಾಕ್ಟರ್ ಹೊಂದಿದ್ದಾರೆ ಶ್ರೇಯಸ್.
ತಮ್ಮ ಬಳಿ 65 ಸಾವಿರದ ಮೊಬೈಲ್ ಹಾಗು ಪತ್ನಿ ಬಳಿ 55 ಸಾವಿರದ ಮೊಬೈಲ್ ಹೊಂದಿರೊ ಬಗ್ಗೆ ಆಸ್ತಿ ವಿವರದಲ್ಲಿ ಶ್ರೇಯಸ್ ಪಟೇಲ್ ಘೋಷಣೆ ಮಾಡಿದ್ದಾರೆ.